ಸೇತುವೆ ಕುಸಿತ: ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಮಾಜಿ ಡಿಸಿಎಂ ಡಾ. ಪರಮೇಶ್ವರ

ತುಮಕೂರು: ಮಾಜಿ ಉಪಮುಖ್ಯಮಂತ್ರಿ ಹಾಗೂ ನಾಯಕ ಡಾ.ಜಿ.ಪರಮೇಶ್ವರ ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ವಿದ್ಯಮಾನವೊಂದು ನಡೆದಿದೆ. ಅವರು ಭಾಗಶಃ ಕುಸಿದಿದ್ದ ಸೇತುವೆಯೊಂದನ್ನು ವೀಕ್ಷಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ನಿನ್ನೆ, ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತುಮಕೂರು ಜಿಲ್ಲೆಯ ಗೊರವನಹಳ್ಳಿ-ತೀತಾ ರಸ್ತೆಯಲ್ಲಿನ ಸೇತುವೆಯೊಂದು ಭಾಗಶಃ ಕುಸಿದಿತ್ತು. ಮಾಹಿತಿ ಗೊತ್ತಾಗಿ ಸೇಉವೆ ಪರಿಸ್ಥಿತಿಯನ್ನು … Continued

ಧಾರಾಕಾರ ಮಳೆ: ಮನೆಯೊಳಗೆ ಬಂದು ಬೆಚ್ಚಗೆ ಮಲಗಿದ ಕರಡಿ…!

ತುಮಕೂರು: ಧಾರಾಕಾರ ಮಳೆಗೆ ಹೆದರಿಯೋ ಅಥವಾ ಮಳೆಯಿಂದ ರಕ್ಷಿಸಿಕೊಳ್ಳಲೋ ಕರಡಿಯೊಂದು ಓಡಿ ಬಂದು ಮನೆ ನಿರ್ಮಾನ ಹಂತದ ಮನೆಯೊಳಗೆ ಆಶ್ರ ಪಡೆದ ಪ್ರಸಂಗ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಿಡಗಲ್ಲು ಹೋಬಳಿ ದೇವಲಕೆರೆ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕಳೆದ ರಾತ್ರಿಯಿಂದಲೇ ಆ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯಿಂದ ರಕ್ಷಿಸಿಕೊಳ್ಳುವುದಕ್ಕೋ, ಅಥವಾ ವರುಣನ ಆರ್ಭಟಕ್ಕೆ … Continued

ವಶಕ್ಕೆ ಪಡೆದಿದ್ದ ಶಂಕಿತರನ್ನು ಬಿಟ್ಟು ಕಳುಹಿಸಿದ ಎನ್‌ಐಎ ಅಧಿಕಾರಿಗಳು

ಕಾರವಾರ: ಎನ್‌ಐಎ ಅಧಿಕಾರಿಗಳು ಭಟ್ಕಳ ( ಮತ್ತು ತುಮಕೂರಿನಲ್ಲಿ ವಶಕ್ಕೆ ಪಡೆದಿದ್ದ ಶಂಕಿತರನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಭಟ್ಕಳದ ಅಬ್ದುಲ್ ಮುಖ್ತದೀರ್ (30) ಹಾಗೂ ತುಮಕೂರಿನ ಶಂಕಿತನನ್ನು ಬಿಡುಗಡೆ ಮಾಡಿದ್ದಾರೆ. ಹೆಚ್ಚಿನ ವಿಚಾರಣೆಗೆ ದೆಹಲಿಗೆ ಬರುವಂತೆ ಎನ್‌ಐಎ ನೋಟಿಸ್‌ ನೀಡಿದ್ದಾರೆ. ಅಬ್ದುಲ್ ಮುಖ್ತದೀರ್ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮುಖ್ಯರಸ್ತೆ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ … Continued

ತುಮಕೂರು: ನಾಪತ್ತೆಯಾಗಿ ವಾರದ ಬಳಿಕ ಮರಳಿ ಮನೆ ಸೇರಿದ ಗಿಳಿ, 85 ಸಾವಿರ ರೂ. ಬಹುಮಾನ ನೀಡಿದ ಕುಟುಂಬ…!

ತುಮಕೂರು: ತಮ್ಮ ಕುಟುಂಬದ ಸದಸ್ಯನಾಗಿದ್ದ ಗಿಳಿಯೊಂದು ಜುಲೈ 16ರಂದು ನಾಪತ್ತೆಯಾದ ನಂತರ ಗಿಳಿಗಾಗಿ ಸಾಕಷ್ಟು ಹುಡುಕಾಡಿದ ಕುಟುಂಬ ನಗರದಲ್ಲಿ ಅಲ್ಲಲ್ಲಿ ಪೋಸ್ಟರ್‌ಗಳನ್ನು ಹಾಕಿ ಗಿಳಿ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ ಕೊಡುವುದಾಗಿ ಘೋಷಿಸಿತ್ತು. ಈಗ ಆ ಗಿಳಿ ಸಿಕ್ಕಿದ್ದು ಗಿಣಿ ಸಿಕ್ಕ ಖುಷಿಯಲ್ಲಿ ಹುಡುಕಿ ಕೊಟ್ಟವರಿಗೆ ಕುಟುಂಬವು 85 ಸಾವಿರ ರೂ.ಗಳ ಬಹುಮಾನ ಕೊಟ್ಟಿದೆ. ತುಮಕೂರಿನ … Continued

ತುಮಕೂರು: ಗಿಳಿ ಹುಡುಕಿಕೊಟ್ಟವರಿಗೆ 50,000 ರೂ. ಬಹುಮಾನ ಘೋಷಿಸಿದ ಕುಟುಂಬ..!

ತುಮಕೂರು: ರಾಜ್ಯದ ತುಮಕೂರಿನಲ್ಲಿ, ನಗರದಾದ್ಯಂತ ಕುತೂಹಲಕಾರಿ ಪೋಸ್ಟರ್‌ಗಳಲ್ಲಿ  ತಮ್ಮ ಪ್ರೀತಿಯ ಕುಟುಂಬದ ಸದಸ್ಯನಾಗಿದ್ದ  ನಾಪತ್ತೆಯಾದ ಸಾಕು ಗಿಳಿ ಪತ್ತೆಹಚ್ಚಲು ಸಹಾಯ ಮಾಡಿದವರಿಗೆ ₹ 50,000 ನಗದು ಬಹುಮಾನ ನೀಡುವುದಾಗಿ ಕುಟುಂಬವೊಂದು  ಹೇಳಿದೆ. ಈ ಕುಟುಂಬ ಕಳೆದ ಎರಡೂವರೆ ವರ್ಷಗಳಿಂದ ಗಿಳಿ ಕುಟುಂಬದ ಜೊತೆಗಿತ್ತು. ವರದಿಗಳ ಪ್ರಕಾರ, ಕುಟುಂಬವು ಪ್ರತಿ ವರ್ಷ ಜನ್ಮದಿನವನ್ನು ಗಿಳಿಯ ಆಚರಿಸುತ್ತಿತ್ತು. ಜುಲೈ … Continued

ತುಮಕೂರು: ಹರಿಯುವ ನೀರಿನ ಫೋಟೊ ತೆಗೆಯಲು ಹೋಗಿ ಚರಂಡಿಯಲ್ಲಿ ಕೊಚ್ಚಿ ಹೋದ ಆಟೊ ಚಾಲಕ

ತುಮಕೂರು: ಮಳೆಯಿಂದಾಗಿ ರೈಲ್ವೆ ಅಂಡರ್ ಪಾಸ್‌ನಲ್ಲಿ ನಿಂತಿದ್ದ ನೀರಿನ ಫೋಟೊ ತೆಗೆಯುವ ಆತುರದಲ್ಲಿ ಜಾರಿಬಿದ್ದು ಆಟೊ ಚಾಲಕರೊಬ್ಬರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಶನಿವಾರ ನಗರದ ಹೆಗಡೆ ಕಾಲೊನಿ ರೈಲ್ವೆ ಅಂಡರ್ ಪಾಸ್ ಸಮೀಪ ಸಂಭವಿಸಿದೆ. ಶಾಂತಿನಗರದ ಆಟೋ ಚಾಲಕ ಅಮ್ಜದ್ ಖಾನ್ (44) ನೀರಿನಲ್ಲಿ ಕೊಚ್ಚಿಕೊಂಡು ಹೋದವರು ಎಂದು ಹೇಳಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, … Continued

ಬಸ್-ಕಾರು ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಮೂವರ ಸಾವು

ತುಮಕೂರು: ಅತೀ ವೇಗವಾಗಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ಢಿಕ್ಕಿ ಹೊಡೆದುಕೊಂಡು ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ಗುರುವಾರ ಜಿಲ್ಲೆಯ ತಿಪಟೂರು ತಾಲೂಕಿನ ತಿಮ್ಮಲಾಪುರ ಮತ್ತಿಹಳ್ಳಿ ಗೇಟ್ ಬಿ ಎಚ್ ರಸ್ತೆಯಲ್ಲಿ ನಡೆದಿದೆ. ಗಾಯಗೊಂಡವರಿಗೆ ತಿಪಟೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿದರೆಗುಡಿಯಿಂದ ತಿಪಟೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ತಿಪಟೂರಿನಿಂದ ಅರಸೀಕೆರೆ ಕಡೆಗೆ … Continued

ಕಾರ್‌- ಕೆಎಸ್​​ಆರ್​​ಟಿಸಿ ಬಸ್​ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು, ಹಲವರಿಗೆ ಗಾಯ

ತುಮಕೂರು: ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರ್ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಶಿವಸಂದ್ರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಬಗ್ಗೆ ವರದಿಯಾಗಿದೆ. ಮೃತರನ್ನು ಚಿಕ್ಕನಾಯಕನಹಳ್ಳಿಯ ಗಿರೀಶ್ (32) ಹಾಗೂ ಮಾನ್ಯ (17) ಎಂದು ಗುರುತಿಸಲಾಗಿದೆ. ತುಮಕೂರು ಕಡೆಯಿಂದ ತೆರಳಿದ್ದ ಬಸ್, … Continued

ಗುಬ್ಬಿ: ಹಾಡಹಗಲೇ ದಲಿತ ಸಂಘರ್ಷ ಸಮಿತಿ ಮುಖಂಡ ನರಸಿಂಹಮೂರ್ತಿ ಬರ್ಬರ ಕೊಲೆ

ತುಮಕೂರು: ಹಾಡಹಗಲೇ ಮಚ್ಚು, ಲಾಂಗ್‌ನಿಂದ ಹಲ್ಲೆ ನಡೆಸಿ ದಲಿತ ಸಂಘರ್ಷ ಸಮಿತಿ ಮುಖಂಡ ನರಸಿಂಹಮೂರ್ತಿ (50) ಎಂಬುವರನ್ನು ಬರ್ಬರ ಕೊಲೆ ಮಾಡಿದ ಘಟನೆ ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ನಡೆದ ಬಗ್ಗೆ ವರದಿಯಾಗಿದೆ. ಗುಬ್ಬಿ ಪಟ್ಟಣದ ಬಿ.ಎಸ್‌.ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ ಹೆದ್ದಾರಿ ಪಕ್ಕದಲ್ಲಿ ಕೊಲೆ ನಡೆದಿದೆ. ಹೆದ್ದಾರಿ ಪಕ್ಕದಲ್ಲೇ ಟೀ … Continued

ಇಂಗ್ಲಿಷ್ ಕಲಿಕೆ ಕಷ್ಟವೆಂದು ಆತ್ಮಹತ್ಯೆಗೆ ಯತ್ನಿಸಿದ ಬಾಲಕ

ತುಮಕೂರು: ಇಂಗ್ಲಿಷ್​ ಓದಲು ಕಷ್ಟವಾಗುತ್ತದೆ ಎಂದು 7ನೇ ತರಗತಿ ವಿದ್ಯಾರ್ಥಿಯೊಬ್ಬ ವಿಷ ಕುಡಿದು ಆತ್ಮಹತ್ಯಗೆ ಯತ್ನಿಸಿದ ಘಟನೆ ಘಟನೆ ತುಮಕೂರಿನ ಊರ್ಡಿಗೆರೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಅಜಯ ಎಂಬ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕ, ಸದ್ಯ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಹೇಳಲಾಗಿದೆ. ಈತ ಊರ್ಡಿಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾನೆ. ಇಂಗ್ಲಿಷ್ ಓದಲು … Continued