ಅಂತಿಮ ಹಂತದಲ್ಲಿ ಸುರಂಗ ಕೊರೆಯುವ ಕಾರ್ಯಾಚರಣೆ : “ನಿಮ್ಮ ಬ್ಯಾಗ್‌ಗಳನ್ನು ರೆಡಿ ಇಟ್ಟುಕೊಳ್ಳಿ” ಎಂದು ಒಳಗೆ ಸಿಲುಕಿರುವ ಕಾರ್ಮಿಕರ ಕುಟುಂಬಗಳಿಗೆ ಸೂಚನೆ

ಉತ್ತರಕಾಶಿ: ಭೂ ಕುಸಿತದಿಂದಾಗಿ ಎರಡು ವಾರಗಳಿಂದ ಸುರಂಗದೊಳಗೆ ಸಿಕ್ಕಿಬಿದ್ದಿರುವ 41 ಕಾರ್ಮಿಕರ ಸಂಬಂಧಿಕರಿಗೆ “ಸಿದ್ಧರಾಗಿರಿ” ಎಂದು ಸೂಚಿಸಲಾಗಿದೆ. ಏಕೆಂದರೆ ಅವರನ್ನು ತಲುಪಲು ಕೆಲವೇ ಮೂರು ಮೀಟರ್ ಕೊರೆಯವುದು ಮಾತ್ರ ಬಾಕಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. “ಅವರ ಬಟ್ಟೆ ಮತ್ತು ಬ್ಯಾಗ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಿ” ಎಂದು ಅಧಿಕಾರಿಗಳು ಕುಸಿದ ಸುರಂಗದ ಹೊರಗೆ ಇರುವ ಕುಟುಂಬಗಳ ಸದಸ್ಯರಿಗೆ ಹೇಳಿದ್ದಾರೆ. … Continued

ಉತ್ತರಕಾಶಿ : 9 ದಿನಗಳಿಂದ ಸುರಂಗ ಕುಸಿದು ಸಿಕ್ಕಿಬಿದ್ದ ಕೆಲಸಗಾರರಿಗೆ 6 ಇಂಚಿನ ಅಗಲದ ಪೈಪ್ ಮೂಲಕ ಬಿಸಿಯಾದ ಆಹಾರ ರವಾನೆಗೆ ತಯಾರಿ

ಉತ್ತರಕಾಶಿ : ಉತ್ತರಕಾಶಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿನ ದೊಡ್ಡ ಪ್ರಗತಿಯಲ್ಲಿ, 6 ಇಂಚಿನ ಅಗಲದ ಪರ್ಯಾಯ ಪೈಪ್, ವಾರದ ಹಿಂದೆ ಸುರಂಗ ಕುಸಿದ ನಂತರ ಒಳಗೆ ಸಿಕ್ಕಿಬಿದ್ದ 41 ಕಾರ್ಮಿಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಸಿಕ್ಕಿಬಿದ್ದ ಕಾರ್ಮಿಕರಿಗೆ ಈ ಪೈಪ್‌ ಮೂಲಕ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಬಿಸಿಯಾದ ಆಹಾರವನ್ನು ಕಳುಹಿಸಲು ಅಧಿಕಾರಿಗಳು ಈಗ ತಯಾರಿ ನಡೆಸಿದ್ದಾರೆ. ಸಿಕ್ಕಿಬಿದ್ದ ಕಾರ್ಮಿಕರು ಎದುರಿಸುತ್ತಿರುವ … Continued

ಉತ್ತರಾಖಂಡ; ಸುರಂಗ ಕುಸಿತ, 40 ಕಾರ್ಮಿಕರು ಒಳಗೆ ಸಿಲುಕಿರುವ ಶಂಕೆ

ಉತ್ತರಕಾಶಿ : ಉತ್ತರಾಖಂಡ ರಾಜ್ಯದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತಗೊಂಡಿದೆ. ಸುರಂಗ ಮಾರ್ಗ ಕಾಮಗಾರಿಯಲ್ಲಿ ತೊಡಗಿದ್ದ ಸುಮಾರು 40 ಕಾರ್ಮಿಕರು ಅದರ ಒಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಕಾರ್ಮಿಕರನ್ನು ರಕ್ಷಣೆ ಮಾಡಲು ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಉತ್ತರಕಾಶಿಯಲ್ಲಿ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಸುರಂಗ ಮಾರ್ಗ ನಿರ್ಮಾಣ ಮಾಡಲಾಗುತ್ತಿತ್ತು. ಭಾನುವಾರ ಮುಂಜಾನೆ ಈ ಸುರಂಗ ಮಾರ್ಗದ ಒಂದು … Continued

ನಮಾಮಿ ಗಂಗೆ ಯೋಜನಾ ಸ್ಥಳದಲ್ಲಿ ಟ್ರಾನ್ಸ್‌ಫಾರ್ಮರ್ ಸ್ಫೋಟ : 15 ಮಂದಿ ಸಾವು, ಹಲವರಿಗೆ ಗಾಯ

ನವದೆಹಲಿ: ಉತ್ತರಾಖಂಡದ ಚಮೋಲಿಯಲ್ಲಿ ಅಲಕನಂದಾ ನದಿಯ ದಡದಲ್ಲಿ ಸೇತುವೆಯನ್ನು ವಿದ್ಯುದ್ದೀಕರಿಸಿದ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡ ಪರಿಣಾಮ ಪೊಲೀಸ್ ಅಧಿಕಾರಿ ಸೇರಿದಂತೆ ಹದಿನೈದು ಜನರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆ ಆರಂಭಿಸಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ವಾಚ್‌ಮನ್ ವಿದ್ಯುತ್ … Continued

ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಭಾರತದ ವಿಕೆಟ್‌ ಕೀಪರ್‌-ಬ್ಯಾಟರ್‌ ರಿಷಬ್ ಪಂತಗೆ ಗಂಭೀರ ಗಾಯ

ನವದೆಹಲಿ: ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್‌ ರಿಷಬ್ ಪಂತ್ ದೆಹಲಿಯಿಂದ ಉತ್ತರಾಖಂಡಕ್ಕೆ ಹಿಂತಿರುಗುತ್ತಿದ್ದಾಗ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ಬಿಎಂಡಬ್ಲ್ಯು ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ನರ್ಸನ್ ಗಡಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ದೆಹಲಿ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಾಗ … Continued

ಉತ್ತರಾಖಂಡ: ‘ಮತಾಂತರ’ ಆರೋಪದ ಮೇಲೆ ಕ್ರಿಸ್‌ಮಸ್ ಆಚರಣೆಗೆ ಅಡ್ಡಿಪಡಿಸಿದ ಗುಂಪು

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಪುರೋಲಾ ಗ್ರಾಮದಲ್ಲಿ ಶುಕ್ರವಾರ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಬಲವಂತದ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕನಿಷ್ಠ 30 ಯುವಕರ ತಂಡವೊಂದು ದೊಣ್ಣೆ ಹಿಡಿದು ದಾಳಿ ನಡೆಸಿದೆ ಎಂದು ವರದಿಯಾಗಿದೆ. ಹಿಂದೂ ಸಂಘಟನೆಯೆಂದು ಹೇಳಿಕೊಳ್ಳುವ ವ್ಯಕ್ತಿಗಳಿಂದ ಹಲ್ಲೆಗೊಳಗಾದ ಪಾಸ್ಟರ್ ಲಾಜರಸ್ ಕಾರ್ನೆಲಿಯಸ್ ಮತ್ತು ಅವರ ಪತ್ನಿ ಸುಷ್ಮಾ ಕಾರ್ನೇಲಿಯಸ್ ಸೇರಿದಂತೆ ಆರು ಜನರನ್ನು … Continued

ಕೇದಾರನಾಥ ಬಳಿ ಯಾತ್ರಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನ: 7 ಮಂದಿ ಸಾವು

ಕೇದಾರನಾಥ : ಮಂಗಳವಾರ(ಅಕ್ಟೋಬರ್ 18), ಉತ್ತರಾಖಂಡದ ಕೇದಾರನಾಥದ ಲಿಂಚೋಲಿ ಪ್ರದೇಶದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಟೇಕಾಫ್ ಆದ ಕೂಡಲೇ ಪತನಗೊಂಡಿದೆ. ಪ್ರಯಾಣಿಸುತ್ತಿದ್ದ 2 ಪೈಲಟ್‌ಗಳು ಮತ್ತು 5 ಪ್ರಯಾಣಿಕರು ಸೇರಿದಂತೆ ಏಳು ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ. ಕೇದಾರನಾಥ ಕ್ಷೇತ್ರಕ್ಕೆ ಯಾತ್ರಿಗಳನ್ನು ಕರೆದುಕೊಂಡು … Continued

ಉತ್ತರಾಖಂಡದಲ್ಲಿ ನಡೆದ ಉತ್ತರ ಪ್ರದೇಶ ಪೊಲೀಸರು-ಗಣಿಗಾರಿಕೆ ಮಾಫಿಯಾ ನಡುವೆ ಗುಂಡಿನ ಚಕಮಕಿ ವೇಳೆ ಬಿಜೆಪಿ ನಾಯಕನ ಪತ್ನಿ ಸಾವು

ಉತ್ತರಾಖಂಡದ ಜಸ್ಪುರ್‌ನಲ್ಲಿ ಬುಧವಾರ ನಡೆದ ಕ್ರಾಸ್‌ಫೈರಿಂಗ್‌ನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಗುರ್ತಾಜ್ ಭುಲ್ಲರ್ ಅವರ ಪತ್ನಿ ಗುರುಪ್ರೀತ್ ಕೌರ್ ಅವರು ಸಾವಿಗೀಡಾಗಿದ್ದಾರೆ. ಗಣಿಗಾರಿಕೆ ಮಾಫಿಯಾ ಜಾಫರ್‌ನನ್ನು ಹಿಡಿಯಲು ಉತ್ತರ ಪ್ರದೇಶ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಮೊರಾದಾಬಾದ್ ಪೊಲೀಸರು ಜಾಫರ್‌ನನ್ನು ಹಿಡಿಯಲು ಜಸ್ಪುರ್‌ಗೆ ತೆರಳಿದಾಗ ಗುಂಡಿನ ಚಕಮಕಿ ನಡೆದಿದೆ. ಇದು ಇಬ್ಬರು ಪೊಲೀಸ್ … Continued

ನೋಡನೋಡುತ್ತಿದ್ದಂತೆಯೇ ನೀರಿನದಲ್ಲಿ ಕೊಚ್ಚಿಹೋದ ಶಾಲಾ ಬಸ್‌ | ವೀಕ್ಷಿಸಿ

ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಬೀಳುತ್ತಿದೆ. ರಾಜ್ಯದಲ್ಲಿ ಮಳೆಯಿಂದಾಗಿ ನದಿಗಳು ಮತ್ತು ಚರಂಡಿಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ ಭೂಕುಸಿತದ ವರದಿಯಾಗಿದೆ. ಏತನ್ಮಧ್ಯೆ, ಚಂಪಾವತ್ ಪ್ರದೇಶದಲ್ಲಿ ಮಂಗಳವಾರ ಚಂಪಾವತ್‌ನಲ್ಲಿ ಭಾರಿಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಶಾಲಾ ವಾಹನವೊಂದು ಬಲವಾದ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ತನಕ್‌ಪುರದ ಕಿರೋರಾ ಮಳೆಗಾಲದ ಹಳ್ಳದಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯರ ನೆರವಿನಿಂದ … Continued

ಐದು ರಾಜ್ಯಗಳ ಚುನಾವಣೆ: ಸಮಾವೇಶ, ರೋಡ್​ ಶೋಗೆ ನಿರ್ಬಂಧ ಜನವರಿ 22ರ ವರೆಗೆ ವಿಸ್ತರಣೆ

ನವದೆಹಲಿ: ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿರುವ ಐದು ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳ ನಾಯಕರು ಸಾರ್ವಜನಿಕ ಸಭೆ, ರೋಡ್​ ಶೋ, ಪ್ರಚಾರ ಸಭೆಗಳನ್ನು ನಡೆಸಲು ವಿಧಿಸಲಾಗಿದ್ದ ನಿರ್ಬಂಧದ ಅವಧಿಯನ್ನು ಇಂದು ಚುನಾವಣಾ ಆಯೋಗ ಜನವರಿ 22ರವರೆಗೂ ವಿಸ್ತರಣೆ ಮಾಡಿದೆ. ಜನವರಿ 8ರಂದು ಸುದ್ದಿಗೋಷ್ಠಿ ನಡೆಸಿದ್ದ ಚುನಾವಣಾ ಆಯೋಗ, ಕೊವಿಡ್​ 19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಐದು ರಾಜ್ಯಗಳಲ್ಲಿ … Continued