ಮಗ ಸತ್ತಿದ್ದಾನೆಂದು ಭಾವಿಸಿ 44 ವರ್ಷಗಳಿಂದ ಬೇರ್ಪಟ್ಟಿದ್ದ ತಾಯಿ-ಮಗನನ್ನು ಒಂದಗೂಡಿಸಿದ ಫೇಸ್‌ಬುಕ್‌…!

ಫೇಸ್‌ಬುಕ್ ಪುಟವೊಂದು ಇತ್ತೀಚೆಗೆ 44 ವರ್ಷಗಳ ಕಾಲ ಬೇರ್ಪಟ್ಟಿದ್ದ ತಾಯಿ ಮತ್ತು ಮಗನನ್ನು ಒಂದುಗೂಡಿಸಿದೆ..! ತಾಯಿ ತನ್ನ ಮಗ ಸತ್ತು ಹೋಗಿದ್ದಾನೆಂದು ಭಾವಿಸಿದ್ದಳು.
ಸಿಬಿಎಸ್ ನ್ಯೂಸ್ ಪ್ರಕಾರ, ವಿಸ್ಸಾಮ್ ಮೊಹಮ್ಮದ್ ಜೋರ್ಡಾನ್‌ನಲ್ಲಿ ಈಜಿಪ್ಟ್ ತಾಯಿ ಮತ್ತು ಜೋರ್ಡಾನ್ ತಂದೆಗೆ ಜನಿಸಿದರು, ತಂದೆ-ತಾಯಿ ಆ ಸಮಯದಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದರು. ಮೊಹಮ್ಮದ್ ಜನಿಸಿದ ಕೇವಲ ಎರಡು ವಾರಗಳ ನಂತರ, ಅನಾರೋಗ್ಯಕ್ಕೆ ಒಳಗಾದ ಮತ್ತು ಆಗ ಅವರ ತಂದೆ ಆಸ್ಪತ್ರೆಯಲ್ಲಿ ಮಗು ಸಾವಿಗೀಡಾಗಿದೆ ಎಂದು ತಮ್ಮ ಅಂದಿನ ಹೆಂಡತಿಗೆ ಹೇಳಲು ನಿರ್ಧರಿಸಿ ಹಾಗೆಯೇ ಹೇಳಿದರು. ಯಾಕೆಂದರೆ ಅವಳು ಮಗನನ್ನು ತನ್ನೊಂದಿಗೆ ಕರೆದುಕೊಂಡು ಹೋಗಬಹುದೆಂದು ತಂದೆ ಹೆದರುತ್ತಿದ್ದರು ಎಂದು ಮೊಹಮದ್ CBS ನ್ಯೂಸ್‌ಗೆ ತಿಳಿಸಿದ್ದಾರೆ. ಅವರ ಪೋಷಕರ ವಿಚ್ಛೇದನವು ಅಂತಿಮವಾದ ನಂತರ, ತಂದೆಯ ಮಾತನ್ನು ನಂಬಿದ ತಾಯಿ ತನ್ನ ಮಗು ಸತ್ತಿದೆ ಎಂದು ಭಾವಿಸಿ ಈಜಿಪ್ಟ್‌ನ ಕೈರೋಗೆ ಮರಳಿದರು ಎಂದು ಮೊಹಮ್ಮದ್‌ ಹೇಳಿದ್ದಾರೆ.

ಮೊಹಮ್ಮದ್ ಅವರು ತಾಯಿಯ ಬಗ್ಗೆ ಬಹಳ ಕಡಿಮೆ ತಿಳಿದಿದ್ದರು ಮತ್ತು ತಾಯಿ ಸತ್ತಿರಬಹುದು ಎಂದು ಭಾವಿಸಿದ್ದರು. ಆದಾಗ್ಯೂ, ತಾಯಿಯ ಮರಣ ಪ್ರಮಾಣಪತ್ರ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರ ವಕೀಲರು ಹೇಳಿದ ನಂತರ ತಾಯಿ ಇನ್ನೂ ಜೀವಂತವಾಗಿರಬಹುದು ಎಂದು ನಾಲ್ಕು ವರ್ಷಗಳ ಹಿಂದೆ ಅವರಿಗೆ ಮೊದಲ ಬಾರಿಗೆ ಅನಿಸಿತು. ಹೀಗಾಗಿ ಮೊಹಮ್ಮದ್ ಈಜಿಪ್ಟ್‌ಗೆ ಒಂದೆರಡು ಬಾರಿ ಪ್ರಯಾಣಿಸಿ ತಾಯಿಯನ್ನು ಹುಡುಕಲು ಪ್ರಯತ್ನಿದರು, ಆದರೆ ವಿಫಲರಾದರು.
ನಂತರ, ಜೋರ್ಡಾನ್‌ನಲ್ಲಿರುವ ಅವರ ಚಿಕ್ಕಮ್ಮಳಿಗೆ ಮೊಹಮ್ಮದ್ ತಾಯಿಯ ಕೆಲವು ಹಳೆಯ ಫೋಟೋಗಳು ಸಿಕ್ಕಿತು. ಇದು ತಮ್ಮ ತಾಯಿ ಭೇಟಿ ಮಾಡಲು ಪ್ರಯತ್ನಿಸುವುದಕ್ಕೆ ಮೊಹಮ್ಮದ್‌ ಅವರಿಗೆ ಮತ್ತಷ್ಟು ಪ್ರೇರೇಪಣೆ ನೀಡಿತು. 44 ವರ್ಷ ವಯಸ್ಸಿನ ಮೊಹಮ್ಮದ್‌ ನಂತರ ಚಿಕ್ಕಮ್ಮ ಆ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದರು, ಅದರ ನಂತರ ಅವರ ಸ್ನೇಹಿತರೊಬ್ಬರು ಈಜಿಪ್ಟ್ ಮೂಲದ ಫೇಸ್ಬುಕ್ ಗುಂಪು “ಮಿಸ್ಸಿಂಗ್ ಚಿಲ್ಡ್ರನ್” ಅನ್ನು ಸಂಪರ್ಕಿಸಿದರು ಎಂದು ಔಟ್ಲೆಟ್‌ಗೆ ತಿಳಿಸಿದರು,

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

2015ರಲ್ಲಿ ಈ ಫೇಸ್‌ಬುಕ್ ಪುಟ ಸ್ಥಾಪಿಸಿದ ಇಂಜಿನಿಯರ್ ರಾಮಿ ಎಲ್-ಗೆಬಾಲಿ ಅವರು, ನಂತರ ಮೊಹಮ್ಮದ್ ಅವರು ತಮ್ಮ ತಾಯಿಯನ್ನು ಹುಡುಕುತ್ತಿದ್ದಾರೆ ಎಂದು ವಿವರಿಸುವ ಫೇಸ್‌ಬುಕ್‌ ಪೋಸ್ಟ್ ಬರೆದರು, ಜೊತೆಗೆ ಮೊಹಮ್ಮದ್‌ ಫೋಟೋವನ್ನು ಅದಕ್ಕೆ ಸೇರಿಸಿದರು ಮತ್ತು ಅದನ್ನು ಡಿಸೆಂಬರ್ 6 ರಂದು ಆನ್‌ಲೈನ್‌ನಲ್ಲಿ ಹಂಚಿಕೊಂಡರು.ಈ ಪುಟದ ಮೂಲಕ 24 ಗಂಟೆಗಳ ಒಳಗೆ ಮೊಹಮ್ಮದ್ ಅವರ ತಾಯಿ ಈಜಿಪ್ಟ್‌ನಲ್ಲಿ ಎಲ್ಲಿ ನೆಲೆಗೊಂಡಿದ್ದಾರೆ ಎಂಬುದು ಗೊತ್ತಾಯಿತು ಮತ್ತು ತಾಯಿ ಮೊಹಮದ್ ಅವರನ್ನು ಭೇಟಿ ಮಾಡಲು ಕೈರೋಗೆ ಬಂದರು.
ಸಿಬಿಎಸ್ ನ್ಯೂಸ್ ಪ್ರಕಾರ, ಮೊಹಮ್ಮದ್ ದೀರ್ಘ ಕಾಲದಿಂದ ಕಳೆದುಕೊಂಡಿದ್ದ ತನ್ನ ತಾಯಿಯನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾದರು. “ನಾನು ಸತ್ತಿದ್ದೇನೆ ಎಂದು ನೀವು ಭಾವಿಸಿದ್ದೀರಾ?” ಎಂದು ಮೊಹಮ್ಮದ್‌ ತನ್ನ ತಾಯಿಯನ್ನು ತಬ್ಬಿಕೊಂಡು ಕೇಳಿದರು. “ಅವರು (ಮೊಹಮ್ಮದ್‌ ತಂದೆ) ನನಗೆ ಹಾಗೆ ಹೇಳಿದರು ಎಂದು ತಾಯಿ ಹೇಳಿದರು. “ಕ್ಷಮಿಸಿ, ನಾನು 20 ವರ್ಷಗಳಿಂದ ನಿಮ್ಮನ್ನು ಹುಡುಕುತ್ತಿದ್ದೇನೆ” ಎಂದು ಮೊಹಮ್ಮದ್‌ ಉತ್ತರಿಸಿದರು.
ಔಟ್ಲೆಟ್‌ನೊಂದಿಗೆ ಮಾತನಾಡಿದ ಮೊಹಮ್ಮದ್ ಅವರು ತಮ್ಮ ತಾಯಿಯನ್ನು ನೋಡುವ ಭರವಸೆಯನ್ನು ಎಂದಿಗೂ ಕಳೆದುಕೊಂಡಿರಲಿಲ್ಲ. ಕಳೆದ 20 ವರ್ಷಗಳಿಂದ, ನಾನು ಅವಳನ್ನು ಹುಡುಕುತ್ತಿದ್ದೆ, ಹಾಗೂ ಅವಳು ಸಿಕ್ಕೇ ಸಿಗುತ್ತಾಳೆಂದು ನಾನು ಯಾವಾಗಲೂ ನಂಬಿದ್ದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement