ವೀಡಿಯೊ..| ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದ ಬಿಜೆಪಿಯ ಓಂ ಬಿರ್ಲಾ

ನವದೆಹಲಿ: ಇಂದು ಬುಧವಾರ (ಜೂನ್‌ ೨೬) ನಡೆದ ಚುನಾವಣೆಯಲ್ಲಿ ಬಿಜೆಪಿಯ ಓಂ ಬಿರ್ಲಾ ಅವರು ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಓಂ ಬಿರ್ಲಾ ಅವರನ್ನು ಲೋಕಸಭೆಯ ಸ್ಪೀಕರ್ ಕುರ್ಚಿಗೆ ಕರೆದೊಯ್ದರು.
ಲೋಕಸಭೆ ಸ್ಪೀಕರ್ ಆಯ್ಕೆಗೆ ಮೊದಲ ಬಾರಿಗೆ ಮತದಾನ ನಡೆದಿದೆ. ಅವಿರೋಧವಾಗಿ ಸ್ಪೀಕರ್ ಆಯ್ಕೆ ಮಾಡುವ ಸಂಪ್ರದಾಯ ಷರತ್ತುಗಳ ಕಾರದಿಂದ ಮುರಿಯಿತು. ಸಾಂಪ್ರದಾಯಿಕವಾಗಿ, ಲೋಕಸಭೆಯ ಸ್ಪೀಕರ್ ಮತ್ತು ಉಪಸಭಾಪತಿಯನ್ನು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವಿನ ಒಮ್ಮತದ ಮೂಲಕ ಆಯ್ಕೆ ಮಾಡಲಾಗುತ್ತಿತ್ತು.
ಡೆಪ್ಯುಟಿ ಸ್ಪೀಕರ್‌ ಸ್ಥಾನ ತಮಗೆ ನೀಡಿದರೆ ಮಾತ್ರ ಸ್ಪೀಕರ್‌ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲು ಬೆಂಬಲ ನೀಡುತ್ತೇವೆ ಎಂದು ಪ್ರತಿಪಕ್ಷಗಳು ಷರತ್ತುಗಳನ್ನು ಹಾಕಿದ್ದು, ಅದಕ್ಕೆ ಆಡಳಿತ ಪಕ್ಷಗಳು ಒಪ್ಪದ ಕಾರಣ ಚುನಾವಣೆ ನಡೆಯುವಂತಾಯಿತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಓಂ ಬಿರ್ಲಾ ಅವರನ್ನು ಆಯ್ಕೆ ಮಾಡುವ ಪ್ರಸ್ತಾಪವನ್ನು ಮಂಡಿಸಿದರು. ಅದಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅನುಮೋದಿಸಿದರು. ಪ್ರತಿಪಕ್ಷಗಳು ಕೆ.ಸುರೇಶ ಹೆಸರನ್ನು ಪ್ರಸ್ತಾಪಿಸಿದವು.
ಧ್ವನಿ ಮತದಿಂದ ನಡೆದ ಸ್ಪೀಕರ್‌ ಆಯ್ಕೆಯಲ್ಲಿ ರಾಜಸ್ಥಾನದ ಕೋಟಾದಿಂದ ಮೂರು ಬಾರಿ ಸಂಸದರಾಗಿರುವ ಬಿಜೆಪಿಯ ಓಂ ಬಿರ್ಲಾ ಅವರು ಕೇರಳದ ಮಾವೇಲಿಕರದಿಂದ ಎಂಟು ಅವಧಿಗೆ ಸಂಸದರಾಗಿರುವ ಕಾಂಗ್ರೆಸ್‌ನ ಕೋಡಿಕುನ್ನಿಲ್ ಸುರೇಶ್ ವಿರುದ್ಧ ಜಯಗಳಿಸಿದ್ದಾರೆ. ಸುರೇಶ ಅವರು 18ನೇ ಲೋಕಸಭೆಯಲ್ಲಿ ಸುದೀರ್ಘ ಅವಧಿಯ ಸಂಸದರಾಗಿದ್ದಾರೆ.ಕಾಂಗ್ರೆಸ್ ಸಂಸದ ಕೆ.ಸುರೇಶ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ ವಿಪಕ್ಷಗಳು ಸ್ಪರ್ಧಿಸದಿರಲು ನಿರ್ಧರಿಸಿದ ನಂತರ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಅವರು ಓಂ ಬಿರ್ಲಾ ಅವರ ಆಯ್ಕೆಯನ್ನು ಘೋಷಿಸಿದರು.

ಕಳೆದ 25 ವರ್ಷಗಳಲ್ಲಿ ಲೋಕಸಭೆಯಲ್ಲಿ ಸ್ಪೀಕರ್‌ ಸ್ಥಾನಕ್ಕೆ ಮರು ಆಯ್ಕೆಯಾದ ಮೊದಲ ಸಂಸದರಾಗಿದ್ದಾರೆ. ಬಿರ್ಲಾ ಅವರು ಕೋಟಾ ಸಂಸದೀಯ ಸ್ಥಾನವನ್ನು 41,139 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸ್ಪೀಕರ್‌ ಆಗಿ ಆಯ್ಕೆಯಾದ ಓಂ ಬಿರ್ಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸ್ಪೀಕರ್‌ ಸ್ಥಾನಕ್ಕೆ ಕರೆತಂದರು.

ಪ್ರಮುಖ ಸುದ್ದಿ :-   ಪಾಕಿಸ್ತಾನದಿಂದ ಪರಮಾಣು ಬೆದರಿಕೆ ಇಲ್ಲ ; ಅಮೆರಿಕ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿಲ್ಲ : ವಿದೇಶಾಂಗ ಕಾರ್ಯದರ್ಶಿ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement