ಲಕ್ನೋ: ವೇಗವಾಗಿ ಬಂದ ಎಸ್ ಯುವಿ ಡಿಕ್ಕಿ ಹೊಡೆದ ನಂತರ ಸ್ಕೂಟರ್ ಅನ್ನು ಎಳೆದುಕೊಂಡು ಹೋಗುತ್ತಿರುವ ಆಘಾತಕಾರಿ ವೀಡಿಯೊ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ವೀಡಿಯೊದಲ್ಲಿ ಕಾರು ಸ್ಕೂಟರ್ ಅನ್ನು ಎಳೆದೊಯ್ಯುತ್ತಿರುವಾಗ ಕಿಡಿಯನ್ನು ಹೊರಸೂಸುತ್ತಿರುವುದನ್ನು ಕಾಣಬಹುದು.
ಘಟನೆ ಭಾನುವಾರ ನಡೆದಿದ್ದು, ಕಾರು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ವಾರಾಣಸಿ ನಿವಾಸಿಯಾಗಿರುವ ಇಂಜಿನಿಯರ್ ಬ್ರಜೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಘಟನೆ ಲಕ್ನೋದ ಲುಲು ಮಾಲ್ ಬಳಿ ನಡೆದಿದೆ ಎಂದು ವರದಿಯಾಗಿದೆ.
ಸ್ಕೂಟರ್‌ಗೆ ಡಿಕ್ಕಿಯಾದ ನಂತರ ಸ್ಕೂಟಿಯಲ್ಲಿದ್ದವರು ಅಪಘಾತದ ರಭಸಕ್ಕೆ ಗಾಳಿಯಲ್ಲಿ ಹಾರಿ ಬಿದ್ದಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಸ್ಕೂಟರ್ ಎಸ್‌ಯುವಿಯ ಚಕ್ರಗಳ ಕೆಳಗೆ ಸಿಲುಕಿಕೊಂಡಿತು ಮತ್ತು ಕಾರು ಅದನ್ನು ಸುಮಾರು 11 ಕಿಲೋಮೀಟರ್ ದೂರದ ವರೆಗೆ ಎಳೆದೊಯ್ದಿತು ಎಂದು ಹೇಳಲಾಗಿದೆ. ಆರೋಪಿ ಇಂಜಿನಿಯರ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಖಾಸಗಿ ವಲಯದ ಉದ್ಯೋಗಿಯಾಗಿರುವ ಹಜರತ್‌ಗಂಜ್ ನಿವಾಸಿ ಮನೀಶ ಸಿಂಗ್ ಎಂಬವರು ತಮ್ಮ ಸಹೋದರಿ ತನು ಅವರೊಂದಿಗೆ ಸ್ಕೂಟರ್‌ನಲ್ಲಿ ಟೆಲಿಬಾಗ್‌ಗೆ ಹೋಗುತ್ತಿದ್ದಾಗ ಲಕ್ನೋದ ಲುಲು ಮಾಲ್ ಬಳಿ ಅಪಘಾತ ಸಂಭವಿಸಿದೆ.
ಅನೇಕ ದಾರಿಹೋಕರ ವಾಹನಗಳು ಎಸ್‌ಯುವಿ ಡಿಕ್ಕಿ ಹೊಡೆಯವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ವೇಗವಾಗಿ ಬಂದ ವಾಹನವನ್ನು ತಡೆಯಲು ಪ್ರಯತ್ನಿಸಿದರು ಆದರೆ ಬ್ರಜೇಶ್ ನಿಲ್ಲಿಸಲಿಲ್ಲ.
ಸುಮಾರು 11 ಕಿಲೋಮೀಟರ್ ನಂತರ ಅಲ್ಲಿ ಆರೋಪಿಯನ್ನು ಹಿಡಿಯಲು ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಹೆಚ್ಚುವರಿ ಇನ್ಸ್‌ಪೆಕ್ಟರ್ ಬಲರಾಮ ಸಿಂಗ್ ಅವರ ಪ್ರಕಾರ, ಮನೀಶ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಗಾಜಿಯಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಘಟನೆ ವೇಳೆ ಅವರು ಕೆಲಸಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ
ನಿಮ್ಮ ಕಾಮೆಂಟ್ ಬರೆಯಿರಿ