ಪಶ್ಚಿಮ ಬಂಗಾಳ ಚುನಾವಣೆ : ಬಿಜೆಪಿಗೆ ಸೇರ್ಪಡೆಯಾದ ಟೆನ್ನಿಸ್ ದಿಗ್ಗಜ ಲಿಯಾಂಡರ್ ಪೇಸ್

ನವದೆಹಲಿ: 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಖ್ಯಾತ ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು ಮಂಗಳವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಿದ್ದಾರೆ.
ಕೇಂದ್ರ ಸಚಿವ ಕಿರಣ ರಿಜಿಜು ಮತ್ತು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಕಾಂತ ಮಜುಂದಾರ್ ಅವರ ಸಮ್ಮುಖದಲ್ಲಿ ಲಿಯಾಂಡರ್‌ ಪೇಸ್ ಕೇಸರಿ ಅವರು ಬಿಜೆಪಿಗೆ ಸೇರ್ಪಡೆಗೊಂಡರು.
ಪೇಸ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಕಿರಣ್ ರಿಜಿಜು, 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಪೇಸ್ ತೋರಿದ ಅದ್ಭುತ ಪ್ರದರ್ಶನವನ್ನು ಸ್ಮರಿಸಿದರು. “ಆ ಸಮಯದಲ್ಲಿ ಭಾರತದ ಹೆಸರು ಪದಕ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾಗಿತ್ತು. ಲಿಯಾಂಡರ್ ಪೇಸ್ ಅವರು ಮೊದಲ ಬಾರಿಗೆ ಭಾರತವನ್ನು ಒಲಿಂಪಿಕ್ ಭೂಪಟದಲ್ಲಿ ಗುರುತಿಸುವಂತೆ ಮಾಡಿದರು. ಈಗ ಅವರು ಬಿಜೆಪಿ ವೇದಿಕೆಯ ಮೂಲಕ ದೇಶದ ಸೇವೆ ಮಾಡಲಿದ್ದಾರೆ,” ಎಂದು ರಿಜಿಜು ಹೇಳಿದರು.
ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಮಾತನಾಡಿ, ಪೇಸ್ ಅವರ ಆಗಮನದಿಂದ ರಾಜ್ಯದಲ್ಲಿ ಪಕ್ಷವು ಮತ್ತಷ್ಟು ಬಲಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

‘ದೇಶ ಮತ್ತು ಯುವಜನತೆಯ ಸೇವೆ ನನ್ನ ಗುರಿ’
ಬಿಜೆಪಿ ಸೇರಿದ ಬಳಿಕ ಭಾವುಕರಾದ ಲಿಯಾಂಡರ್ ಪೇಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, “ನನ್ನ ಜೀವನದ 40 ವರ್ಷಗಳನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದೇನೆ. ಡೇವಿಸ್ ಕಪ್ ಮತ್ತು ಒಲಿಂಪಿಕ್ಸ್ ಮೂಲಕ ಭಾರತಕ್ಕೆ ಗೌರವ ತಂದಿದ್ದೇನೆ. ಈಗ ಇದು ಹೊಸ ಕ್ಷೇತ್ರ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ನಿತಿನ್ ನಬಿನ್ ಅವರು ನನಗೆ ನೀಡಿರುವ ಈ ಅವಕಾಶಕ್ಕೆ ನಾನು ಚಿರಋಣಿ. ಈ ಸದಸ್ಯತ್ವದ ಕಾರ್ಡ್‌ ಕೇವಲ ಕಾಗದವಲ್ಲ, ಇದು ದೇಶದ ಸೇವೆ ಮಾಡಲು ನನಗೆ ಸಿಕ್ಕ ಜವಾಬ್ದಾರಿ ಎಂದು ಹೇಳಿದರು.
ಯಾರು ಈ ಲಿಯಾಂಡರ್ ಪೇಸ್?
ಲಿಯಾಂಡರ್ ಪೇಸ್ ಕೇವಲ ಕ್ರೀಡಾಪಟುವಲ್ಲ, ಭಾರತದ ಹೆಮ್ಮೆ. ಅವರು ಒಟ್ಟು 18 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ (ಪುರುಷರ ಡಬಲ್ಸ್‌ನಲ್ಲಿ 8 ಮತ್ತು ಮಿಕ್ಸೆಡ್ ಡಬಲ್ಸ್‌ನಲ್ಲಿ 10). ಡಬಲ್ಸ್‌ನಲ್ಲಿ 5 ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ.1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.
ಇದು ಪೇಸ್ ಅವರ ಎರಡನೇ ರಾಜಕೀಯ ಇನ್ನಿಂಗ್ಸ್. 2021ರಲ್ಲಿ ಅವರು ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ (TMC) ಸೇರಿದ್ದರು.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಬಿಜೆಪಿಗೆ ಲಿಯಾಂಡರ್‌ ಪೇಸ್ ಏಕೆ ಮುಖ್ಯ?
ಪಶ್ಚಿಮ ಬಂಗಾಳದಲ್ಲಿ, ವಿಶೇಷವಾಗಿ ಕೋಲ್ಕತ್ತಾ ಮತ್ತು ದಕ್ಷಿಣ ಬಂಗಾಳದ ನಗರ ಪ್ರದೇಶಗಳಲ್ಲಿ ಬಿಜೆಪಿ ಇದುವರೆಗೆ ಸಂಕಷ್ಟ ಎದುರಿಸುತ್ತಿದೆ. ನಗರ ಪ್ರದೇಶದ ಸುಶಿಕ್ಷಿತ ಮತ್ತು ಮಧ್ಯಮ ವರ್ಗದ ಮತದಾರರನ್ನು ಸೆಳೆಯಲು ಬಿಜೆಪಿಗೆ ಒಬ್ಬ ಪ್ರಭಾವಿ ‘ಮುಖ’ದ ಅಗತ್ಯವಿತ್ತು. ಈ ಹಿಂದೆ ಸೌರವ್ ಗಂಗೂಲಿ ಬಿಜೆಪಿ ಸೇರುತ್ತಾರೆ ಎಂಬ ವದಂತಿ ಇತ್ತಾದರೂ, ಅವರು ರಾಜಕೀಯದಿಂದ ದೂರ ಉಳಿದರು. ಈಗ ಪೇಸ್ ಆ ಸ್ಥಾನವನ್ನು ತುಂಬುವ ನಿರೀಕ್ಷೆಯಿದೆ. 2016 ಮತ್ತು 2021ರ ಚುನಾವಣೆಗಳಲ್ಲಿ ಕೋಲ್ಕತ್ತಾದಲ್ಲಿ ಬಿಜೆಪಿ ಖಾತೆ ತೆರೆಯಲು ವಿಫಲವಾಗಿತ್ತು. ಈಗ ಪೇಸ್ ಮೂಲಕ ಅಲ್ಲಿ ಬದಲಾವಣೆ ತರಲು ಬಿಜೆಪಿ ಮುಂದಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement