ಭಟ್ಕಳ | ಆಸ್ತಿಗಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ; ಮಗನಿಗೆ ಗಲ್ಲು ಶಿಕ್ಷೆ, ಅಪ್ಪನಿಗೆ ಜೀವಾವಧಿ ಶಿಕ್ಷೆ ಪ್ರಕಟ

ಕಾರವಾರ: ಉತ್ತರ ಜಿಲ್ಲೆಯ ಭಟ್ಕಳ ತಾಲೂನಿಲ್ಲಿ ನಡೆದ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಯೊಬ್ಬನಿಗೆ ಮರಣ ದಂಡನೆ, ಇನ್ನೊಬ್ಬ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ಭಟ್ಕಳ ತಾಲೂಕಿನ ಹಾಡವಳ್ಳಿಯ ಗ್ರಾಮದ ವಿನಯ ಶ್ರೀಧರ ಭಟ್ಟನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಆತನ ತಂದೆ ಶ್ರೀಧರ ಭಟ್ಟನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
2023 ರ ಫೆಬ್ರವರಿಯಲ್ಲಿ ಭಟ್ಕಳ ಓಣಿಬಾಗಿಲು ಗ್ರಾಮದ ಕೃಷಿಕ ಶಂಭು ಭಟ್ಟ (70), ಅವರ ಪತ್ನಿ ಮಾದೇವಿ (60), ಪುತ್ರ ರಾಘವೇಂದ್ರ ಭಟ್ಟ(40) ಹಾಗೂ ಸೊಸೆ ಕುಸುಮಾ (35) ಎಂಬವರನ್ನು ಕತ್ತಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಮನೆಯೊಳಗೆ ಮಲಗಿದ್ದ ಸಣ್ಣ ಮಗು ಹಾಗೂ ಪಕ್ಕದ ಮನೆಗೆ ಆಡಲು ಹೋಗಿದ್ದ ಇನ್ನೊಬ್ಬ ಮಗು ಮಾತ್ರ ಬಚಾವಾಗಿದ್ದರು. ಆದರೆ, ಹತ್ಯೆಯಿಂದ ಇಬ್ಬರೂ ಮಕ್ಕಳು ಅನಾಥರಾಗಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರಿಗೆ ಕೊಲೆಯ ಹಿಂದೆ ಆಸ್ತಿ ಜಗಳ ಇರುವುದು ಪತ್ತೆಯಾಗಿತ್ತು. ಶಂಭು ಭಟ್ಟರ ಮನೆಯ ಹಿರಿಮಗ ಶ್ರೀಧರ ಭಟ್ಟ ಎಂಬವರು ಘಟನೆ ನಡೆಯುವ ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದರು.ಅದರ ನಂತರ ಅವರ ಪಾಲಿನ ಜಮೀನಿನ ವಿಚಾರವಾಗಿ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾ ಭಟ್ಟ​ ಮಾವ ಶಂಭು ಭಟ್ಟ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಎಲ್ಲರಿಗೂ ಸಮಾನವಾಗಿ ಆಸ್ತಿ ಹಂಚಿದ್ದರು.

ಆದರೆ ಹೆಣ್ಣು ಮಕ್ಕಳಿಗೆ ಯಾಕೆ ಪಾಲು ನೀಡಬೇಕು ವಿದ್ಯಾ ಭಟ್ಟ, ಆಕೆಯ ತಂದೆ ಶ್ರೀಧರ ಭಟ್ಟ ಹಾಗೂ ತಮ್ಮ ವಿನಯ ಭಟ್ಟ ಕೂಡ ಜಗಳ ಪದೇಪದೇ ಜಗಳ ಮಾಡುತ್ತಿದ್ದರು. ಅದೇ ವಿಚಾರವಾಗಿ ಸೊಸೆ ವಿದ್ಯಾಳ ತಂದೆ ಶ್ರೀಧರ ಭಟ್ಟ ಹಾಗೂ ಸಹೋದರ ವಿನಯ ಭಟ್ಟ ಇಬ್ಬರೂ ಸೇರಿ ಶಂಭು ಭಟ್ಟ ಕುಟುಂಬದ ನಾಲ್ವರನ್ನು ಕೊಚ್ಚಿ ಕೊಲೆ ಮಾಡಿರುವುದು ತಿಳಿದು ಬಂದಿತ್ತು. ಅಪ್ಪ ಮಗನನ್ನು ಬಂಧಿಸಿದ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಧೀಶ ಡಿ. ಎಸ್‌. ವಿಜಯಕುಮಾರ ಸಾಕಷ್ಟು ಸಾಕ್ಷ್ಯಗಳ ವಿಚಾರಣೆ ನಡೆಸಿದ ನಂತರ ಮರಣ ದಂಡನೆ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement