
ವಿಚಿತ್ರ ಘಟನೆಯೊಂದರಲ್ಲಿ, ಬಾಲಿವುಡ್ ನಟಿ ನೋರಾ ಫತೇಹಿಯಂತಹ ಶರೀರದ ಆಕೃತಿಯನ್ನು ಹೊಂದಲು ತನ್ನನ್ನು ಒತ್ತಾಯಿಸಿ ತನ್ನ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಗಾಜಿಯಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ.
ಉತ್ತರ ಪ್ರದೇಶದ ಗಜೈಬಾದ್ ಮುರಾದ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ, ವೃತ್ತಿಯಲ್ಲಿ ಸರ್ಕಾರಿ ದೈಹಿಕ ಶಿಕ್ಷಣ ಶಿಕ್ಷಕ ಶಿವಂ ಉಜ್ವಲ್ ಹೆಸರಿನ ತನ್ನ ಪತಿ ಬಾಲಿವುಡ್ ನಟಿ ತಾನು ನೋರಾ ಫತೇಹಿಯಂತೆ ಕಾಣಬೇಕೆಂದು ಬಯಸಿದ್ದಾನೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಇದಕ್ಕಾಗಿ, ತಾನು ಪ್ರತಿದಿನ ಮೂರು ಗಂಟೆಗಳ ಕಾಲ ವ್ಯಾಯಾಮ ಮಾಡಲು ಒತ್ತಡ ಹೇರಲು ಪ್ರಾರಂಭಿಸಿದ್ದಾನೆ. ಯಾವ ದಿನ ಅವಳಿಗೆ 3 ಗಂಟೆಗಳ ಕಾಲ ವ್ಯಾಯಾಮ ಮಾಡಲು ಸಾಧ್ಯವಾಗದೇ ಇದ್ದಾಗ ಅವಳಿಗೆ ಆ ದಿನ ಆಹಾರ ನೀಡದೆ ಉಪವಾಸ ಕೆಡಗುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆ ದಾಖಲಿಸಿದ ದೂರಿನ ಪ್ರಕಾರ, ಮಹಿಳೆ ಮಾರ್ಚ್ 6, 2025 ರಂದು ಮೀರತ್ನ ಉಜ್ವಲ್ ಎಂಬವರನ್ನು ವಿವಾಹವಾದರು. ತಾನು ಸಾಮಾನ್ಯ ಎತ್ತರ ಮತ್ತು ಬಿಳಿ ಮೈಬಣ್ಣ ಹೊಂದಿರುವುದಾಗಿ ಎಂದು ಮಹಿಳೆ ಹೇಳಿದ್ದಾರೆ, ಆದರೆ ತನ್ನ ಪತಿ ಮತ್ತು ಅತ್ತೆ ಮಾವಂದಿರು ತಾನು ದೈಹಿಕವಾಗಿ ಕಾಣುತ್ತಿರುವುದಕ್ಕೆ ತನ್ನನ್ನು ಟೀಕಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಮದುವೆಯ ನಂತರ, ತನ್ನ ಪತಿ ತನ್ನನ್ನು ಮದುವೆಯಾಗಿದ್ದರಿಂದ ತನ್ನ ಜೀವನ ಹಾಳಾಗಿದೆ, ತಾನು ನೋರಾ ಫತೇಹಿಯಂತಹ ಸುಂದರ ಹುಡುಗಿಯನ್ನು ಮದುವೆಯಾಗಬಹುದಿತ್ತು ಎಂದು ಹೇಳುತ್ತಿದ್ದರು ಎಂದು ಹೇಳಿ ತನ್ನನ್ನು ಅಣಕಿಸುತ್ತಿದ್ದರು ಮಹಿಳೆ ಹೇಳಿಕೊಂಡಿದ್ದಾರೆ.
ತನ್ನ ಪತಿಗೆ ಇತರ ಹುಡುಗಿಯರ ಬಗ್ಗೆ ತುಂಬಾ ಆಸಕ್ತಿ ಇದೆ ಮತ್ತು ಅವರು ಸಾಮಾಜಿಕ ಮಾಧ್ಯಮದಲ್ಲಿ ಹುಡುಗಿಯರ ಆಕ್ಷೇಪಾರ್ಹ ಚಿತ್ರಗಳು ಮತ್ತು ವೀಡಿಯೊಗಳನ್ನು ವೀಕ್ಷಿಸುತ್ತಾರೆ. ಅಲ್ಲದೆ, ತಾನು ಗರ್ಭಿಣಿಯಾದಾಗ ರಹಸ್ಯವಾಗಿ ಗರ್ಭಪಾತ ಮಾತ್ರೆಗಳನ್ನು ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.
ತನ್ನ ಅತ್ತೆ-ಮಾವಂದಿರು ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು ಎಂದು ಅವರು ಹೇಳಿದ್ದಾರೆ. ಅವರ ಬೇಡಿಕೆ ಈಡೇರದಿದ್ದಾಗ, ಅವರು ತಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಲು ಪ್ರಾರಂಭಿಸಿದರು ಎಂದು ಹೇಳಿದ್ದಾರೆ ಎಂದು ಎನ್ಬಿಟಿ (NBT) ವರದಿ ಮಾಡಿದೆ.
ಮದುವೆಯಲ್ಲಿ, ಹುಡುಗಿಯ ಕುಟುಂಬವು 16 ಲಕ್ಷ ರೂ. ಮೌಲ್ಯದ ಆಭರಣಗಳು, 24 ಲಕ್ಷ ರೂ. ಮೌಲ್ಯದ ಮಹೀಂದ್ರಾ ಸ್ಕಾರ್ಪಿಯೋ ಮತ್ತು 10 ಲಕ್ಷ ರೂ. ನಗದು ನೀಡಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. NDTV ವರದಿಯ ಪ್ರಕಾರ, ಮದುವೆಗೆ ಸುಮಾರು 76 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಈ ವಿಷಯದಲ್ಲಿ ಪೊಲೀಸರು ಮಹಿಳೆಯ ಪತಿ, ಅತ್ತೆ, ಮಾವ ಮತ್ತು ಅತ್ತಿಗೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ