ವೀಡಿಯೊ..| ಚೀನಾದ ಡಿಂಗ್ ಲಿರೆನ್ ಸೋಲಿಸಿ ಚೆಸ್‌ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ವಿಶ್ವ ಚೆಸ್ ಚಾಂಪಿಯನ್ ಆದ ಭಾರತದ ಗುಕೇಶ…!

ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ 14 ರಲ್ಲಿ ಚೀನಾದ ಗ್ರ್ಯಾಂಡ್‌ ಮಾಸ್ಟರ್‌ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಭಾರತದ ಗ್ರ್ಯಾಂಡ್‌ ಮಾಸ್ಟರ್‌ 18 ವರ್ಷದ ಡಿ.ಗುಕೇಶ ಅವರು ಚೆಸ್‌ ಆಟದ ಇತಿಹಾಸದಲ್ಲೇ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ್ದಾರೆ.
ಅವರ ಗೆಲುವಿನೊಂದಿಗೆ, ಗುಕೇಶ ವಿಶ್ವ ಚಾಂಪಿಯನ್‌ ಶಿಪ್‌ ಗೆದ್ದ 18 ನೇ ಗ್ರ್ಯಾಂಡ್‌ ಮಾಸ್ಟರ್‌ ಆಗಿದ್ದಾರೆ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದ ದಂತಕಥೆ ವಿಶ್ವನಾಥನ್‌ ಆನಂದ ಅವರ ನಂತರ ಎರಡನೇ ಭಾರತೀಯ ಗ್ರ್ಯಾಂಡ್‌ ಮಾಸ್ಟರ್‌ ಆಗಿದ್ದಾರೆ.
ಪಂದ್ಯದಲ್ಲಿ 13 ಪಂದ್ಯಗಳಲ್ಲಿ ಇಬ್ಬರೂ ಸ್ಪರ್ಧಿಗಳು ತಲಾ 6.5 ಪಾಯಿಂಟ್‌ಗಳನ್ನು ಪಡೆದು ಸಮಬಲ ಸಾಧಿಸಿದ್ದರು. ನಂತರ ಅಂತಿಮ ಪಂದ್ಯವಾದ 14ನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ನಾಲ್ಕು ಗಂಟೆಗಳಲ್ಲಿ 58 ನಡೆಗಳ ನಂತರ ಲಿರೆನ್ ವಿರುದ್ಧ 14 ನೇ ಗೇಮ್ ಗೆದ್ದ ಗುಕೇಶ, 18 ನೇ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ.

ಗುರುವಾರದ ಈ ಪಂದ್ಯವೂ ಡ್ರಾಗೊಂಡರೆ ಶುಕ್ರವಾರ ಕಡಿಮೆ ಅವಧಿಯ ಟೈ-ಬ್ರೇಕ್‌ನಲ್ಲಿ ಗೆಲುವನ್ನು ನಿರ್ಧರಿಸಬೇಕಿತ್ತು.
ಗುರುವಾರದ ಅಂರಿಮ ಪಂದ್ಯಕ್ಕೂ ಮುನ್ನ ಆಟಕ್ಕೂ ಮುನ್ನ ಗುಕೇಶ ಮೂರನೇ ಮತ್ತು 11ನೇ ಆಟಗಳಲ್ಲಿ ಜಯಗಳಿಸಿದ್ದರೆ, 32ರ ಹರೆಯದ ಲಿರೆನ್ ಆರಂಭಿಕ ಮತ್ತು 12ನೇ ಗೇಮ್‌ಗಳಲ್ಲಿ ಜಯಶಾಲಿಯಾಗಿದ್ದರು.
ಗುರುವಾರ ಗುಕೇಶ ಅವರು ವಿಶ್ವಚಾಂಪಿಯನ್‌ ಶಿಪ್‌ ಗೆದ್ದ ಅತ್ಯಂತ ಕಿಡಿಯ ಚೆಸ್‌ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವುದರ ಮೊದಲು ರಷ್ಯಾದ ದಂತಕಥೆ ಗ್ಯಾರಿ ಕಾಸ್ಪರೋವ್ ಅವರು 1985 ರಲ್ಲಿ ಅನಾಟೊಲಿ ಕಾರ್ಪೋವ್ ಅವರನ್ನು 22 ನೇ ವಯಸ್ಸಿನಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದಾಗ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆಗಿದ್ದರು.
ಈ ವರ್ಷದ ಆರಂಭದಲ್ಲಿ ಕ್ಯಾಂಡಿಡೇಟ್ಸ್ ಪಂದ್ಯಾವಳಿಯನ್ನು ಗೆದ್ದ ನಂತರ ಗುಕೇಶ ಅವರು ವಿಶ್ವ ಚಾಂಪಿಯನ್‌ ಶಿಪ್‌ಗೆ ಅತ್ಯಂತ ಕಿರಿಯ ಆಟಗಾರರಾಗಿ ಪ್ರವೇಶಿಸಿದ್ದರು.
ಗುಕೇಶ ಅವರು ವಿಶ್ವನಾಥನ್ ಆನಂದ ಅವರ ನಂತರ ಜಾಗತಿಕ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯರಾಗಿದ್ದಾರೆ. ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆನಂದ್ ಕೊನೆಯ ಬಾರಿಗೆ 2013 ರಲ್ಲಿ ಮ್ಯಾಗ್ನಸ್ ಕಾರ್ಲ್‌ಸೆನ್‌ಗೆ ಮಣಿಯುವ ಮೊದಲು ಕೊನೆಯ ಬಾರಿಗೆ ವಿಶ್ವ ಚಾಂಪಿಯನ್‌ ಶಿಪ್‌ ಪ್ರಶಸ್ತಿಯನ್ನು ಗೆದ್ದಿದ್ದರು.

ಪ್ರಮುಖ ಸುದ್ದಿ :-   ಟಿಎಂಸಿ ಇಬ್ಭಾಗ ; ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಉಚ್ಚಾಟಿತ ಶಾಸಕ ರಿತಬ್ರತ ಬೆಂಬಲಿಸಿ ಸ್ಪೀಕರ್‌ಗೆ 58 ಶಾಸಕರ ಹಕ್ಕು ಸಲ್ಲಿಕೆ !

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement