ಕುಡಿದ ಮತ್ತಿನಲ್ಲಿ ಗಂಡನಿಗೆ 12 ಬಾರಿ ಕಚ್ಚಿ ಗಾಯಗೊಳಿಸಿ, ಆಸಿಡ್ ಎರಚಿದ ಪತ್ನಿ…!

ಭೋಪಾಲ : ಮಧ್ಯಪ್ರದೇಶದ ಭೋಪಾಲದಲ್ಲಿ 61 ವರ್ಷದ ವ್ಯಕ್ತಿಯೊಬ್ಬನ ಮೇಲೆ ಆತನ ಪತ್ನಿ ಹಲ್ಲೆ ನಡೆಸಿದ್ದು, ಜಗಳದ ವೇಳೆ ಆತನಿಗೆ 12 ಬಾರಿ ಕಚ್ಚಿದ್ದಾಳೆ ಹಾಗೂ ಆಸಿಡ್ ಎರಚಿದ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಭೋಪಾಲದ ನಿಶಾತಪುರದ ವಿಶ್ವಕರ್ಮ ನಗರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 61 ವರ್ಷದ ವ್ಯಕ್ತಿಯ ಮೇಲೆ ಆತನ ಪತ್ನಿ ಹಲ್ಲೆ ನಡೆಸಿದ್ದಾಳೆ. ಆಕೆ ಪತಿಗೆ ಕನಿಷ್ಠ 12 ಬಾರಿ ಕಚ್ಚಿದ್ದಾಳೆ, ತನ್ನ ಉಗುರುಗಳಿಂದ ತೀವ್ರವಾಗಿ ಗೀರಿ ಗಾಯಗೊಳಿಸಿದ್ದಾಳೆ ಮತ್ತು ಜಗಳದ ವೇಳೆ ಗಂಡನ ಮೇಲೆ ಆಸಿಡ್ (ಟಾಯ್ಲೆಟ್ ಕ್ಲೀನರ್) ಎಸೆಯಲು ಪ್ರಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸಿಡ್ ಗಂಡನ ದೇಹಕ್ಕೆ ನೇರವಾಗಿ ತಾಗದಿದ್ದರೂ ಬಟ್ಟೆಗಳ ಮೇಲೆ ಬಿದ್ದು ಅದು ಸುಟ್ಟು ಹೋಗಿದೆ. ನಿಶಾತಪುರ ಪೊಲೀಸರು ಮಹಿಳೆಯ ವಿರುದ್ಧ ಹಲ್ಲೆ ಮತ್ತು ಆಸಿಡ್ ದಾಳಿಗೆ ಯತ್ನಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ತನಿಖೆಯ ನೇತೃತ್ವ ವಹಿಸಿರುವ ಸಬ್-ಇನ್ಸ್‌ಪೆಕ್ಟರ್ (ಎಸ್‌ಐ) ಶ್ರೀಕಾಂತ ದ್ವಿವೇದಿ ಅವರು, ವಿಶ್ವಕರ್ಮ ನಗರದಲ್ಲಿ ವಾಸಿಸುವ 61 ವರ್ಷದ ಟ್ರಕ್ ಚಾಲಕ ನಾರಾಯಣ ಲೋಧಿ ತಮ್ಮ ಪತ್ನಿಯಿಂದ ಹಲ್ಲೆಗೊಳಗಾದವರು ಎಂದು ಹೇಳಿದ್ದಾರೆ. ನಾರಾಯಣ ತಮ್ಮ ಎರಡನೇ ಪತ್ನಿ 45 ವರ್ಷದ ದುರ್ಗಾ ಲೋಧಿ ಅವರೊಂದಿಗೆ ವಾಸಿಸುತ್ತಿದ್ದಾರೆ, ಅವಳಿಗೆ ಮೊದಲ ಮದುವೆಯಿಂದ 12 ಮತ್ತು 14 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ತಮ್ಮ ಕೆಲಸದ ಕಾರಣದಿಂದ, ನಾರಾಯಣ ಅವರು ಸಾಮಾನ್ಯವಾಗಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಮನೆಗೆ ಭೇಟಿ ನೀಡುತ್ತಾರೆ.
ಘಟನೆ ನಡೆದ ದಿನ ಬೆಳಗ್ಗೆ 10 ಗಂಟೆ ಸುಮಾರಿಗೆ ನಾರಾಯಣ ಅವರು ಮನೆಗೆ ಕೆಲವು ಸಾಮಾಗ್ರಿಗಳೊಂದಿಗೆ ಮನೆಗೆ ಬಂದಿದ್ದರು.

ಪ್ರಮುಖ ಸುದ್ದಿ :-   ದೆಹಲಿ ಹೋಟೆಲ್‌ನಲ್ಲಿ ಅಗ್ನಿ ಅವಘಡ : 21 ಮಂದಿ ಸಾವು ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಧುಮುಕಿದ ಇಬ್ಬರು ಮಹಿಳೆಯರು

ಕಾಣೆಯಾದ ವಸ್ತುಗಳ ಬಗ್ಗೆ ದಂಪತಿಗಳ ನಡುವೆ ಜಗಳವಾಗಿ ಅದು ವಿಕೋಪಕ್ಕೆ ಹೋಯಿತು. , ಇದುಹಲ್ಲೆಗೆ ತಿರುಗಿತು. ಎಸ್‌ಐ ದ್ವಿವೇದಿ ಪ್ರಕಾರ, ದುರ್ಗಾ ತಮ್ಮ ಪತಿ ನಾರಾಯಣನ ಮೇಲೆ ಹಲ್ಲೆ ನಡೆಸಿ, ಅನೇಕ ಬಾರಿ ಕಚ್ಚಿದ್ದಾಳೆ ಹಾಗೂ ಉಗುರುಗಳಿಂದ ಗೀರಿದ್ದಾಳೆ.. ನಾರಾಯಣ ಓಡಿಹೋಗಲು ಪ್ರಯತ್ನಿಸಿದಾಗ, ದುರ್ಗಾ ಅವರ ಮೇಲೆ ಆಸಿಡ್ ಎಸೆದಿದ್ದಾರೆ. , ಅದೃಷ್ಟವಶಾತ್ ಅದು ಬಟ್ಟೆ ಮೇಲೆ ಬಿದ್ದ ಕಾರಣ ಬಟ್ಟೆ ಮಾತ್ರ ಸುಟ್ಟಿದೆ.
ನಾರಾಯಣ ಪೊಲೀಸರಿಗೆ ಔಪಚಾರಿಕವಾಗಿ ದೂರು ಸಲ್ಲಿಸಿದ್ದು, ತನ್ನ ಪತ್ನಿ ಕುಡಿತದ ಚಟ ಹೊಂದಿದ್ದಾಳೆ ಮತ್ತು ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ತನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಆರೋಪಿಸಿದ್ದಾರೆ. ಪೋಲೀಸರ ಮುಂಚಿನ ರಾಜಿ ಸಂಧಾನ ಮತ್ತು ಸಮಾಲೋಚನೆಗಳ ಹೊರತಾಗಿಯೂ, ಆಕೆಯ ನಡವಳಿಕೆಯು ಬದಲಾಗಲಿಲ್ಲ ಎಂದು ವರದಿಯಾಗಿದೆ. ಸದ್ಯ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಬಂಗಾಳ ರಾಜಕೀಯದಲ್ಲಿ ಸುನಾಮಿ ; ದೀದಿಗೆ ಬಿಗ್ ಶಾಕ್ : ಟಿಂಎಂಸಿ ಶಾಸಕರ ಬೆಂಬಲದಿಂದಲೇ ವಿಧಾನಸಭೆ ವಿಪಕ್ಷದ ನಾಯಕನಾದ ಉಚ್ಚಾಟಿತ ಶಾಸಕ..!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement