ಬಿಹಾರದಲ್ಲಿ ಮತ್ತೊಮ್ಮೆ ಎನ್​ಡಿಎ ಅಧಿಕಾರಕ್ಕೆ ; ಭವಿಷ್ಯ ನುಡಿದ 8 ಎಕ್ಸಿಟ್ ಪೋಲ್‌ ಗಳು

ಬಿಹಾರದಲ್ಲಿ ಮತದಾನ ಮುಗಿದಿದ್ದು, ಇದರ ಬೆನ್ನಿಗೇ ಮತತಗಟ್ಟೆ ಸಮೀಕ್ಷೆಗಳು ರಾಜಕೀಯ ಪಕ್ಷಗಳ ಭವಿಷ್ಯ ಏನಾಗಲಿದೆ ಎಂದು ಭವಿಷ್ಯ ನುಡಿದಿವೆ. ಈ ಬಾರಿಯೂ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂದು ಎಂಟು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.
ದೈನಿಕ್ ಭಾಸ್ಕರ್ ಎಕ್ಸಿಟ್ ಪೋಲ್ ಎನ್‌ಡಿಎ 145 ರಿಂದ 160 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯನ್ನು ಊಹಿಸಿದೆ, ಮ್ಯಾಟ್ರಿಜ್ (Matrize) ಸಂಸ್ಥೆಯು 147 ರಿಂದ 167 ಸ್ಥಾನಗಳನ್ನು ಗೆಲ್ಲುವ ಮುನ್ಸೂಚನೆ ನೀಡಿದೆ. ಒಟ್ಟು 243 ಸ್ಥಾನಗಳ ಬಿಹಾರ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ ಮ್ಯಾಜಿಕ್ ಸಂಖ್ಯೆ 122 ಆಗಿದೆ.
ರಾಜಕೀಯಕ್ಕೆ ಹೊಸಬರಾಗಿರುವ ಪ್ರಶಾಂತ ಕಿಶೋರ ಅವರು ಸಮೀಕ್ಷಕರ ಮೇಲೆ ಪ್ರಭಾವ ಬೀರಲು ವಿಫಲರಾಗಿದ್ದಾರೆ. ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಜೆಎಸ್‌ಪಿ (JSP) ಪಕ್ಷಕ್ಕೆ 0 ರಿಂದ 2 ಸ್ಥಾನಗಳನ್ನು ಅಂದಾಜಿಸಿದೆ, ಹಾಗೆಯೇ ದೈನಿಕ್ ಭಾಸ್ಕರ್ 0 ರಿಂದ 3 ಸ್ಥಾನಗಳನ್ನು ನಿಗದಿಪಡಿಸಿದೆ.

ಚಾಣಕ್ಯ ಸ್ಟ್ರಾಟಜೀಸ್, ದೈನಿಕ್ ಭಾಸ್ಕರ್, ಜೆವಿಸಿ, ಮ್ಯಾಟ್ರಿಜ್, ಪಿ-ಮಾರ್ಕ್ ಮತ್ತು ಪೀಪಲ್ಸ್ ಇನ್‌ಸೈಟ್ ಸೇರಿದಂತೆ ಎಲ್ಲಾ ಸಮೀಕ್ಷಕರು ಪ್ರಶಾಂತ ಕಿಶೋರ ಅವರ ಪಕ್ಷವು ಎರಡಂಕಿಯ ಗಡಿಯನ್ನು ದಾಟುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಜೆವಿಸಿ ಎಕ್ಸಿಟ್ ಪೋಲ್ ಪ್ರಕಾರ, ಎನ್‌ಡಿಎ 135 ರಿಂದ 150 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಪೀಪಲ್ಸ್ ಪಲ್ಸ್ ಮತ್ತು ಪೀಪಲ್ಸ್ ಇನ್‌ಸೈಟ್ ಬಿಹಾರದಲ್ಲಿ ಆಡಳಿತಾರೂಢ ಮೈತ್ರಿಕೂಟವು ಕನಿಷ್ಠ 133 ಸ್ಥಾನಗಳನ್ನು ಗಳಿಸಲಿದೆ ಎಂದು ಭವಿಷ್ಯ ನುಡಿದಿದೆ.
ಆರ್‌ಜೆಡಿ ನೇತೃತ್ವದ ಮಹಾಘಟಬಂಧನವು (Mahagathbandhan) ಎರಡನೇ ಸ್ಥಾನದಲ್ಲಿದೆ. ದೈನಿಕ್ ಭಾಸ್ಕರ್ ಎಕ್ಸಿಟ್ ಪೋಲ್ ‘ಇಂಡಿಯಾ’ ಮೈತ್ರಿಕೂಟಕ್ಕೆ 73 ರಿಂದ 91 ಸ್ಥಾನಗಳನ್ನು ನೀಡಿದರೆ ಜೆವಿಸಿ 88 ರಿಂದ 103 ಮತ್ತು ಮ್ಯಾಟ್ರಿಜ್ 70-90 ಸ್ಥಾನಗಳನ್ನು ಊಹಿಸಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement