ವೀಡಿಯೊ…| ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ನೆರವು ನೀಡುವುದನ್ನು ಒಪ್ಪಿಕೊಂಡ ಪಾಕಿಸ್ತಾನ ರಕ್ಷಣಾ ಸಚಿವ…!

ನವದೆಹಲಿ: ಪಾಕಿಸ್ತಾನ ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ಒದಗಿಸುವ ಮತ್ತು ಬೆಂಬಲ ನೀಡುವ ಇತಿಹಾಸವನ್ನು ಹೊಂದಿದೆಯೇ ಎಂದು ಪ್ರಶ್ನೆಗೆ ಪಾಕಿಸ್ತಾನದ ರಕ್ಷಣಾ ಸಚಿವರು ಅಮೆರಿಕ ಮತ್ತು ಪಶ್ಚಿಮ ದೇಶಗಳ ಪರವಾಗಿ “ಕೊಳಕು ಕೆಲಸ” ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಬ್ರಿಟಿಷ್ ಸುದ್ದಿ ಜಾಲ ಸ್ಕೈ ನ್ಯೂಸ್ ಜೊತೆಗಿನ ಸಂದರ್ಶನದಲ್ಲಿ “ಪಾಕಿಸ್ತಾನವು ಈ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ, ತರಬೇತಿ ನೀಡುವ ಮತ್ತು ಹಣಕಾಸು ಒದಗಿಸುವ ದೀರ್ಘ ಇತಿಹಾಸವನ್ನು ಹೊಂದಿದೆ ಎಂದು ನೀವು ಒಪ್ಪಿಕೊಳ್ಳುತ್ತೀರಾ?” ಎಂಬ ಪ್ರಶ್ನೆಗೆ ಉತ್ತರಿಸಿದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಎಂ ಆಸಿಫ್ ಅವರು ಮಾರಿಕ, ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಪಶ್ಚಿಮ ದೇಶಗಳಿಗೆ ಕಳೆದ ಮೂರು ದಶಕಗಳಿಂದ ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ” ಎಂದು ಒಪ್ಪಿಕೊಂಡರು.

ಇದನ್ನು “ತಪ್ಪು” ಎಂದು ಹೇಳಿದ ಅವರು, ಪಾಕಿಸ್ತಾನ “ಇದರಿಂದ ಬಳಲಿತು” ಎಂದು ಹೇಳಿದರು. ಸೋವಿಯತ್-ಅಫಘಾನ್ ಯುದ್ಧ ಮತ್ತು 9/11 ರ ನಂತರ ತಾಲಿಬಾನ್ ವಿರುದ್ಧದ ಅಮೆರಿಕ ನೇತೃತ್ವದ ಯುದ್ಧದ ಸಮಯದಲ್ಲಿ ಪಾಕಿಸ್ತಾನವು ಪಶ್ಚಿಮದೊಂದಿಗೆ ಸೇರದೇ ಇದ್ದಿದ್ದರೆ ಪಾಕಿಸ್ತಾನದ ವಿರುದ್ಧ “ದೋಷಾರೋಪಣೆಗೆ ಅವಕಾಶ ಇರುತ್ತಿರಲಿಲ್ಲ ಎಂದು ಹೇಳಿದರು.
ಬೈಸರನ್ ಕಣಿವೆಯ ಪಿಕ್ನಿಕ್ ಸ್ಥಳದಲ್ಲಿ 26 ಅಮಾಯಕ ನಾಗರಿಕರನ್ನು ಗುಂಡಿಕ್ಕಿ ಕೊಂದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನದ ಸಚಿವರು ಅಮೆರಿಕ ಮತ್ತು ಪಶ್ಚಿಮ ದೇಶಗಳ ಪರವಾಗಿ ಭಯೋತ್ಪಾದಕರನ್ನು ಬೆಂಬಲಿಸುವ ಮೂಲಕ “ಕೊಳಕು ಕೆಲಸ” ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನವು ಸೋವಿಯತ್-ಅಪ್ಘಾನ್ ಯುದ್ಧದಲ್ಲಿ ಸೋವಿಯತ್ ವಿರುದ್ಧ ಹೋರಾಡಲು ಸಶಸ್ತ್ರ ಉಗ್ರರಿಗೆ ತರಬೇತಿ ನೀಡುವ ಮತ್ತು ಆಶ್ರಯ ನೀಡುವ ಮೂಲಕ ಅಮೆರಿಕವನ್ನು ಬೆಂಬಲಿಸಿತು. ಅಫ್ಘಾನಿಸ್ತಾನದೊಂದಿಗಿನ ಅದರ ಸೂಕ್ಷ್ಮ ಗಡಿಯಿಂದಾಗಿ ಅಮೆರಿಕ ಮತ್ತು ಸೋವಿಯತ್ ನಡುವಿನ ಪ್ರಾಕ್ಸಿ ಯುದ್ಧವು ಪಾಕಿಸ್ತಾನಕ್ಕೆ ಪ್ರಮುಖ ಪಾತ್ರವನ್ನು ನೀಡಿತು. ಸೋವಿಯತ್ ಒಕ್ಕೂಟವು ಅಫ್ಘಾನಿಸ್ತಾನದಿಂದ ಹಿಂದೆ ಸರಿಯಿತು. ಮತ್ತು 2001 ರ ವಿಶ್ವ ವ್ಯಾಪಾರ ಕೇಂದ್ರದ ದಾಳಿಗಳು ಜಗತ್ತನ್ನು ಬೆಚ್ಚಿಬೀಳಿಸುವವರೆಗೆ ಸುಮಾರು ಒಂದು ದಶಕದ ಕಾಲ ತಾಲಿಬಾನ್ ಅಪ್ಘಾನಿಸ್ತಾನದಲ್ಲಿ ಅಂತ್ರಯುದ್ಧದಿಂದ ಕೂಡಿದ ಅಧಿಕಾರ ನಡೆಸಿತ್ತು. .
ಒಸಾಮಾ ಬಿನ್ ಲಾಡೆನ್‌ನ ಅಲ್-ಖೈದಾಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಶ್ರಯ ನೀಡಿತು. ಸೆಪ್ಟೆಂಬರ್ 11, 2001 ರಂದು, ಭಯೋತ್ಪಾದಕ ಗುಂಪು ಅಮೆರಿಕದ ನೆಲದಲ್ಲಿ ಅತಿದೊಡ್ಡ ದಾಳಿಯನ್ನು ನಡೆಸಿ 2,996 ಜನರನ್ನು ಕೊಂದಿತು.

ಪ್ರಮುಖ ಸುದ್ದಿ :-   ಮದುಮಗನನ್ನು ಮದುವೆ ಮಂಟಪದಿಂದಲೇ ಅಪಹರಿಸಿದ ನೃತ್ಯಗಾರರ ತಂಡ...!

ನಂತರ ಅಮೆರಿಕವು ಅಫ್ಘಾನಿಸ್ತಾನದ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿತು ಮತ್ತು ಮತ್ತೊಮ್ಮೆ, ತಾಲಿಬಾನ್ ಅನ್ನು ಬೇರುಸಹಿತ ಕಿತ್ತುಹಾಕುವಲ್ಲಿ ಅಮೆರಿಕ ನೇತೃತ್ವದ ಪಡೆಗಳನ್ನು ಬೆಂಬಲಿಸುವ ಕಾರ್ಯಾಚರಣೆಗಳ ಕೇಂದ್ರಬಿಂದು ಪಾಕಿಸ್ತಾನವಾಗಿತ್ತು.
ಭಾರತದ ವಿರುದ್ಧ ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ಬೆಂಬಲ, ಹಣಕಾಸು ಮತ್ತು ತರಬೇತಿ ನೀಡಿದ ಪಾಕಿಸ್ತಾನ, ಪಹಲ್ಗಾಮ್‌ನಲ್ಲಿ ನಾಗರಿಕರನ್ನು ಕೊಂದ ದಾಳಿಕೋರರಿಗೆ ಬೆಂಬಲ ನೀಡುತ್ತಿದೆ ಎಂದು ಮತ್ತೊಮ್ಮೆ ಆರೋಪಿಸಲಾಗಿದೆ. ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬರಾದ ಹಫೀಜ್ ಸಯೀದ್ ನೇತೃತ್ವದ ಲಷ್ಕರ್-ಎ-ತೈಬಾದ ಒಂದು ಭಾಗವಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement