ನವ ದೆಹಲಿ: ಕೃಷಿ ಸುಧಾರಣೆಗಳತ್ತ ಭಾರತ ಕೈಗೊಳ್ಳುತ್ತಿರುವ ಕ್ರಮಗಳನ್ನು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ “ಒಪ್ಪಿಕೊಂಡಿದೆ” ಎಂದು ಗುರುವಾರ ಹೇಳಿರುವ ಭಾರತದ ವಿದೇಶಾಂಗ ಸಚಿವಾಲಯವು ಭಾರತದಲ್ಲಿ ರೈತ ಪ್ರತಿಭಟನೆಗಳಿಗೆ ಅಮೆರಿಕಾದ ವಿದೇಶಾಂಗ ಸಚಿವಾಲಯವು ನೀಡಿದ ಪ್ರತಿಕ್ರಿಯೆಗೆ ಯಾವುದೇ ಪ್ರತಿಭಟನೆಯನ್ನು “ಭಾರತದ ಪ್ರಜಾಪ್ರಭುತ್ವದ ನೀತಿಗಳು ಮತ್ತು ರಾಜಕೀಯದ ಸನ್ನಿವೇಶದಲ್ಲಿ ನೋಡಬೇಕು ಎಂದು ಹೇಳಿದೆ.
ಭಾರತ ಮತ್ತು ಅಮೆರಿಕ ಎರಡೂ ದೊಡ್ಡ ಹಾಗೂ ಬಲಿಷ್ಠ ಪ್ರಜಾಪ್ರಭುತ್ವ ದೇಶಗಳಾಗಿವೆ ಎಂದು ಹೇಳಿರುವ ಭಾರತದ ವಿದೇಶಾಂಗ ಸಚಿವಾಲಯವು, ಜನವರಿ 26 ರಂದು ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರ, ವಿಧ್ವಂಸಕ ಘಟನೆಗಳು ಅಮೆರಿಕದ ಕ್ಯಾಪಿಟಲ್ ಹಿಲ್ ನಡೆದ ಘಟನೆ ಯಾವ ಪ್ರತಿಕ್ರಿಯೆಯನ್ನು ಹುಟ್ಟು ಹಾಕಿದೆಯೋ ಅದೇರೀತಿಯ ಭಾವನೆಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಪ್ರತಿಭಟನಾ ಸ್ಥಳಗಳಲ್ಲಿ ಇಂಟರ್ನೆಟ್ ನಿರ್ಬಂಧವನ್ನು ಮತ್ತಷ್ಟು ಹಿಂಸಾಚಾರ ತಡೆಗಟ್ಟಲು ಮಾಡಲಾಗಿದೆ, ಇದು ತಾತ್ಕಾಲಿಕ ಕ್ರಮ ಎಂದು ಹೇಳಿದೆ.
ಅಧ್ಯಕ್ಷ ಜೋಸೆಫ್ ಬಿಡೆನ್ ನೇತೃತ್ವದ ಯುಎಸ್ ಆಡಳಿತವು ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಪರಿಹರಿಸಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಪ್ರತಿಭಟನಾ ಸ್ಥಳಗಳಲ್ಲಿ ಇಂಟರ್ನೆಟ್ ನಿರ್ಬಂಧಗಳನ್ನು ಉಲ್ಲೇಖಿಸಿ ಯುಎಸ್ ಆಡಳಿತವು “ಇಂಟರ್ನೆಟ್ ಸೇರಿದಂತೆ ಮಾಹಿತಿಯ ಅಡೆತಡೆಯಿಲ್ಲದ ಸೌಲಭ್ಯವು ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣವಾಗಿದೆ” ಎಂದು ಹೇಳಿದೆ.
ಇದೇ ಸಂದರ್ಭದಲ್ಲಿ
ನವದೆಹಲಿಯ ಅಮೆರಿಕ ರಾಯಭಾರಿ ಕಚೇರಿ ವಕ್ತಾರರು,, “ಶಾಂತಿಯುತ ಪ್ರತಿಭಟನೆಗಳು ಯಾವುದೇ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣವೆಂದು ನಾವು ಗುರುತಿಸುತ್ತೇವೆ. ಭಾರತದ ಸುಪ್ರೀಂ ಕೋರ್ಟ್ ಸಹ ಇದನ್ನೇ ಹೇಳಿದ್ದು, ಅಮೆರಿಕ ಸಹ ಪಕ್ಷಗಳ ನಡುವಿನ ಯಾವುದೇ ಭಿನ್ನಾಭಿಪ್ರಾಯಗಳನ್ನು ಸಂವಾದದ ಮೂಲಕ ಪರಿಹರಿಸಬೇಕೆಂದು ಹೇಳುತ್ತದೆ. ಭಾರತದ ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸುವ ಮತ್ತು ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸುವ ಕಾರ್ಯ ಯೋಜನೆಯನ್ನು ಅಮೆರಿಕವು ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ