ಮ್ಯಾಯನ್ಮಾರ್‌ನಲ್ಲಿ ಸೈನ್ಯಾಡಳಿತದ ವಿರುದ್ಧ ಪ್ರತಿಭಟನೆ

ಮ್ಯಾಯನ್ಮಾರ್‌ನಲ್ಲಿ ಆಡಳಿತವನ್ನು ವಶಕ್ಕೆ ಪಡೆದಿರುವ ಸೇನೆಯ ವಿರುದ್ಧ ಪ್ರತಿಭಟನೆ ಆರಂಭವಾಗಿದೆ.
ಸೇನಾ ಕ್ರಾಂತಿಯ ವಿರುದ್ಧ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರು ಮ್ಯಾನ್ಮಾರ್‌ನ ಎರಡನೇ ನಗರವಾದ ಮಾಂಡಲೆ ಎಂಬಲ್ಲಿ ಬ್ಯಾನರ್‌ಗಳನ್ನುಪ್ರದರ್ಶಿಸಿ, ಸೈನಿಕ ದಂಗೆ ವಿರೋಧಿ ಘೋಷಣೆಗಳನ್ನು ಕೂಗಿದರು.
ಮಾಂಡಲೆ ವೈದ್ಯಕೀಯ ವಿಶ್ವವಿದ್ಯಾಲಯದ ಹೊರಗೆ ನಮ್ಮ ಬಂಧಿತ ನಾಯಕರನ್ನು ತಕ್ಷಣವೇ ಬಿಡುಗಡೆ ಮಾಡಿ, ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮ್ಯಾನ್ಮಾರ್‌ನ ಸೈನ್ಯವು ಸೋಮವಾರ ಸರ್ಕಾರದ ಅಧಿಕಾರವನ್ನುತನ್ನ ತೆಕ್ಕೆಗೆ ತೆಗೆದುಕೊಂಡಿದೆ. , ಚುನಾಯಿತ ಅಧ್ಯಕ್ಷರಾದ ಜನಪ್ರಿಯ ನಾಯಕಿ ಹಾಗೂ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ನಾಯಕ ಆಂಗ್ ಸಾನ್ ಸೂಕಿ ಅವರನ್ನು ಅಧಿಕಾರದಿಂದ ಉಚ್ಚಾಟಿಸಲಾಗಿದ್ದು, ಈಗ ಆರು ಅನಧಿಕೃತ ವಾಕಿ-ಟಾಕಿಗಳನ್ನು ಹೊಂದಿದ್ದು, ಅದನ್ನು ಅನಧಿಕೃತವಾಗಿ ಆಮದು ಮಾಡಿಕೊಂಡಿದ್ದಾರೆ ಎಂದು ಅವರ ಮೇಲೆ ಆರೋಪ ಹೊರಿಸಲಾಗಿದೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement