ನವದೆಹಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಫೆ.೬ರಂದು ಕರೆನೀಡಿದ ರಸ್ತೆ ತಡೆ ಚಳವಳಿಯಿಂದ ಹಲವು ರಾಜ್ಯಗಳಲ್ಲಿ ರಸ್ತೆ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ.
ಕೇಂದ್ರ ಸರಕಾರ ಆಯವ್ಯಯದಲ್ಲಿ ರೈತರ ಬೇಡಿಕೆಗಳನ್ನು ಕಡೆಗಣಿಸಿದ್ದನ್ನು ಖಂಡಿಸಿ ದೇಶಾದ್ಯಂತ ರಸ್ತಾ ರೋಕೊ ನಡೆಸಲಾಗುತ್ತಿದೆ. ದೆಹಲಿಯನ್ನು ಹೊರತುಪಡಿಸಿ, ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ ಕೆಲವೆಡೆ ಮತ್ತು ದಕ್ಷಿಣ ರಾಜ್ಯಗಳಲ್ಲಿ ರಸ್ತಾ ರೋಕೊ ನಡೆಯುವುದು. ರೈತರ ಪ್ರತಿಭಟನೆಗೆ ದೇಶದ ವಿವಿಧ ರೈತ ಸಂಘಗಳು ಬೆಂಬಲ ಸೂಚಿಸಿವೆ.
ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರ ನಡುವೆ ಮೂರು ಗಂಟೆಗಳ ಕಾಲ ರಸ್ತಾ ರೋಕೊ ನಡೆಸಲು ಉದ್ದೇಶಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ