ವಾಷಿಂಗ್ಟನ್ (ಅಮೆರಿಕ): ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವದ ಮೌಲ್ಯಗಳ ಪಾಲನೆಯಾಗಬೇಕು ಮತ್ತು ಪ್ರತಿಭಟನಾನಿರತರು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಬೇಕಲ್ಲದೆ ಇಂಟರ್‌ನೆಟ್‌ಗೆ ತಡೆಯಾಗದಂತೆ ನೋಡಿಕೊಳ್ಳಬೇಕೆಂದು ಅಮೆರಿಕದ ಕಾಂಗ್ರೆಶ್ನಲ್ ಇಂಡಿಯಾ ಆಗ್ರಹಿಸಿದೆ.
ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರಿಯೊಂದಿಗೆ ಮಾತನಾಡಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಶ್ನಲ್ ಇಂಡಿಯಾ ಸಹ ಅಧ್ಯಕ್ಷ ಬ್ರಾಡ್ ಶೆರ್ಮನ್ ತಿಳಿಸಿದ್ದಾರೆ.
ಪ್ರಜಾಪ್ರಭುತ್ವದ ಮೌಲ್ಯಗಳ ಪಾಲನೆಯಾಗಬೇಕು. ಪ್ರತಿಭಟನಾಕಾರರಿಗೆ ಶಾಂತಿಯುತವಾಗಿ ಪ್ರತಿಭಟಿಸಲು ಮತ್ತು ಇಂಟರ್ನೆಟ್ ಪ್ರವೇಶವನ್ನು ಹೊಂದಲು ಅವಕಾಶ ನೀಡಬೇಕು. ಅಲ್ಲದೇ ಪತ್ರಕರ್ತರಿಗೆ ಮುಕ್ತವಾಗಿ ವರದಿ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಲಾಗಿದೆ ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ