ಈಗ ಸತ್ಯಾಗ್ರಹದ ರೂಪ ಪಡೆಯುತ್ತಿರುವ ರೈತ ಆಂದೋಳನ

ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ ನಂತರ, ಕೆಲ ದುಷ್ಟಶಕ್ತಿಗಳು ಸೇರಿಕೊಂಡು ಮಾಡಿದ ಹಿಂಸೆ ಪ್ರಾಮಾಣಿಕವಾದ ಅಹಿಂಸಾತ್ಮಕ ಪ್ರತಿಭಟನೆ ದುರ್ಬಲಗೊಳಿಸುವುದನ್ನು ತಡೆಯುವುದು ಎಷ್ಟು ಕಷ್ಟ ಎಂಬ ಬಗ್ಗೆ ಸಾಕಷ್ಟು ಅಭಿಪ್ರಾಯಗಳಿವೆ.
ಆದರೆ ಫೆ.೧ರಿಂದ ಮತ್ತೆ ಅಹಿಂಸಾತ್ಮಕ ಪ್ರತಿಭಟನೆ ಮುಂದುವರಿದಿದೆ. ಜೊತೆಗೆ ದೆಹಲಿಯ ಹೊರವಲಯದ ಸಿಂಘು ಗಡಿಗೆ ಸೀಮಿತವಾಗಿದ್ದ ಈ ಅಹಿಂಸಾತ್ಮಕ ಪ್ರತಿಭಟನೆ, ಸತ್ಯಾಗ್ರಹದ ರೂಪದಲ್ಲಿ ಈಗ ದೇಶವ್ಯಾಪಿ ವಿಸ್ತಾರವಾಗುತ್ತಿದೆ.
ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದ ನಂತರ ಸಂಯುಕ್ತ ಕಿಸಾನ್ ಮೋರ್ಚಾ ಫೆಬ್ರವರಿ 1ರಂದು ಸಂಸತ್ತಿಗೆ ಮೆರವಣಿಗೆ ನಡೆಸುವ ಯೋಜನೆ ಕೈಬಿಟ್ಟಿತು. ಅಂದರೆ ರೈತರ ಹೋರಾಟ ಮತ್ತೆ ಹಿಂಸೆಗೆ ತಿಗಬಾರದು ಎಂಬ ಕಾರಣಕ್ಕೆ. ಆದರೆ ಮೊನ್ನೆ ಫೆ.೭ರಂದು ಕರೆ ನೀಡಿದ್ದ ಚಕ್ಕಾ ಜಾಮ್‌ ಚಳವಳಿಯು ಸಹ ಅಹಿಂಸಾತ್ಮಕ ಹಾಗೂ ಸತ್ಯಾಗ್ರಹದ ರೂಪದ ರಾಜಕೀಯ ಪ್ರಕ್ರಿಯೆ  ದೇಶದ ಸುಸ್ಥಾಪಿತ ಸಂಪ್ರದಾಯವನ್ನೇ ಅನುಸಿರಿಸಿತು ಹಾಗೂ ಮತ್ತಷ್ಟು ವ್ಯಾಪಕವೂ ಆಯಿತು.
ಅಂದರೆ ಈ ಅಹಿಂಸಾತ್ಮಕ ರೈತ ಹೋರಾಟವು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಹಿಂಸಾತ್ಮಕ ಸತ್ಯಾಗ್ರಹ ಸಂಪ್ರದಾಯಕ್ಕೆ ಮತ್ತೆ ಚಾಲನೆ ನೀಡಿತು. ಇದು ಇತ್ತೀಚಿನ ದಿನಗಳಲ್ಲಿ ಕಳೆದುಹೋದಂತೆ ಭಾಸವಾಗಿದ್ದ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟದ ಪರಂಪರೆಗೆ ಮತ್ತೆ ಉಸಿರಾಡುವಂತೆ ಮಾಡುವ ಪ್ರಯತ್ನ ಮಾಡಿದೆ. ನಮ್ಮ ಭಾರತೀಯರ ಮೂಲ ಅಧ್ಯಾತ್ಮದ ಸೆಲೆಯೂ ಇದೇ ಆಗಿದೆ.
ಈಗಿನ ಡಿಜಿಟಲ್‌ ಯುಗದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸತ್ಯದ ತಲೆಯ ಮೇಲೆಯೇ ಸುಳ್ಳನ್ನು ಸತ್ಯವೆಂದು ವಿಜೃಂಭಿಸುವಂತೆ ಮಾಡುವ ಕಾಲದಲ್ಲಿ, ಟ್ರೋಲಿಂಗ್‌, ವೈರಲ್‌ ಕಾಲಘಟ್ಟದಲ್ಲಿ ಈ ಅಹಿಂಸಾತ್ಮಕ ಹೋರಾಟ, ಸತ್ಯಾಗ್ರಹದ ಪರಿಕಲ್ಪನೆ ಜೀವಂತವಾಗಿರುತ್ತದೆಯೇ ಎಂದು ಭಾವಿಸಿದ್ದವರಿಗೆ ರೈತರ ಈ ಅಹಿಂಸಾತ್ಮಕ ಹೋರಾಟವಯ  ಮತ್ತೆ ನಾವು ಹಿಂದಿನ ಹೋರಾಟದ ಮೌಲ್ಯಗಳತ್ತ ಹೊರಳುವಂತೆ ಮಾಡಿದೆ. ಜೊತೆಗೆ ಸತ್ಯಾಗ್ರಹದ ಬಗ್ಗೆ ಅಸಡ್ಡೆಯಾಗಿ ಮಾತನಾಡುವವರಿಗೆ ಉತ್ತರವನ್ನೂ ಕೊಟ್ಟಿದೆ.
ಅಹಿಂಸೆಯಲ್ಲಿ ನಂಬಿಕೆ ಇಟ್ಟುಕೊಳ್ಳುವುದು ಏಕೆ ಯೋಗ್ಯ?:
1999ರಲ್ಲಿ ಸಿಯಾಟಲ್‌ನಲ್ಲಿ ನಡೆದ ಡಬ್ಲ್ಯುಟಿಒ ಒಪ್ಪಂದದ ವಿರುದ್ಧದ ಪ್ರತಿಭಟನೆಯಲ್ಲಿ ಇದು ನಾಟಕೀಯವಾಗಿ ಸ್ಪಷ್ಟವಾಗಿತ್ತು. ಸಿಯಾಟಲ್‌ನಾದ್ಯಂತ ಮಾನವ ಗೋಡೆ ರಚಿಸಲು ಮತ್ತು ಡಬ್ಲ್ಯುಟಿಒ ಸಚಿವಾಲಯದ ಸಭೆಯನ್ನು ಸ್ಥಗಿತಗೊಳಿಸಲು ಜಗತ್ತಿನೆಲ್ಲೆಡೆಯಿಂದ ಬಂದ ಕಾರ್ಯಕರ್ತರು ಭಾರತದ ಇದೇ ಅಹಿಂಸಾತ್ಮಕ ಚಳವಳಿಯ ಮಾದರಿಯನ್ನೇ ಅನುಸರಿಸಿದರು. ಆದರೆ ಆಗಲೂ ಕೆಲವರು ಬಹುರಾಷ್ಟ್ರೀಯ ಬ್ರಾಂಡ್‌ಗಳ ಆಸ್ತಿಗೆ ಹಾನಿ ಮಾಡಿದ್ದರು.
ನೂತನ ಕೃಷಿ ಕಾನೂನಗಳ ರದ್ದತಿಗೆ ಒತ್ತಾಯಿಸಿ ನಡೆಯುತ್ತಿರುವ ರೈತ ಹೋರಾಟದಲ್ಲಿಯೂ ಹೀಗೆ ಆಗಿದೆ. ಗಣರಾಜ್ಯೋತ್ವದಂದು ನಡೆದ ರೈತರ ಟ್ರ್ಯಾಕ್ಟರ್‌ ಮೆರವಣಿಗೆ ಹಾಗೂ ರೈತರ ಪ್ರದರ್ಶನವನ್ನು ಕೆಲವರು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಯತ್ನಿಸಿದರು. ಇದಾದ ನಂತರ ಹೋರಾಟದ ದಿಕ್ಕು ತಪ್ಪುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಹೋರಾಟ ಮತ್ತಷ್ಟು ಅಹಿಂಸಾತ್ಮಕ ಮಾರ್ಗದತ್ತ ಹೊರಳಿತು. ರೈತರ ಹೋರಾಟದ ಶಾಂತಿಯುತ ವಿಧಾನಗಳು ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ.
ಅಹಿಂಸೆಯ ಬಗ್ಗೆ ಸಿನಿಕತನವು ಸದಾ ಇರುತ್ತದೆ. ಅದು ಹಿಂದೆಯೂ ಇತ್ತು, ಈಗಲೂ ಇದೆ. ಮುಂದೆಯೂ ಇರಲಿದೆ. ಅದೇನೇ ಇದ್ದರೂ ಇಲ್ಲಿ ಸ್ಪಷ್ಟವಾಗುವ ಸಂಗತಿಯೆಂದರೆ, ಅಹಿಂಸಾತ್ಮಕ ಪ್ರತಿಭಟನಾಕಾರರ ವಿರುದ್ಧ ಆಡಳಿತವು ಬಲ ಪ್ರಯೋಗ ಮಾಡುವುದು ಕಷ್ಟವಾಗುತ್ತದೆ ಎಂಬುದು. ಜೊತೆಗೆ ಅದಕ್ಕೆ ಹಾಗೆ ಮಾಡಲು ಕಾರಣವೇ ಇರುವುದಿಲ್ಲ.
ಮಾಧ್ಯಮವೂ ಇತ್ತೀಚಿಗೆ ಅಹಿಂಸೆಗಿಂತ ಹಿಂಸೆಯ ವರದಿಗೆ ಪ್ರಾಧಾನ್ಯತೆ ನೀಡುವುದರಿಂದ, ಈ ಹಿಂಸಾತ್ಮಕ ಪ್ರತಿಭಟನೆ ಅಥವಾ ಹೋರಾಟಗಳ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಈ ಅಹಿಂಸಾತ್ಮಕ ಚಳವಳಿಗಳ ಯುಗ ಇತ್ತೀಚಿನ ದಿನಗಳಲ್ಲಿ ಮಾಸಿದಂತೆ ಕಂಡಿದ್ದವು.ಆದರೆ ಮಾಸಿಲ್ಲ ಎಂಬುದು ಈಗ ಅರಿವಿಗೆ ಬರುತ್ತಿದೆ.
ಅಹಿಂಸಾತ್ಮಕ ಹೋರಾಟ ಮಾಡುತ್ತಿರುವ ರೈತರ ದೃಢತೆಯಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸರ್ಕಾರಕ್ಕೆ ಏನೂ ಮಾಡುವ ಹಾಗೆಯೂ ಇಲ್ಲ, ಯಾಕೆಂದರೆ ಪ್ರತಿಭಟಿಸುತ್ತಿರುವವರು ಹಿಂಸೆ ಮಾಡುವವರಲ್ಲ, ಆದರೆ ಸುಮ್ಮನೆ ಕುಳಿತುಕೊಳ್ಳಲಿಕ್ಕೂ ಆಗುವುದಿಲ್ಲ. ಈ ಹೋರಾಟ ಒಂದರ್ಥದಲ್ಲಿ ಸರ್ಕಾರವನ್ನು ಸಂದಿಗ್ಧತೆಗೆ ಸಿಲುಕಿಸಿದೆ. ಅದರಲ್ಲಿಯೂ ರಾಕೇಶ ಟಿಕಾಯಿತ್‌ ಅವರು ಅನುಸರಿಸಿದ ಅಹಿಂಸಾತ್ಮಕ ಹೋರಾಟಕ್ಕೆ ನಿಧಾನವಾಗಿಯಾದರೂ ದೇಶಾದ್ಯಂತ ಸಿಗುತ್ತಿರುವ ಸ್ಪಂದನೆ ಭಾರತದಲ್ಲಿ ಗಾಂಧೀಜಿಯವರು ಅಂದು ಹಾಕಿಕೊಟ್ಟ ಸತ್ಯಾಗ್ರಹದ ಪರಂಪರೆ ಮಾಸಿಲ್ಲ ಎಂಬುದನ್ನು ತೋರಿಸುತ್ತದೆ.
ಇದರಿಂದೇನಾಗುತ್ತದೆ..?:
ಅನೇಕರಿಗೆ ರೈತರ ಪ್ರತಿಭಟನೆ ಆತಂಕ ಉಂಟುಮಾಡುತ್ತದೆ. ಏಕೆಂದರೆ ಇಂತಹ ವ್ಯಾಪಕ ಸ್ವಯಂಪ್ರೇರಿತ ಭಾಗವಹಿಸುವಿಕೆ ತಡೆಯಲು ಅವರರ್ಥದಲ್ಲಿ ಸರ್ಕಾರ ಆಸಕ್ತಿ ತೋರುತ್ತಿಲ್ಲ.  ಯಾವುದೇ ಸರ್ಕಾರವಿರಲಿ, ಜನಸಂಖ್ಯೆಯ ಒಂದು ಭಾಗವು ಈ ರೀತಿಯ ರಾಜ್ಯಾಧಿಕಾರವನ್ನು ಯಾವತ್ತೂ ಬೆಂಬಲಿಸುತ್ತದೆ.
70 ವರ್ಷಗಳಲ್ಲಿ, ಅಹಿಂಸೆ ಮಾರ್ಗವು ಸಮಾನಾಂತರ ಆಯಾಮಗಳಲ್ಲಿ ಬೆಳವಣಿಗೆ ಕಂಡಿದೆ. ಒಂದು ಸಂಪೂರ್ಣವಾಗಿ ಅಧಿಕಾರದಲ್ಲಿರುವವರು ಹಂಬಲಿಸುವುದನ್ನು ನಿರಾಕರಿಸುವ ಮೂಲಕ ಅವರನ್ನು ಸೋಲಿಸುವ ಗುರಿ ಹೊಂದಿದೆ.

ಎರಡನೆಯದ್ದು ಹೆಚ್ಚು ನೈತಿಕವಾಗಿ ಹಾಗೂ ಮೂಲಭೂತವಾಗಿ ಗಾಂಧಿವಾದವಾಗಿದೆ.ಅಂದರೆ ಈ ಅಹಿಂಸಾತ್ಮಕ ಹೋರಾಟವು ಆಡಳಿತ ಮಾಡುವವರು ತಮ್ಮ ಮಾರ್ಗಗಳ ದೋಷ ಸರಿಪಡಿಸಿಕೊಂಡು  ನ್ಯಾಯಸಮ್ಮತ ಹಾಗೂ ಸೂಕ್ತ ಹಾದಿಗೆ ಬರಲು ಸಾಧ್ಯವಾಗುವಂತೆ ಮಾಡುವುದು. ಈ ಎರಡೂ ಆಯಾಮಗಳ ಸಂಯೋಜನೆಯು ವೈವಿಧ್ಯಮಯ ಸಂದರ್ಭಗಳಲ್ಲಿ ಕೆಲಸ ಮಾಡಿದೆ ಹಾಗೂ ಇದು ಹಿಂಸಾತ್ಮಕ ದಂಗೆಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. .
ಆದರೆ ಅಹಿಂಸಾತ್ಮಕ ಹೋರಾಟಕ್ಕೆ ಅನಂತ ತಾಳ್ಮೆ ಬೇಕು. ಹೀಗಾದಾಗ ಮಾತ್ರ ಅಹಿಂಸಾತ್ಮಕ ಹೋರಾಟಕ್ಕೆ ಅನಂತ ಶಕ್ತಿ ಬರುತ್ತದೆ, ಅದು ತಾಳ್ಮೆ ಕಳೆದುಕೊಂಡ ಹಿಂಸಾ ರೂಪಕ್ಕೆ ತಿರುಗಿದರೆ ಅನಾಹುತವೇ ಆಗುತ್ತದೆ.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement