ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕ ಯುದ್ಧ ನೌಕೆಗಳ ಮಿಲಿಟರಿ ಕವಾಯತು

ಈ ತಿಂಗಳ ಆರಂಭದಲ್ಲಿ ಪರ್ಷಿಯನ್ ಕೊಲ್ಲಿಯಿಂದ ಹೊರತೆಗೆಯಲಾದ ಅಮೆರಿಕದ ನಿಮಿಟ್ಜ್ ಸೇರಿದಂತೆ ಎರಡು ಅಮರಿಕನ್ ವಿಮಾನ ವಾಹಕ ನೌಕೆಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಮಿಲಿಟರಿ ಕವಾಯತು ನಡೆಸಿದ್ದು ಕ್ಸಿ ಜಿನ್‌ಪಿಂಗ್ ಅವರ ಚೀನಾಕ್ಕೆ ಸ್ಪಷ್ಟ ಸಂಕೇತವಾಗಿ ನೀಡಿದೆ ಹಾಗೂ ಅಧ್ಯಕ್ಷ ಜೋ ಬಿಡನ್ ಬೀಜಿಂಗ್‌ಗೆ ಟ್ರಂಪ್ ಆಡಳಿತದ ನೀತಿ ಮುಂದುವರಿಸುವುದಾಗಿ ಹೇಳಿದಂತಾಗಿದೆ.
ಎರಡು ಸ್ಟ್ರೈಕ್ ಗುಂಪುಗಳಾದ ಥಿಯೋಡರ್ ರೂಸ್ವೆಲ್ಟ್ ಮತ್ತು ನಿಮಿಟ್ಜ್ ಹಡಗುಗಳು ಮತ್ತು ವಿಮಾನಗಳ ಸಂಘಟಿತ ಕಾರ್ಯಾಚರಣೆಗಳು ನಡೆದವು ಎಂದು ಯುಎಸ್ ಪೆಸಿಫಿಕ್ ಫ್ಲೀಟ್ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
. ಕಳೆದ ವಾರ, ಬೀಜಿಂಗ್ ಅಮರಿಕದ ಜಾನ್ ಎಸ್. ಮೆಕೇನ್ ಉಪಸ್ಥಿತಿಗೆ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿತ್ತು. ದಕ್ಷಿಣ ಚೀನಾ ಸಮುದ್ರ ಪ್ರದೇಶದ ಪ್ಯಾರಾಸೆಲ್ ದ್ವೀಪದ ಸಮೀಪದಿಂದ ಯುಎಸ್ ಮಾರ್ಗದರ್ಶಿ-ಕ್ಷಿಪಣಿ ವಿನಾಶಕ ಓಡಿಸಲು ಸಾಧ್ಯವಾಯಿತು ಎಂದು ಹೇಳಿತ್ತು.ಇದರ ಬೆನ್ನಿಗೇ ಅಮೆರಿಕ ಈ ಕ್ರಮ ಕೈಗೊಂಡಿದೆ.
ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಂಭಾಷಣೆಯಲ್ಲಿ, ಕ್ವಾಡ್‌ ಭದ್ರತಾ ಸಂವಾದ, ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಕಾರ್ಯತಂತ್ರದ ಸಂವಾದದ ಬಗ್ಗೆ ಸ್ಪಷ್ಟ ಉಲ್ಲೇಖವನ್ನು ನೀಡಿದ ಒಂದು ದಿನದ ನಂತರ ಚೀನಾದ ನೆರೆಹೊರೆಯಲ್ಲಿರುವ ಅಮೆರಿಕದ ಸೂಪರ್ ಕ್ಯಾರಿಯರ್ಗಳ ಕವಾಯತು ಸುದ್ದಿ ಬಂದಿತು. ಅದು ಹೆಚ್ಚಾಗಿ ಬೀಜಿಂಗ್ ಮೇಲೆ ಕೇಂದ್ರೀಕರಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement