ಚೀನಾದಿಂದ ಲಡಾಕ್‌ ಗಡಿಯಿಂದ ೨೦೦ ಟ್ಯಾಂಕರ್‌ಗಳು ವಾಪಸ್‌

ನವ ದೆಹಲಿ:ಪೂರ್ವ ಲಡಾಕ್‌ನಲ್ಲಿ ಚೀನಾ ತ್ವರಿತವಾಗಿ ೨೦೦ಕ್ಕೂ ಹೆಚ್ಚು ಯುದ್ಧ ಟ್ಯಾಂಕರ್‌ಗಳನ್ನು ವಾಪಸ್ ಕರೆಸಿಕೊಂಡಿದೆ.
ಭಾರತ ಮತ್ತು ಚೀನಾ ನಡುವಣ ೯ನೇ ಸುತ್ತಿನ ಮಾತುಕತೆ ನಡೆದ ನಂತರ ಗಡಿಯಲ್ಲಿ ಜಮಾವಣೆ ಮಾಡಲಾಗಿದ್ದ ಸೇನೆಯನ್ನುಹಿಂತಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.
ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ನಿರ್ಮಾಣವಾದ ೯ ತಿಂಗಳ ನಂತರ ಗಡಿ ಬಿಕ್ಕಟ್ಟನ್ನು ಶಮನಗೊಳಿಸಲು ಎರಡು ರಾಷ್ಟ್ರಗಳು ಸೇನಾ ಹಿಂತೆಗೆತಕ್ಕೆ ಸಹಮತ ವ್ಯಕ್ತಪಡಿಸಿದ್ದವು.
ಎರಡು ದಿನಗಳಿಂದ ಚೀನಾ ತ್ವರಿತವಾಗಿ ಸೇನೆ ಯುದ್ಧ ಟ್ಯಾಂಕರ್‌ಗಳನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದೆ. ಅದೇ ರೀತಿ ಭಾರತದ ಸೇನಾಪಡೆ ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೀನಾ ಸೇನೆ ಪಾಂಗೋಂಗ್ ಸರೋವರದ ಫಿಂಗರ್ ೮ ಭಾಗಕ್ಕೆ ಸೇನೆಯನ್ನು ಹಿಂಪಡೆದರೆ, ಭಾರತೀಯ ಸೇನೆ ಧನ್‌ಸಿಂಗ್ ತಾಪಾ ಪೋಸ್ಟ್ ಉತ್ತರ ತೀರ ಪ್ರದೇಶದ ಫಿಂಗರ್ ೩ ಭಾಗಕ್ಕೆ ಸೇನೆಯನ್ನುಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿವೆ. ೨ ಕಡೆ ಸೇನೆ ಹಿಂದಕ್ಕೆ ಕರೆಸಿಕೊಳ್ಳುವ ಸಂಪೂರ್ಣ ಕಾರ್ಯಕ್ಕೆ ೧೦ ರಿಂದ ೧೫ ದಿನಗಳು ಬೇಕಾಗುತ್ತವೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ತನ್ನ ಎರಡು ಮರಿಗಳನ್ನು ರಕ್ಷಿಸಲು ತನ್ನ ಜೀವವನ್ನೇ ಪಣಕ್ಕಿಟ್ಟು ಸಿಂಹಿಣಿ ಜೊತೆ ಹೋರಾಡಿದ ತಾಯಿ ಚಿರತೆ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement