ಭಾರತದ ಭೂಪ್ರದೇಶ ಚೀನಾಕ್ಕೆ ನೀಡಿದ ಹೇಡಿ: ಪ್ರಧಾನಿ ಮೋದಿಗೆ ಜರೆದ ರಾಹುಲ್‌

ನವ ದೆಹಲಿ: ಪೂರ್ವ ಲಡಾಖ್‌ನ ಪಾಂಗೊಂಗ್‌ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿ ಭಾರತ ಮತ್ತು ಚೀನಾ ಸೇನಾ ಹಿಂತೆಗೆತದ ಕುರಿತು ಒಪ್ಪಂದ ಮಾಡಿಕೊಂಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಘೋಷಿಸಿದ ಒಂದು ದಿನದ ನಂತರ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಏಕೆ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಸೈನ್ಯವು ಈಗ ಫಿಂಗರ್ 3ನಲ್ಲಿ ಬೀಡುಬಿಡಲಿದೆ ಎಂದು ಸೂಚಿಸಿದ ಅವರು, ಫಿಂಗರ್ 4ರಿಂದ ಯಅಕೆ ಹಿಂದಕ್ಕೆ ಸರಿಯುತ್ತಾರೆ, ಇದು ಭಾರತದ ಭೂಪ್ರದೇಶವೇ ಆಗಿದೆ, ಪ್ರಧಾನಿ ಮೋದಿ ನಮ್ಮ ಭೂಪ್ರದೇಶವನ್ನು ಚೀನಿಯರಿಗೆ ಏಕೆ ಬಿಟ್ಟುಕೊಟ್ಟಿದ್ದಾರೆ” ಎಂದು ಪ್ರಶ್ನಿಸಿದರು.
ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಡಿ ಪ್ರಧಾನಿ ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ.ನಮ್ಮ ಸೈನ್ಯದ ತ್ಯಾಗಕ್ಕೆ ದ್ರೋಹ ಮಾಡುತ್ತಿದ್ದಾರೆ. ಭಾರತದಲ್ಲಿ ಯಾರಿಗೂ ಇದನ್ನು ಮಾಡಲು ಅವಕಾಶಕೊಡಬಾರದು ಎಂದು ಹೇಳಿದರು.
ದೇಶದ ಭೂಪ್ರದೇಶವನ್ನು ರಕ್ಷಿಸುವುದು ಪ್ರಧಾನಮಂತ್ರಿಯ ಜವಾಬ್ದಾರಿಯಾಗಿದೆ. ಅವರು ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಅವರ ಸಮಸ್ಯೆ, ನನ್ನದಲ್ಲ ಎಂದು ಹೇಳಿದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮೇಲೆ ವಾಗ್ದಾಳಿ ನಡೆಸಿದ ರಾಹುಲ್‌ ಗಾಂಧಿ, ರಕ್ಷನಾ ಸಚಿವರು ಸಂಸತ್ತಿನಲ್ಲಿ ಚೀನಾ ಪ್ರವೇಶಿಸಿದ ಪ್ರಮುಖ ಕಾರ್ಯತಂತ್ರದ ಪ್ರದೇಶವಾದ ಡೆಪ್ಸಾಂಗ್ ಪ್ರದೇಶದ ಕುರಿತು ಮಾತನಾಡಲಿಲ್ಲ ಎಂದು ಟೀಕಿಸಿದರು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

ಪೂರ್ವ ಲಡಾಖ್‌ನ ಪಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿ ಭಾರತ ಮತ್ತು ಚೀನಾಸೈನ್ಯ ಹಿಂಪಡೆಯವಿಕೆಯ ಒಪ್ಪಂದಕ್ಕೆ ಬಂದಿರುವುದಾಗಿ ರಾಜನಾಥ್ ಸಿಂಗ್ ಗುರುವಾರ ಸಂಸತ್ತಿನಲ್ಲಿ ಪ್ರಕಟಿಸಿದ್ದರು. ಪೂರ್ವ ಲಡಾಕ್‌ನಲ್ಲಿ ಮಿಲಿಟರಿ ಮುಖಾಮುಖಿ ಸಂಘರ್ಷ ನಿವಾರಿಸುವ ಒಪ್ಪಂದದ ವಿವರಗಳನ್ನು ಹಂಚಿಕೊಂಡ ಸಿಂಗ್, ಚೀನಾದೊಂದಿಗಿನ ನಿರಂತರ ಮಾತುಕತೆಯಲ್ಲಿ ಭಾರತವು ಏನನ್ನೂ ಒಪ್ಪಿಕೊಂಡಿಲ್ಲ ಎಂದು ರಾಜ್ಯಸಭೆಗೆ ಭರವಸೆ ನೀಡಿದರು. ಭಾರತ ತನ್ನ ಭೂಪ್ರದೇಶದ ಒಂದು ಇಂಚು ಪ್ರದೇಶವನ್ನು ಯಾರೂ ತೆಗೆದುಕೊಳ್ಳಲು ಅನುಮತಿ ನೀಡುವುದಿಲ್ಲ ಎಂದೂ ಹೇಳಿದ್ದರು.

ಕಳೆದ ಮೇ 5ರ ಮುಂಚಿತವಾಗಿ ಅಸ್ತಿತ್ವದಲ್ಲಿದ್ದ ಪರಿಸ್ಥಿತಿ ಪುನಃಸ್ಥಾಪಿಸುತ್ತದೆ ಎಂದು ರಕ್ಷಣಾ ಸಚಿವರು ಹೇಳಿದ್ದರು. “ಆರಂಭಿಕವಾಗಿ ಸಂಪೂರ್ಣ ನಿಷ್ಕ್ರಿಯತೆ ಸಾಧಿಸಬೇಕು ಮತ್ತು ಸಂಪೂರ್ಣವಾಗಿ ಇದಕ್ಕೆ ಬದ್ಧರಾಗಿರಬೇಕು ಎಂದು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದರು.
“ಚೀನಾ ತನ್ನ ಸೈನ್ಯವನ್ನು ಉತ್ತರದ ದಂಡೆಯಲ್ಲಿ ಫಿಂಗರ್ 8ರ ಹಿಂದಕ್ಕೆ ಒಯ್ಯುತ್ತದೆ ಹಾಗೂ ಭಾರತವು ತನ್ನ ಪಡೆಗಳನ್ನು ಫಿಂಗರ್ 3 ಬಳಿಯ ಧನ್ ಸಿಂಗ್ ಥಾಪಾ ಪೋಸ್ಟ್‌ನಲ್ಲಿ ಶಾಶ್ವತ ನೆಲೆಯಲ್ಲಿ ಇರಿಸಲಿದೆ ಎಂದು ತಿಳಿಸಿದ್ದರು.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement