ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭಾರತೀಯ ಮೂಲದ ಆಕಾಂಕ್ಷಾ ಸ್ಪರ್ಧೆ

ವಿಶ್ವ ಸಂಸ್ಥೆ : ಭಾರತೀಯ ಮೂಲದ ವಿಶ್ವಸಂಸ್ಥೆ ಉದ್ಯೋಗಿ ಕಾಂಕ್ಷಾ ಆರೋರಾ (34) ವಿಶ್ವಸಂಸ್ಥೆಯ ಮುಂದಿನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲು ಉಮೇದುವಾರಿಕೆ ಘೋಷಿಸಿದ್ದಾರೆ.
ಪ್ರಸ್ತುತ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ವಿರುದ್ಧ ಸ್ಪರ್ಧಿಸಲು ಬಯಸಿರುವ ಮೊದಲ ಮಹಿಳಾ ಅಭ್ಯರ್ಥಿ ಇವರಾಗಿದ್ದಾರೆ. ಭಾರತದಲ್ಲಿ ಜನಿಸಿದ ಆಕಾಂಕ್ಷಾ ಕೆನಡಾ ಪಾಸ್‍ಫೋರ್ಟ್ ಹೊಂದಿದ್ದಲ್ಲದೆ ಸಾಗರೋತ್ತರ ಪೌರತ್ವದ ಮೊದಲ ಅಭ್ಯರ್ಥಿ ಎನಿಸಿದ್ದಾರೆ. ಎಂ
2022ರ ಜನವರಿಯಿಂದ ಆರಂಭವಾಗುವ ಎರಡನೇ ಅವಧಿಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿರುವ ಗುಟೆರೆಸ್‍ಗೆ ಎದುರಾಳಿಯಾಗಿ ಸ್ಪರ್ಧಿಸಲು ಆರೋರಾ ತಯಾರಿ ನಡೆಸಿದ್ದಾರೆ. ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎಡಿಪಿ) ಲೆಕ್ಕಪರಿಶೋಧಕ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿರುವ ಆರೋರ, ವಿಶ್ವದ ಉನ್ನತ ರಾಜತಾಂತ್ರಿಕ ಹುದ್ದೆಗೆ ಸ್ಪರ್ಧಿಸುವ ಅಭಿಯಾನವನ್ನು ಈ ತಿಂಗಳಲ್ಲಿ ಆರಂಭಿಸಲಿದ್ದಾರೆ.

ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವದ 10ನೇ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಇದುವರೆಗೆ ಯಾವೊಬ್ಬ ಮಹಿಳೆ ಅಲಂಕರಿಸಿಲ್ಲ. ಈ ಬಾರಿ ಅದು ಸಾಧ್ಯವಾಗುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಅಕಾಂಕ್ಷ ಹೇಳಿಕೆ ನೀಡಿದ್ದಾರೆ. ಡಿಸೆಂಬರ್ 31ರೊಂದು ಗುಟೆರೆಸ್ ಅಧಿಕಾರಾವಧಿ ಮುಗಿಯಲಿದೆ. 2022ರ ಜನವರಿ 1ರಂದು ಹೊಸ ಪ್ರಧಾನ ಕಾರ್ಯದರ್ಶಿ ನೇಮಕಗೊಳ್ಳಲಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement