ಆನೆಯ ಮೇಲೆ ಹಲ್ಲೆ: ಮಾವುತ- ಸಹಾಯಕನ ಬಂಧನ

ತಮಿಳುನಾಡಿನ ಮೆಟ್ಟುಪಾಳಯಂ ಬಳಿಯ ತೆಕ್ಕಂಪಟ್ಟಿಯಲ್ಲಿನ ಸರಕಾರಿ ಪುನರ್ವಸತಿ ಶಿಬಿರದ ಆನೆಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಮಾವುತ ಹಾಗೂ ಅವನ ಸಹಾಯಕನನ್ನು ಬಂಧಿಸಲಾಗಿದೆ.
ವಿನಿಲ್ಲುಕುಮಾರ ಹಾಗೂ ಸಹಾಯಕ ಶಿವಪ್ರಕಾಶ ಶ್ರೀ ವಿಲ್ಲಿಪುತ್ತೂರಿನ ಆಂಡಾಲ್‌ ದೇವಾಲಯದ ೧೮ ವರ್ಷದ ಹೆಣ್ಣು ಆನೆಯನ್ನು ಕೋಲುಗಳಿಂದ ಹೊಡೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಕ್ರಮ ಕೈಗೊಳ್ಳಲಾಗಿದೆ.
ಮಾವುತನ ಆಜ್ಞೆ ಪಾಲಿಸಲು ಆನೆ ನಿರಾಕರಿಸಿದ್ದರಿಂದ ಸಿಟ್ಟಾದ ಮಾವುತ ಆನೆಯ ಕಾಲುಗಳನ್ನು ಸರಪಳಿಯಿಂದ ಬಿಗಿದು, ಅದರ ಮೇಲೆ ಕೋಲುಗಳಿಂದ ಹಲ್ಲೆ ನಡೆಸಿದ. ಹೆಣ್ಣಾನೆಯು ಮತ್ತೊಂದು ಆನೆಯನ್ನು ನೋಡಿ ಭೀತಿಗೊಳಗಾಗಿತ್ತು ಎಂದು ಸ್ಥಳದಲ್ಲಿದ್ದ ಇನ್ನೊಬ್ಬ ಮಾವುತ ತಿಳಿಸಿದ್ದಾನೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ತೆರಿಗೆ ದಾಳಿಯಲ್ಲಿ ದಾಖಲೆ ಪ್ರಮಾಣದ ನಗದು ಹಣ ವಶ : ತನ್ನ ಪಕ್ಷದ ಸಂಸದರಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್

ನಿಮ್ಮ ಕಾಮೆಂಟ್ ಬರೆಯಿರಿ

advertisement