ಟ್ವಿಟರ್‌ ಮಾಹಿತಿ: ಬಿಜೆಪಿ ಕಾಲೆಳೆದ ಟ್ವೀಟಿಗರು

ಸಾಮಾಜಿಕ ಜಾಲತಾಣ ಹಾಗೂ ಓವರ್‌ ದಿ ಟಾಪ್‌ (ಒಟಿಟಿ) ವೇದಿಕೆಗಳ ಮಾರ್ಗಸೂಚಿ ಘೋಷಣೆ ಸಂದರ್ಭದಲ್ಲಿ ಸಚಿವರು ತಿಳಿಸಿದ ಅಂಕಿ ಅಂಶಗಳು ಬಿಜೆಪಿಯನ್ನು ಮುಜುಗರಕ್ಕೀಡುಮಾಡಿವೆ.
ಮಾಹಿತಿ ತಂತ್ರಜ್ಞಾನ ಸಚಿವ ಸಚಿವ ರವಿಶಂಕರ ಪ್ರಸಾದ್‌ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವ್ಯಾಟ್ಸ್‌ಪ್‌ ಬಳಕೆದಾರರು ೫೩ ಕೋಟಿ, ಯುಟ್ಯೂಬ್‌ ಬಳಕೆದಾರರು ೪೪.೮ ಕೋಟಿ, ಫೇಸ್‌ಬುಕ್‌ ೪೧ ಕೋಟಿ, ಇನ್ಸ್‌ಟಾಗ್ರಾಮ್‌ ೨೧ ಕೋಟಿ, ಟ್ವಿಟರ್‌ ೧.೭೫ ಕೋಟಿ ಬಳಕೆದಾರರಿದ್ದಾರೆ ಎಂದು ಮಾಹಿತಿ ನೀಡಿದರು. ಟ್ವೀಟರ್‌ ಬಳಕೆದಾರರು ಕೇವಲ ೧.೭೫ ಕೋಟಿ ಇದ್ದರೆ, ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ಅನ್ನು ೬.೬ ಕೋಟಿ ಜನರು ಹೇಗೆ ಫಾಲೋ ಮಾಡುತ್ತಾರೆ ಎಂದು ಟ್ವೀಟಿಗರು ಕಾಲೆಳೆದಿದ್ದಾರೆ. ಮೋದಿಯವರ ಟ್ವೀಟ್‌ ಖಾತೆಯಲ್ಲಿ ಫಾಲೊವರ್ಸ್‌ ಸಂಖ್ಯೆ ೬.೬ ಕೋಟಿ ಎಂದು ತಿಳಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ಏಷ್ಯನ್ ಗೇಮ್ಸ್ 2023: ಮೊದಲ ದಿನವೇ 5 ಪದಕ ಗೆದ್ದ ಭಾರತ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement