ಮುಕೇಶ ಅಂಬಾನಿ ಮನೆ ಸಮೀಪ ಕಾರಿನಲ್ಲಿ ಸ್ಫೋಟಕ: ಹೊಣೆ ಹೊತ್ತ ಜೈಶ್-ಉಲ್-ಹಿಂದ್ ಉಗ್ರ ಸಂಘಟನೆ

ಮುಂಬೈ: ರಿಲಯನ್ಸ್‌ ದಿಗ್ಗಜ ಮುಖೇಶ್ ಅಂಬಾನಿಯ ನಿವಾಸದ ಸಮೀಪ ಸ್ಫೋಟಕಗಳನ್ನು ಹೊಂದಿರುವ ವಾಹನ ಪತ್ತೆಯಾಗಿದ್ದ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.
ಉದ್ಯಮಿ ಮುಕೇಶ ಅಂಬಾನಿಯವರ ಮುಂಬೈ ನಿವಾಸದ ಬಳಿ ಸ್ಫೋಟಕಗಳನ್ನು ಇಟ್ಟಿರುವ ಬಗೆಗೆ ಜೈಶ್-ಉಲ್-ಹಿಂದ್ ಉಗ್ರ ಸಂಘಟನೆ ಜವಾಬ್ದಾರಿ ಹೊತ್ತಿದೆ. ಟೆಲಿಗ್ರಾಮ್ ಅಪ್ಲಿಕೇಶನ್‌ನ ಸಂದೇಶದ ಮೂಲಕ ಉಗ್ರ ಸಾಂಘಟನೆ ಸ್ಫೋಟಕಗಳನ್ನು ಇಟ್ಟಿದ್ದು ತಾವೇ ಎಂದು ಘೋಷಿಸಿಕೊಂಡಿದೆ.
ಅಂಬಾನಿ ಮನೆಯ ಬಳಿ ಸ್ಫೋಟಕಗಳಿದ್ದ ಎಸ್‌ಯುವಿ ಇರಿಸಿದ ಸಹೋದರ ಸುರಕ್ಷಿತವಾಗಿ ಮನೆಗೆ ತಲುಪಿದ್ದಾನೆ. ಇದು ಕೇವಲ ಟ್ರೇಲರ್, ಬಿಗ್ ಸಿನಿಮಾ ಇನ್ನಷ್ಟೇ ಬರಲಿದೆ.”ಎಂದು ಎಂದು ಆ ಟೆಲಿಗ್ರಾಮ್‌ ಸಂದೇಶದಲ್ಲಿ ಹೇಳಲಾಗಿದೆ. ಆದರೆ ಇದು ಅವರದ್ದೇ ಹೌದೋ ಅಥವಾ ಇನ್ನಾರಾದರೂ ಮಾಡಿದ್ದಾರೋ ಎಬುದು ದೃಢಪಡಬೇಕಿದೆ.
ಉದ್ಯಮಿ ಮುಖೇಶ್ ಅಂಬಾಯವರ ದಕ್ಷಿಣ ಮುಂಬೈನಲ್ಲಿರುವ ನಿವಾಸದ ಬಳಿ ಜಿಲೆಟಿನ್ ಕಡ್ಡಿಗಳು, ಸ್ಫೋಟಕ ತುಂಬಿದ್ದ ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನ ಗುರುವಾರ ಪತ್ತೆಯಾಗಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಅಂಬಾನಿಯ ಬಹುಮಹಡಿ ನಿವಾಸವಾದ “ಆಂಟಿಲಿಯಾ” ಬಳಿ ಸ್ಕಾರ್ಪಿಯೋ ವಾಹನವನ್ನು ನಿಲ್ಲಿಸಲಾಗಿತ್ತು.
ಜೈಶ್-ಉಲ್-ಹಿಂದ್ ಮುಖೇಶ್ ಅಂಬಾನಿ ಬಳಿ ಬಿಟ್ ಕಾಯಿನ್ ಮೂಲಕ ಹಣಕ್ಕಾಗಿ ಬೇಡಿಕೆ ಇಟ್ಟಿದೆ.Related Article
ಅಂಬಾನಿ ಮನೆ ಬಳಿ ಮತ್ತೊಂದು ಕಾರನ್ನು ನೋಡಿದ ಪೊಲೀಸರು!
ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ ವಾಹನ ಪತ್ತೆ ಕೇಸ್: ತನಿಖೆಗೆ ಎನ್ಐಎ ತಯಾರಿ
ರಿಲಯನ್ಸ್ ದಿಗ್ಗಜ ಮುಖೇಶ್ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ್ದ ಕಾರು ಪತ್ತೆ!
ಮುಂಬೈ: ರಿಲಯಸ್ನ್ ದಿಗ್ಗಜ ಮುಖೇಶ್ ಅಂಬಾನಿಯ ನಿವಾಸದ ಸಮೀಪ ಸ್ಫೋಟಕಗಳನ್ನು ಹೊಂದಿರುವ ವಾಹನ ಪತ್ತೆಯಾಗಿದ್ದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಉದ್ಯಮಿ ಅಂಬಾನಿ ನಿವಾಸದ ಬಳಿ ಸ್ಫೋಟಕಗಳನ್ನು ಇಟ್ಟಿರುವ ಬಗೆಗೆ ಜೈಶ್-ಉಲ್-ಹಿಂದ್ ಉಗ್ರ ಸಂಘಟನೆ ಜವಾಬ್ದಾರಿ ಹೊತ್ತಿದೆ. ಟೆಲಿಗ್ರಾಮ್ ಅಪ್ಲಿಕೇಶನ್‌ನ ಸಂದೇಶದ ಮೂಲಕ ಉಗ್ರ ಸಾಂಘಟನೆ ಸ್ಫೋಟಕಗಳನ್ನು ಇಟ್ಟಿದ್ದು ನಾವೆಂದು ಘೋಷಿಸಿಕೊಂಡಿದೆ.
ಅಂಬಾನಿ ಮನೆಯ ಬಳಿ ಸ್ಫೋಟಕಗಳಿದ್ದ ಎಸ್‌ಯುವಿ ಇರಿಸಿದ ಸಹೋದರ ಸುರಕ್ಷಿತವಾಗಿ ಮನೆಗೆ ತಲುಪಿದ್ದಾನೆ. ಇದು ಕೇವಲ ಟ್ರೇಲರ್, ಬಿಗ್ ಸಿನಿಮಾ ಇನ್ನಷ್ಟೇ ಬರಲಿದೆ.”ಎಂದು ಸಂದೇಶದಲ್ಲಿ ಹೇಳಲಾಗಿದೆ.
ಉದ್ಯಮಿ ಮುಖೇಶ್ ಅಂಬಾಯವರ ದಕ್ಷಿಣ ಮುಂಬೈನಲ್ಲಿರುವ ನಿವಾಸದ ಬಳಿ ಜಿಲೆಟಿನ್ ಕಡ್ಡಿಗಳು, ಸ್ಫೋಟಕ ತುಂಬಿದ್ದ ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನ ಗುರುವಾರ ಪತ್ತೆಯಾಗಿತ್ತು.ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಅಂಬಾನಿಯ ಬಹುಮಹಡಿ ನಿವಾಸವಾದ “ಆಂಟಿಲಿಯಾ” ಬಳಿ ವಾಹನವನ್ನು ನಿಲ್ಲಿಸಲಾಗಿತ್ತು. ಜೈಶ್-ಉಲ್-ಹಿಂದ್ ಮುಖೇಶ್ ಅಂಬಾನಿ ಬಳಿ ಬಿಟ್ ಕಾಯಿನ್ ಮೂಲಕ ಹಣಕ್ಕಾಗಿ ಬೇಡಿಕೆ ಇಟ್ಟಿದೆ. ಕೆಲವು ದಿನಗಳ ಹಿಂದೆ ಅದೇ ಸಂಘಟನೆಯು ದೆಹಲಿ ಇಸ್ರೇಲ್ ರಾಯಭಾರ ಕಚೇರಿಯ ಹೊರಗೆ ಸ್ಫೋಟ ನಡೆಸಿದ್ದನ್ನು ಸ್ಮರಿಸಬಹುದು. ಆದರೆ ಮುಂಬೈ ಪೊಲೀಸರ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ ಹಾಗೂ ಇದು ನಕಲಿಯೇ ಎಂಬುದು ಗೊತ್ತಾಗಿಲ್ಲ.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement