ಭಾರತೀಯ ಮಹಿಳೆಯರು ಹೆಚ್ಚು ಮಾತನಾಡುವ ವಿಷಯ ಟ್ವಿಟರ್ ಸಮೀಕ್ಷೆಯಲ್ಲಿ ಬೆಳಕಿಗೆ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಟ್ವಿಟರ್ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯ ಮಹಿಳೆಯರು ಯಾವುದರ ಬಗ್ಗೆ ಹೆಚ್ಚು ಆಸಕ್ತಿ ಕೊಟ್ಟು ಮಾತನಅಡುತ್ತಾರೆ ಎಂಬ ಕುತೂಹಲಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಟ್ವಿಟರಿನ ಸ್ವತಂತ್ರ ಸಮೀಕ್ಷೆ ಇದಾಗಿದ್ದು, ಮಹಿಳಾ ಟ್ವಿಟ್ಟರ್ ಖಾತೆಗಳಿಂದ ಜನವರಿ 2019 ಮತ್ತು ಫೆಬ್ರವರಿ 2021ರ ನಡುವೆ 10 ಭಾರತೀಯ ನಗರಗಳಲ್ಲಿ ಮಹಿಳೆಯರು ಕಳುಹಿಸಿದ 5, 22,992 ಟ್ವೀಟ್‌ಗಳ ಗುಣಾತ್ಮಕ ಪರಿಮಾಣ ಮತ್ತು ವಿಶ್ಲೇಷಣೆ ಮಾಡಲಾಗಿದ್ದು, ನಂತರ 7೦೦ ಮಹಿಳೆಯರಲ್ಲಿ ಪರಿಮಾಣಾತ್ಮಕ ಸಮೀಕ್ಷೆ ನಡೆಸಲಾಗಿದೆ.
ಈ ಸಮೀಕ್ಷೆ ಮೂಲಕ ಭಾರತೀಯ ಮಹಿಳೆಯರ ಒಂಭತ್ತು ಪ್ರಬಲ ಸಂಭಾಷಣಾ ವಿಷಯಗಳು ಯಾವುದು ಎಂಬುದು ಗೊತ್ತಾಗಿದೆ. ಮಹಿಳೆಯರು ಫ್ಯಾಷನ್, ಪುಸ್ತಕಗಳು, ಸೌಂದರ್ಯ, ಮನರಂಜನೆ ಮತ್ತು ಆಹಾರದ ಬಗ್ಗೆ ಹೆಚ್ಚು ಮಾತನಾಡುತ್ತಾರೆ. 24.9% ರಷ್ಟು ಪಾಲನ್ನು ಹೊಂದಿರುವ ಫ್ಯಾಷನ್ ಪಾಯಿಂಟ್‌ಗಳು ಮತ್ತು ಅಭಿರುಚಿಗಳು ಉನ್ನತ ಸಂಭಾಷಣೆಯ ವಿಷಯವಾಗಿವೆ. ಪ್ರಚಲಿತ ವಿದ್ಯಮಾನಗಳು (20.8%), ಸಂಭ್ರಮಾಚರಣೆಯ ಕ್ಷಣಗಳು (14.5%), ಸಮುದಾಯಗಳು (11.7%) ಮತ್ತು ಸಾಮಾಜಿಕ ಬದಲಾವಣೆ (8.7%) ಕೂಡ ಟ್ವಿಟರ್‌ನಲ್ಲಿ ಮಹಿಳೆಯರಲ್ಲಿ ಮೊದಲ ಐದು ಸಂಭಾಷಣೆ ವಿಷಯಗಳಲ್ಲಿ ಕಾಣಿಸಿಕೊಂಡಿವೆ. ದೈನಂದಿನ ಹರಟೆ ಮತ್ತು ಸಂಭ್ರಮಾಚರಣೆಯ ಕ್ಷಣಗಳ ಸುತ್ತಲಿನ ಸಂಭಾಷಣೆಗಳು ಪ್ರತಿ ಟ್ವೀಟ್‌ಗೆ ಸರಾಸರಿ ಸಂಖ್ಯೆಯ ಲೈಕ್‌ಗಳು ಮತ್ತು ರಿಪ್ಲೈಗಳ ವಿಷಯದಲ್ಲಿ ಹೆಚ್ಚಿನ ತೊಡಗುವಿಕೆಯೊಂದಿಗೆ, ಫ್ಯಾಶನ್ ಪಾಯಿಂಟ್‌ಗಳು ಮತ್ತು ಅಭಿರುಚಿಗಳು, ಸಮುದಾಯಗಳು ಮತ್ತು ಹಂಚಿಕೆಯ ಸವಾಲುಗಳು ಹೆಚ್ಚು ರಿಟ್ವೀಟ್ ಮಾಡಿದ ವಿಭಾಗಗಳಾಗಿವೆ.
ಚೆನ್ನೈ ಸಂಭ್ರಮಾಚರಣೆಯ ಕ್ಷಣಗಳು, ಸೃಜನಾತ್ಮಕ ಪ್ರದರ್ಶನ ಮತ್ತು ದೈನಂದಿನ ಹರಟೆಗಳಲ್ಲಿ ಮೊದಲಿದ್ದರೆ ಸಮುದಾಯಗಳು, ಸಾಮಾಜಿಕ ಬದಲಾವಣೆ ಮತ್ತು ಹಂಚಿಕೆಯ ಸವಾಲುಗಳ ಸುತ್ತ ಬೆಂಗಳೂರು ಮುಂದಿದೆ, ಗುವಾಹಟಿ ಫ್ಯಾಶನ್ ಪಾಯಿಂಟ್‌ಗಳು ಮತ್ತು ಅಭಿರುಚಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಸುತ್ತಲಿನ ಸಂಭಾಷಣೆಗಳಲ್ಲಿ ಮುನ್ನಡೆ ಪಡೆದಿದೆ.
ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಮಾತನಾಡಿ, ” ಟ್ವಿಟರ್‌ನಲ್ಲಿ ಮಹಿಳೆಯರ ಬಗ್ಗೆ ನಮ್ಮ ಅರಿವನ್ನು ಬೆಳೆಸಲು ಈ ಸಮೀಕ್ಷೆ ನಡೆಸಲಾಯಿತು. ಮತ್ತು ಫಲಿತಾಂಶಗಳಿಂದ ನಾವು ಬಹಳ ಪ್ರೇರಿತರಾಗಿದ್ದೇವೆ. ಅವರ ಸಮುದಾಯಗಳು ಮತ್ತು ಸಂಭಾಷಣೆಗಳು ಸೇವೆಯ ಅನನ್ಯತೆ ಮತ್ತು ವೈವಿಧ್ಯ ಎತ್ತಿ ತೋರಿಸುತ್ತವೆ. ಅಂತರ್ಜಾಲಕ್ಕೆ ಉಚಿತ ಮತ್ತು ಮುಕ್ತ ಪ್ರವೇಶವು ಪ್ರತಿಯೊಬ್ಬರೂ ಅಡೆತಡೆಗಳಿಲ್ಲದೆ ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗುವಂತೆ ಮಾಡಿದೆ ಎಂದು ಹೇಳಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಶಂಕರಾಭರಣಂ, ಸಾಗರ ಸಂಗಮಂ, ಸ್ವಾತಿ ಮುತ್ಯಂ ಸಿನಿಮಾಗಳ ನಿರ್ದೇಶಕ, ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಕೆ.ವಿಶ್ವನಾಥ ನಿಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement