ಮತ್ತೆ ವಿಶ್ವದ ನಂ.1 ಶ್ರೀಮಂತನ ಪಟ್ಟ ಅಲಂಕರಿಸಿದ ಎಲೋನ್​ ಮಸ್ಕ್‌

ಚಿತ್ರ ಕೃಪೆ-ಇಂಟರ್ನೆಟ್‌

ಸ್ಯಾನ್ ​​ ಫ್ರಾನ್ಸಿಸ್ಕೋ : ರಾತ್ರೋ ರಾತ್ರಿ ತಮ್ಮ ಕಂಪನಿ ಶೇರುಗಳ ಮೌಲು ಹೆಚ್ಚಾದ ಕಾರಣ ಮತ್ತೆ ಎಲೋನ್​ ಮಸ್ಕ್‌ ವಿಶ್ವದ ನಂ.1 ಶ್ರೀಮಂತನಾಗಿದ್ದಾನೆ.
2020ರ ಕ್ಯಾಲೆಂಡರ್ ವರ್ಷದಲ್ಲಿ ವೇಗವಾಗಿ ಸಂಪತ್ತು ವೃದ್ಧಿಸಿಕೊಳ್ಳುವ ಮೂಲಕ ಬಹು ದಿನಗಳಿಂದ ಜಗತ್ತಿನ ನಂಬರ್ 1 ಸಿರಿವಂತ ಸ್ಥಾನದಲ್ಲಿದ್ದ ಅಮೆಜಾನ್ ಸಂಸ್ಥಾಪಕ ಜೆಫ್​ ಬೆಜೋಸ್ ಅವರನ್ನುಕೆಲವು ವಾರಗಳ ಹಿಂದೆ ಎಲೋನ್​ ಮಸ್ಕ್ ಹಿಂದಿಕ್ಕಿದ್ದರು. ಆದರೆ, ಮತ್ತೆ ಕೆಲ ದಿನಗಳ ನಂತರ ಜೆಫ್​ ಬೆಜೋಸ್ ಮರಳಿ ನಂಬರ್ 1 ಪಟ್ಟಕ್ಕೆ ಬಂದಿದ್ದರು. ಆದರೆ
ಟೆಸ್ಲಾ ಷೇರುಗಳ ಮೌಲ್ಯ ರಾತ್ರೋರಾತ್ರಿ ಶೇ.2ರಷ್ಟು ಏರಿಕೆಯಾದ ಪರಿಣಾಮ ಮತ್ತೆ ಅದರ ಮುಖ್ಯ ಕಾರ್ಯನಿರ್ವಾಹಕ ಎಲೋನ್ ಮಸ್ಕ್ ಅವರನ್ನು ಮತ್ತೆ ವಿಶ್ವದ ಎಲೋನ್​ ಮಸ್ಕ್‌ ವಿಶ್ವದ ನಂ.1 ಶ್ರೀಮಂತನನ್ನಾಗಿ ಮಾಡಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕದ ಪ್ರಕಾರ, ಎಲೋನ್ ಮಸ್ಕ್‌ನ ಒಟ್ಟು ಸಂಪತ್ತು 182 ಬಿಲಿಯನ್ ಡಾಲರ್​ನಷ್ಟಾಗಿದೆ.
ಅಮೆಜಾನ್‌ನ ಜೆಫ್ ಬೆಜೋಸ್‌ ಇವರ ಸಂಪತ್ತು 181 ಬಿಲಿಯನ್ ಡಾಲರ್​ನಷ್ಟಿದೆ.

 

5 / 5. 1

ಶೇರ್ ಮಾಡಿ :

  1. geek

    ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಯ ಪ್ರತಿಶತ ಒಂದರಷ್ಟು ಪಾಲು ಹೊಂದಿರದಿದ್ದರೂ ಎಲಾನ್ ಮಸ್ಕ್ ರವರ ಆಸ್ತಿಯ ಪ್ರಮಾಣ ಮಾರುಕಟ್ಟೆಯಲ್ಲಿ ಬೃಹತ್ ಪಾಲು ಹೊಂದಿರುವ ಡೀಸೆಲ್ ಕಾರುಗಳ ಕಂಪನಿಗಳ ಓನರುಗಳಿಗಿಂತ ಹೆಚ್ಚಾಗಿದೆ. ಶೇರು ಮಾರುಕಟ್ಟೆ ಎಲಾನ್ ಮಸ್ಕ್ ರವರಲ್ಲಿ ವಿಶ್ವಾಸವಿಟ್ಟಿದೆಯೆಂದರೆ ಭವಿಷ್ಯದಲ್ಲಿ ಇಲೆಕ್ಟ್ರಿಕ್ ಕಾರುಗಳು ಓಡಾಡುವುದನ್ನು ತಪ್ಪಿಸಲಾಗದ ಸ್ಥಿತಿಗೆ ತಲುಪಿದ್ದೇವೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement