ಸಿಡಿ ಹಗರಣಕ್ಕೆ ಮತ್ತೆ ಟ್ವಿಸ್ಟ್: ಯುವತಿಯಿಂದ ಮತ್ತೊಂದು ವಿಡಿಯೋ ಬಿಡುಗಡೆ..

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ನಮ್ಮ ಆಟ ಶುರು, ಇಂದು (ಶನಿವಾರ) ಸಂಜೆ ೪ರಿಂದ ೬ ಗಂಟೆಯೊಳಗೆ ಹೊಸ ಬಾಂಬ್‌ ಹಾಕುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ ಬೆನ್ನಲ್ಲೇ ಈಗ ಸಿಡಿ ಯುವತಿಯದ್ದು ಎನ್ನಲಾದ ಮತ್ತೊಂದು ವಿಡಿಯೋ ಬೆಳಿಗ್ಗೆ ಬಿಡುಗಡೆಯಾಗಿದೆ.
ದಿನಕ್ಕೊಂದು ತಿರುವುದು ಪಡೆದುಕೊಳ್ಳುತ್ತಿರುವ ಈ ಸಿಡಿ ಪ್ರಕರಣ ಈಗ ನಾಲ್ಕನೇ ವಿಡಿಯೋ ಬಿಡುಗಡೆಯಾಗಿದ್ದು, ಇದರಲ್ಲಿ ತನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಒತ್ತಾಯಿಸಿದ್ದಾಳೆ. . ಶುಕ್ರವಾರ ಯುವತಿಯ ವಿಡಿಯೋ ಹೇಳಿಕೆ ಮತ್ತು ಆಡಿಯೋ ಬಹಿರಂಗಗೊಂಡಿತ್ತು.

ಅಲ್ಲದೆ ಶನಿವಾರ ಬೆಳಿಗ್ಗೆ ವಿಡಿಯೋದಲ್ಲಿ ಕೆಲವು ವಿಷಯಗಳಿಗೆ ಸ್ಪಷ್ಟನೆಯನ್ನೂ ನೀಡಿದ್ದಾಳೆ.

ನನಗೆ ಬದುಕಬೇಕೋ ಸಾಯಬೇಕೋ ಒಂದೂ ತಿಳಿಯುತ್ತಿಲ್ಲ. ಮಾಧ್ಯಮದವರಿಗೆ ನಾನು ಹೇಳುತ್ತೇನೆ. ಏನೇ ಮಾಹಿತಿ ಸಿಕ್ಕರೂ ಯಾವುದು ಸತ್ಯ, ಯಾವುದು ಸುಳ್ಳು ಎಂದು ಪರಿಗಣಿಸಿ ಸುದ್ದಿ ಪ್ರಸಾರ ಮಾಡಬೇಕುಎಂದು ಕೇಳಿಕೊಳ್ಳುತ್ತೇನೆ. ಮಾರ್ಚ್ 2ರಂದು ಸಿಡಿ ಬಿಡುಗಡೆ ಆಗಿದೆ. ಅದನ್ನು ಯಾರು ಬಿಡುಗಡೆ ಮಾಡಿದ್ದಾರೆಂದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ವಿಡಿಯೋ ಬರುತ್ತಿರುವುದನ್ನು ನೋಡಿ ನನ್ನ ಕುಟುಂಬಸ್ಥರು ಕರೆ ಮಾಡಿದರು. ನಾನು ನರೇಶ ಅಣ್ಣ ಅವರಿಗೆ ಕರೆ ಮಾಡಿ ಮಾತನಾಡಿದ್ದೆ. ಏನು ಮಾಡಲಿ ಎಂದು ಕೇಳಿದ್ದೆ.
ಈ ವಿಚಾರದಲ್ಲಿ ನಾನು ತುಂಬಾ ಚಿಕ್ಕವ, ಇದಕ್ಕೆ ಪೊಲಿಟಿಕಲ್ ಸಪೋರ್ಟ್ ಬೇಕು ಎಂದು ಹೇಳಿದ್ದರು. ತುಂಬಾ ದೊಡ್ಡವರ ಜತೆ ಮಾತಾಡೋಣ ಎಂದು ಹೇಳಿದ್ದರು. ಸಿದ್ದರಾಮಯ್ಯ, ಡಿಕೆಶಿ ಜತೆ ಮಾತನಾಡೋಣ ಎಂದಿದ್ದರು. ಅವರ ಜತೆ ಮಾತನಾಡಿದರೆ ನ್ಯಾಯ ಸಿಗುತ್ತದೆ ಎಂದು ಹೇಳಿದ್ದರು. ಅಲ್ಲದೆ, ನಾನಿರುವ ಜಾಗಕ್ಕೆ ನರೇಶ್ ಅಣ್ಣ ಬಂದಿದ್ದರು. ಡಿ.ಕೆ.ಶಿವಕುಮಾರ್ ಮನೆಗೆ ಹೋಗೋಣ ಎಂದಿದ್ದರು. ಆ ಸಮಯದಲ್ಲಿ ನಮ್ಮ ಮನೆಯಿಂದ ಪದೇಪದೆ ಕರೆ ಮಾಡುತ್ತಿದ್ದರು. ನಮ್ಮ ಮನೆಯವರು ಅಳುವುದು ಕೇಳಿ ಭಯವಾಯಿತು. ಅವರ ಜೀವಕ್ಕೆ ಏನಾದರೂ ಆಗುತ್ತದೆ ಎಂಬ ಭಯ ನನಗಿತ್ತು. ಆಗ ನಮ್ಮ ಪೋಷಕರನ್ನು ನಾನು ಸಮಾಧಾನ ಮಾಡಿದ್ದೆ. ಡಿಕೆಶಿ ಮನೆಗೆ ಹೋಗುತ್ತಿದ್ದೇನೆಂದು ಅವರಿಗೆ ಹೇಳಿದ್ದೆ. ನಾವು ಡಿಕೆಶಿ ಮನೆಯ ಬಳಿ ಹೋಗಿದ್ದೆವು ಆದರೆ ಅವರು ಸಿಕ್ಕಿರಲಿಲ್ಲ. ಭೇಟಿ ಮಾಡಲು ಹೋದಾಗ ಡಿ.ಕೆ.ಶಿವಕುಮಾರ್ ಸಿಗಲಿಲ್ಲ ಎಂದು ಈ ವಿಡಿಯೋದಲ್ಲಿ ಡಿ.ಕೆ.ಶಿವಕುಮಾರ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ಯುವತಿ ಕಾರಣ ನೀಡಿದ್ದಾಳೆ.
ರಮೇಶ್ ಜಾರಕಿಹೊಳಿ ಒಂದೇ ದಿನದಲ್ಲಿ ಸರ್ಕಾರ ಬೀಳಿಸುತ್ತೇನೆ ಎಂದು ಹೇಳುತ್ತಾರೆ. ಎಲ್ಲರನ್ನು ಜೈಲಿಗೆ ಹಾಕಿಸುವುದಾಗಿಯೂ ಹೇಳುತ್ತಾರೆ. ಅವರು ಈ ರೀತಿಯಾಗಿ ಹೇಳುತ್ತಾರೆಂದರೆ ಏನು ಅರ್ಥ? ಜನರೇ ಈ ಮಾತನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಯುವತಿ ಈ ವಿಡಿಯೋದಲ್ಲಿ ಹೇಳಿದ್ದಾಳೆ..
ನಾನು ಸೇಫಾಗಿದ್ದೇನೆ, ಕಿಡ್ನ್ಯಾಪ್ ಆಗಿಲ್ಲ. ನಮ್ಮ ಪೋಷಕರು ಎಲ್ಲಿದ್ದಾರೆಂದು ನನಗೆ ಗೊತ್ತಿಲ್ಲ. ನಮ್ಮ ತಂದೆ, ತಾಯಿ, ಅಜ್ಜಿ, ಸಹೋದರರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಅವರನ್ನು ರಕ್ಷಣೆ ನೀಡಿ ಎಂದು ಎಸ್‌ಐಟಿ ಅಧಿಕಾರಿಗಳ ಬಳಿ ಮನವಿ ಯುವತಿ ಮಾಡಿದ್ದಾಳೆ. 24 ದಿನಗಳಿಂದ ತುಂಬಾ ಟಾರ್ಚರ್ ಆಗುತ್ತಿದೆ. ನಾನು ಏನೇ ಹೇಳಲು ಬಂದರೂ ಅದು ರಿವರ್ಸ್ ಆಗುತ್ತಿದೆ. ನನ್ನ ಮಾನ, ಮರ್ಯಾದೆ ಹೋಗಿದೆ, ನ್ಯಾಯ ಸಿಗಬೇಕು. ನಾನು ಸಂತ್ರಸ್ತೆಯಾಗಿರುವುದರಿಂದ ನ್ಯಾಯ ಸಿಗಬೇಕು ಎಂದು ವಿಡಿಯೊದಲ್ಲಿ ಯುವತಿ ಹೇಳಿಕೊಂಡಿದ್ದಾಳೆ.
ನಮ್ಮ ತಂದೆ, ತಾಯಿ ತಲೆ ಬೇಕಿದ್ದರೂ ತೆಗೆಯಬಹುದು. ನಾಳೆ ದಿನ ನನ್ನನ್ನೇ ಸಾಯಿಸಬಹುದು. ಏನಾಗುತ್ತದೆಯೆಂದು ಯಾರಿಗೂ ಗೊತ್ತಿಲ್ಲ. ನಾನು ಹೇಳಿಕೆ ನೀಡಬೇಕಾದರೆ ಪೋಷಕರು ಇರಬೇಕು. ನನ್ನ ಕಣ್ಣು ಮುಂದೆ ತಂದೆ, ತಾಯಿ, ಅಜ್ಜಿ ಸಹೋದರಿರಬೇಕು. ‘ನನ್ನ ಪೋಷಕರಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ. ‘ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕೆನಿಸುತ್ತದೆ’. ನನಗೆ ಅಷ್ಟೊಂದು ಕಿರುಕುಳವಾಗುತ್ತಿದೆ. ನನಗೆ ನ್ಯಾಯ ಕೊಡಿಸಿ ಎಂದು ಯುವತಿ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾಳೆ.

ಪ್ರಮುಖ ಸುದ್ದಿ :-   ಪೋಕ್ಸೋ ಪ್ರಕರಣ : ಮುರುಘಾ ಶರಣರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

ನನಗೆ ಕೊಡೋ ಟಾರ್ಚರ್‌ಗೆ ಬದುಕ್ಬೇಕೋ ಸಾಯ್ಬೇಕೋ ಅಂತಾನೆ ಗೊತ್ತಾಗ್ತಿಲ್ಲ. ನಾನು ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸತ್ತೋಗ್ಬಿಡ್ಬೇಕು ಅಂತಾ ಅನ್ನಿಸ್ತಿದೆ. ಆ ಲೆವೆಲ್‌ಗೆ ಟಾರ್ಚರ್‌ ಆಗ್ತಿದೆ. ಎಲ್ಲ ಜನರಲ್ಲಿ ಕೇಳ್ಕೊಳ್ಳೋದು ಇಷ್ಟೇ. ದಯವಿಟ್ಟು ನ್ಯಾಯ ಕೊಡಿಸಿ ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
Dailyhunt

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement