ನಿಲ್ಲದ ಮುಷ್ಕರ, ಬಸ್‌ ಓಡಿಸಲು ಸಾರಿಗೆ ನಿವೃತ್ತ ನೌಕರರಿಗೆ ಸರ್ಕಾರದಿಂದ ಆಹ್ವಾನ, ದರವೂ ನಿಗದಿ..!!

ಬೆಂಗಳೂರು: ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮುಷ್ಕರ ಮುಂದುವರಿಸಲು ನಿರ್ದಾರ ಮಾಡಿರುವ ಕಾರಣ ಸರ್ಕಾರ ಪರ್ಯಾಯ ಕ್ರಮಕ್ಕೆ ಮುಂದಾಗಿದೆ.
ಸಾರಿಗೆ ಸಂಸ್ಥೆಯ ನಿವೃತ್ತ ಚಾಲಕ ಹಾಗೂ ನಿರ್ವಾಹಕರನ್ನು ಕರೆಸಿ ಅವರಿಗೆ ಸಂಬಳ ನೀಡಿ ಬಸ್‌ಗಳನ್ನು ಓಡಿಸಲು ಯೋಜಿಸಿವೆ.

ಇದಕ್ಕೆ ಈಗಾಗಲೇ ವಿವಿಧ ಸಾರಿಗೆ ನಿಗಮಗಳು ತಯಾರಿ ನಡೆಸಿವೆ. ಅವರಿಗೆ ಗೌರವ ಧನವನ್ನೂ ನಿಗದಿಗೊಳಿ ಆದೇಶ ಹೊರಡಿಸಲಾಗಿದೆ. ನಿವೃತ್ತ ಸಿಬ್ಬಂದಿಗೆ ಆಹ್ವಾನ ನೀಡಿದ್ದು, ತಾತ್ಕಾಲಿಕ ಒಪ್ಪಂದದ ಮೇಲೆ ಸಿಬ್ಬಂದಿಯನ್ನ ನಿಯೋಜನೆ ಮಾಡಿಕೊಳ್ಳಲು ಮುಂದಾಗಿವೆ.
62 ವರ್ಷ ಮೀರದ ನಿವೃತ್ತ ಸಿಬ್ಬಂದಿಗೆ ಬಸ್​ಗಳನ್ನ ಚಲಾಯಿಸಲು ಆಹ್ವಾನ ನೀಡಲಾಗಿದ್ದು, ಚಾಲಕರಿಗೆ 800 ರೂ, ನಿರ್ವಾಹಕರಿಗೆ 700 ರೂ ಗೌರವಧನ ನಿಗದಿ ಮಾಡಿ ಎಂದು ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ಶಿವಯೋಗಿ ಕಳಸದ್ ಅಧಿಸೂಚನೆ ಹೊರಡಿಸಿದ್ದಾರೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement