ಮುಷ್ಕರಕ್ಕೆ ಬಗ್ಗುವುದಿಲ್ಲ, ಪರ್ಯಾಯ ವ್ಯವಸ್ಥೆ ಮಾಡ್ತೇವೆ, ಕೆಲಸಕ್ಕೆ ಗೈರಾದವ್ರಿಗೆ ಸಂಬಳ ಕೊಡಲ್ಲ: ಸಿಎಂ ಖಡಕ್‌ ಎಚ್ಚರಿಕೆ

posted in: ರಾಜ್ಯ | 0

ಬೆಂಗಳೂರು: ಸಾರಿಗೆ ನೌಕರರು ಯುಗಾದಿ ಸಮಯದಲ್ಲೂ ಮುಷ್ಕರ ಹಿಂತೆಗೆದುಕೊಂಡಿಲ್ಲ, ಇದೇ ಸಮಯದಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಅವರು ಮಂಗಳವಾರ ನಗರದಲ್ಲಿ ಮಾತನಾಡಿದ ಅವರು, ಮುಷ್ಕರ ಮುಂದುವರಿಸಿರುವ ಸಾರಿಗೆ ನೌಕರರ ಜೊತೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ. ಮುಷ್ಕರ ನಡೆಸಿದವರಿಗೆ ಮಾರ್ಚ್‌ ತಿಂಗಳ ಸಂಬಳವನ್ನೂ ಕೊಡುವುದಿಲ್ಲ. ಜೊತೆಗೆ ಕೆಲಸಕ್ಕೆ ಗೈರಾದವರ ಮೇಲೆ ಕ್ರಮವನ್ನೂ ಕೈಗೊಲ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್‌ ಆಗಿ ಹೇಳಿದ್ದಾರೆ.
ಸರ್ಕಾರ ಎಷ್ಟೇ ಮನವಿ ಮಾಡಿದರೂ ಯುಗಾದಿ ಹಬ್ಬದ ಸಂದರ್ಭದಲ್ಲಿ ಅವರು ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೂ ನಾವಲ್ಲ, ಸಾರ್ವಜನಿಕರೇ ಕ್ಷಮಿಸುವುದಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ, ಅವರು ಒಂದು ತಿಂಗಳು ಅವರು ಸತ್ಯಾಗ್ರಹ ಮಾಡಲಿ. ನಾವು ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಇದೇ ಸಂದರ್ಭದಲ್ಲಿ ಮಾತನಾಡಿದ್ದು, ಸಾರಿಗೆ ನೌಕರರಿಗೆ ಯುಗಾದಿ‌ ಹಬ್ಬದ ಸಂಭ್ರಮವಿಲ್ಲ. ವೇತನ ನೀಡದೇ ಸರ್ಕಾರ‌ ಸತಾಯಿಸುತ್ತಿದೆ. ವೇತನ ನೀಡುವುದಿಲ್ಲ‌ ಎಂದು‌ ಮುಖ್ಯಮಂತ್ರಿಗಳು ಹೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ.
ವೇತನ ನೀಡಿಲ್ಲ ಎಂದು ಡಿಪೋ ಮ್ಯಾನೇಜರ್‌ ವಿರುದ್ದ ಸಾರಿಗೆ ನೌಕರ ತಿಪ್ಪೇಸ್ವಾಮಿ ಮೊದಲ ದೂರು ನೀಡಿದ್ದಾರೆ. ಇದೇ ರೀತಿ ರಾಜ್ಯದೆಲ್ಲೆಡೆ ವೇತನ‌ ನೀಡಿಲ್ಲ‌ ಎಂದು ದೂರು ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಸರ್ಕಾರ ಇದ್ಯಾವುದಕ್ಕೂ ಜಗ್ಗುವುದಿಲ್ಲ ಎಂದು ಹೇಳಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ