ಅತಿ ಹೆಚ್ಚುಪತ್ನಿಯರು, ವಿಶ್ವದಲ್ಲಿ ಅತಿದೊಡ್ಡ ಕುಟುಂಬದ ಮಿಜೊರಾಂನ ವ್ಯಕ್ತಿ ನಿಧನ..ಮಾಹಿತಿ ಕೇಳಿ ಹೌಹಾರದಿರಿ..!

ಐಜಾಲ್: ವಿಶ್ವದ ಅತಿದೊಡ್ಡ ಕುಟುಂಬ ಹೊಂದಿದ್ದ ಜಿಯೋನಾ ಚಾನ ತಮ್ಮ ತಮ್ಮ 76 ವಯಸ್ಸನಲ್ಲಿ ಮಿಜೊರಾಂನಲ್ಲಿ ಭಾನುವಾರ ನಿಧನರಾಗಿದ್ದಾರೆ.
ಇವರು 38 ಪತ್ನಿಯರು, 94 ಮಕ್ಕಳು ಮತ್ತು 33 ಮೊಮ್ಮಕ್ಕಳೊಂದಿಗೆ ವಿಶ್ವದ ಅತಿದೊಡ್ಡ ಕುಟುಂಬ ಹೊಂದಿದ್ದ ಜಿಯೋನಾ ಚಾನ ಅವರ ಸಾವಿನ ಬಗ್ಗೆ ಮಿಜೋರಾಂ ಮುಖ್ಯಮಂತ್ರಿ ಜೊರಾಮ್ತಂಗ ಟ್ವೀಟ್ ಮಾಡಿದ್ದಾರೆ.
ರಾಜ್ಯ ಮತ್ತು ಚಾನಾ ಅವರ ಬಕ್ತಾಂಗ್ ತ್ಲಾಂಗ್ನುವಾಮ್ ಅವರ ಗ್ರಾಮವು ಈ ಕುಟುಂಬದಿಂದಾಗಿ ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ” ಎಂದು ಅವರು ಹೇಳಿದ್ದಾರೆ.

38 ಹೆಂಡತಿಯರು ಮತ್ತು 89 ಮಕ್ಕಳೊಂದಿಗೆ ವಿಶ್ವದ ಅತಿದೊಡ್ಡ ಕುಟುಂಬದ ಮುಖ್ಯಸ್ಥರೆಂದು ನಂಬಲಾದ ಜಿಯಾನಗೆ ಮಿಜೋರಾಂ ವಿದಾಯ ಹೇಳಿದೆ. ಮಿಜೋರಾಂ ಮತ್ತು ಬಕ್ತಾಂಗ್ ತ್ಲಾಂಗ್ನುವಾಮ್ನಲ್ಲಿರುವ ಅವರ ಗ್ರಾಮವು ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ರೆಸ್ಟ್ ಇನ್ ಪೀಸ್ ಸರ್! ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
ಮಿಜೊರಾಮನಿಲ್ಲಿ ಜಿಯೋನಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜಿಯಾಂಘಾಕಾ ಮಧ್ಯಾಹ್ನ 3 ಗಂಟೆಗೆ ಐಜಾಲ್‌ನ ಟ್ರಿನಿಟಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ತೀವ್ರವಾದ ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು.
ಜಿಯೋನಾ ಚಾನಾ ಅವರ ಗ್ರಾಮದಲ್ಲಿ ‘ಚಾನಾ ಪಂಥ’ ಎಂಬ ಧಾರ್ಮಿಕ ಸಮುದಾಯದ ಮುಖ್ಯಸ್ಥರಾಗಿದ್ದರು. ಜುಲೈ 21, 1945 ರಂದು ಜನಿಸಿದ್ದರು. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, 17ನೇ ವಯಸ್ಸಿನಲ್ಲಿ ಅವರು ಅವರು ಮೊದಲ ಹೆಂಡತಿಯನ್ನು ಭೇಟಿಯಾದರು. ಮೊದಲ ಹೆಂಡತಿ ಅವರಿಗಿಂತ ಮೂರು ವರ್ಷ ಹಿರಿಯರು.
ಅವರ ಕುಟುಂಬ ಸದಸ್ಯರು ಪರ್ವತದಿಂದ ಕೂಡಿದ ಹಳ್ಳಿಯಲ್ಲಿ 100 ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರುವ ‘ಚುವಾನ್ ಥಾರ್ ರನ್’ ಅಥವಾ ನ್ಯೂ ಜನರೇಷನ್ ಹೋಮ್ ಎಂಬ ನಾಲ್ಕು ಅಂತಸ್ತಿನ ಮನೆಯಲ್ಲಿ ಅವರು ವಾಸಿಸುತ್ತಿದ್ದಾರೆ.
ವರದಿಯ ಪ್ರಕಾರ, ಜಿಯೋನಾ ಚಾನಾ ಅವರ ಪುತ್ರರು ಮತ್ತು ಅವರ ಹೆಂಡತಿಯರು ಮತ್ತು ಅವರ ಎಲ್ಲ ಮಕ್ಕಳು ಒಂದೇ ಕಟ್ಟಡದಲ್ಲಿ ಬೇರೆ ಬೇರೆ ಕೋಣೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಒಂದೇ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಾರೆ.
ಅವರ ಸ್ವಂತ ಸಂಪನ್ಮೂಲಗಳು ಮತ್ತು ಫಾಲೋಯರ್ ಗಳಿಂದ ಸಿಗುವ ದೇಣಿಗೆಗಳಿಂದ ಅವರ ಜೀವನ ಸಾಗುತ್ತಿತ್ತು. ಚಾನರ ಮನೆಯೇ ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿದೆ.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement