ಮುಸ್ಲಿಮರಿಗೆ ಹಿಂಸೆ ಮಾಡುವವರು ಅಥವಾ ಭಾರತದಲ್ಲಿ ವಾಸಿಸಬಾರದೆಂದು ಹೇಳುವವರು ಹಿಂದುತ್ವ ವಿರೋಧಿಗಳು: ಮೋಹನ್ ಭಾಗವತ್

ಗಾಜಿಯಾಬಾದ್: ಹಿಂದೂ-ಮುಸ್ಲಿಂ ಐಕ್ಯತೆಯ ಪರಿಕಲ್ಪನೆ ತಪ್ಪುದಾರಿಗೆಳೆಯುವಂತಿದೆ, ಏಕೆಂದರೆ ಅವುಗಳು ಭಿನ್ನವಾಗಿಲ್ಲವಾದ್ದರಿಂದ ಒಂದಾಗಲು ಏನೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.
ಆರ್‌ಎಸ್‌ಎಸ್‌ನ ಮುಸ್ಲಿಂ ವಿಭಾಗವಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಅಥವಾ ಮುಸ್ಲಿಮರ ಮೇಲೆ ಯಾವುದೇ ಪ್ರಾಬಲ್ಯ ಇರಲು ಸಾಧ್ಯವಿಲ್ಲ. “ಭಾರತೀಯರ ಪ್ರಾಬಲ್ಯ ಮಾತ್ರ ಇರಲು ಸಾಧ್ಯ” ಎಂದು ಹೇಳಿದ್ದಾರೆ,
ನಾವು ಕಳೆದ 40,000 ವರ್ಷಗಳಿಂದ ಅದೇ ಪೂರ್ವಜರ ವಂಶಸ್ಥರು ಎಂಬುದು ಸಾಬೀತಾಗಿದೆ. ಭಾರತದ ಜನರು ಒಂದೇ ಡಿಎನ್‌ಎ ಹೊಂದಿದ್ದಾರೆ” ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದರು.
ರಾಜಕೀಯವು ಮಾಡಲಾಗದ ಕೆಲವಷ್ಟಿವೆ. ರಾಜಕೀಯವು ಜನರನ್ನು ಒಂದುಗೂಡಿಸುವ ಸಾಧನವಾಗಲು ಸಾಧ್ಯವಿಲ್ಲ ಆದರೆ ಏಕತೆಯನ್ನು ವಿರೂಪಗೊಳಿಸುವ ಅಸ್ತ್ರವಾಗಬಹುದು” ಎಂದು ಹೇಳಿದ್ದಾರೆ.
ವಧೆ (lynching)ಯಲ್ಲಿ ಪಾಲ್ಗೊಳ್ಳುವವರು ಹಿಂದುತ್ವದ ವಿರುದ್ಧವಾಗಿದ್ದಾರೆ ಎಂದು ಹೇಳಿದ ಅವರು, ಆದರೆ ಕೆಲವೊಮ್ಮೆ ಜನರ ವಿರುದ್ಧ ಕೆಲವು ಸುಳ್ಳು ಪ್ರಕರಣಗಳನ್ನು ಸಹ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಯಾವುದೇ ಏಕತೆ ಇಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ ಮತ್ತು ಏಕತೆಗಾಗಿ, ಮಾತುಕತೆ ಅಗತ್ಯ, ಭಿನ್ನಾಭಿಪ್ರಾಯವಿಲ್ಲದ ಕಾರಣ ಭಾರತದಲ್ಲಿ ಮುಸ್ಲಿಮರು ಅಪಾಯದಲ್ಲಿಲ್ಲ. ಭಾರತದಲ್ಲಿ ಇಸ್ಲಾಂ ಧರ್ಮ ಅಪಾಯದಲ್ಲಿದೆ ಎಂಬ ಭಯದ ಚಕ್ರದಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ” ಎಂದು ಅವರು ಹೇಳಿದರು.
ಸಂಘವು ರಾಷ್ಟ್ರವನ್ನು ಬಲಪಡಿಸಲು ಮತ್ತು ಸಮಾಜದ ಎಲ್ಲರ ಕಲ್ಯಾಣಕ್ಕಾಗಿ ತನ್ನ ಕೆಲಸವನ್ನು ಮಾಡುತ್ತಲೇ ಇದೆ” ಎಂದು ಮೋಹನ್ ಭಾಗವತ್ ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ: ತಾಪಮಾನ ಹೆಚ್ಚಳದಿಂದ ವಿದ್ಯಾರ್ಥಿಗಳು ಪಾರಾಗಲು ಕ್ಲಾಸ್‌ ರೂಮ್‌ ಅನ್ನೇ ಈಜುಕೊಳವಾಗಿ ಪರಿವರ್ತಿಸಿದ ಶಾಲೆ...!

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement