ದೆಹಲಿ ಮನೆಯಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಆರ್.ಕುಮಾರಮಂಗಲಂ ಪತ್ನಿ ಕಿಟ್ಟಿ ಕೊಲೆ

ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ.ಆರ್.ಕುಮಾರಮಂಗಲಂ ಅವರ ಪತ್ನಿ ಕಿಟ್ಟಿ ಕುಮಾರಮಂಗಲಂ ಅವರನ್ನು ಕಳೆದ ರಾತ್ರಿ ದೆಹಲಿಯ ನಿವಾಸದಲ್ಲಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಪೊಲೀಸ್ ವರದಿಗಳ ಪ್ರಕಾರ, 67 ವರ್ಷದ ಕಿಟ್ಟಿ ಅವರು ದಿಂಬಿನಿಂದ ಉಸಿರುಗಟ್ಟಿಸಿದ ಕಾರಣ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ದೆಹಲಿಯ ವಸಂತ್ ಕುಂಜ್ ನಿವಾಸದಲ್ಲಿ ಕಿಟ್ಟಿ ಕುಮಾರಮಂಗಲಂ ಅವರು ಶವವಾಗಿ ಪತ್ತೆಯಾಗಿದ್ದಾರೆ. … Continued

ಅಪ್ರತಿಮ ಬಾಲಿವುಡ್‌ ನಟ ದಿಲೀಪ್ ಕುಮಾರ್ ಮುಂಬೈನಲ್ಲಿ ನಿಧನ

ಮುಂಬೈ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಬಾಲಿವುಡ್‌ ನಟ ದಿಲೀಪ್ ಕುಮಾರ್ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.. ಮುಂಬೈನ ಪಿಡಿ ಹಿಂದೂಜಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಶ್ವಾಸಕೋಶಶಾಸ್ತ್ರಜ್ಞ ಡಾ.ಜಲೀಲ್ ಪಾರ್ಕರ್ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ಭಾರತದ ಅತ್ಯಂತ ಪ್ರಸಿದ್ಧ ನಟರಲ್ಲಿ ಒಬ್ಬರಾದ ದಿಲೀಪ್ ಕುಮಾರ್ ಅವರನ್ನು ಕಳೆದ ವಾರ ಮುಂಬೈ … Continued

ಪಿಡಿಪಿ,ಎಎನ್‌ಸಿ ಹೊರತುಪಡಿಸಿ, ಎಲ್ಲ ಕಾಶ್ಮೀರ ಮೂಲದ ರಾಜಕೀಯ ಪಕ್ಷಗಳಿಂದ ಡಿಲಿಮಿಟೇಶನ್ ಆಯೋಗದ ಆಹ್ವಾನ ಸ್ವೀಕಾರ

ಜಮ್ಮು: ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್ (ಎಎನ್‌ಸಿ) ಹೊರತುಪಡಿಸಿ, ಇತರ ಎಲ್ಲ ಕಾಶ್ಮೀರ ಮೂಲದ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜ ಗುಂಪುಗಳು ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಡಿಲಿಮಿಟೇಶನ್ ಆಯೋಗದ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಅದು ನಾಲ್ಕು ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರಕ್ಕೆ … Continued

ಸಹಕಾರದಿಂದ ಸಮೃದ್ಧಿ: ಮೋದಿ ಸರ್ಕಾರದಿಂದ ಹೊಸ ಸಹಕಾರ ಸಚಿವಾಲಯ ರಚನೆ

ನವದೆಹಲಿ: ಕೇಂದ್ರ ಸರ್ಕಾರವು ಹೊಸದೃಷ್ಟಿಕೋನ ಹೊಂದಿದ ‘ಸಹಕಾರದಿಂದ ಸಮೃದ್ಧಿ’ ಎಂಬ ಹೊಸ ಸಹಕಾರ ಸಚಿವಾಲಯವನ್ನು ರಚಿಸುವುದಕ್ಕೆ ಮುಂದಾಗಿದೆ. ಈ ಸಹಕಾರ ಸಚಿವಾಲಯ ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸುವುದು, ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ-ನಿರುಪಣೆಗೆ ಚೌಕಟ್ಟು ಒದಗಿಸಲಿದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರದ ಈ ಸಹಕಾರಿ ಸಚಿವಾಲಯವು ಸಹಕಾರಿ ಚಳವಳಿಯಲ್ಲಿ ತೊಡಗಿರುವ ಜನರಿಗೆ ನೆರವಾಗುವುದಕ್ಕೆ ಸಹಕಾರಿಯಾಗಲಿದೆ. … Continued

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ಸಿದ್ಧತೆ, ಜುಲೈ 15, 17ರಂದು ಅಣಕು ಪರೀಕ್ಷೆ: ಸಚಿವ ಸುರೇಶಕುಮಾರ್

ಬೆಂಗಳೂರು: ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಲಸಿಕೆ ಪಡೆಯುವುದರೊಂದಿಗೆ ಪರೀಕ್ಷೆ ಸುರಕ್ಷಿತ ವಾತಾವರಣದಲ್ಲಿ ಅಚ್ಚುಕಟ್ಟಾಗಿ ನಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಮಂಗಳವಾರ ಜಿಲ್ಲಾ ಶೈಕ್ಷಣಿಕ ಉಪನಿರ್ದೇಶಕರು ಮತ್ತು ಬಿಇಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ … Continued