ಕರ್ನಾಟಕದಲ್ಲಿ ಬುಧವಾರ ಕೊರೊನಾ ದೈನಂದಿನ ಸೋಂಕು ಇಳಿಕೆ

ಬೆಂಗಳೂರು; ಕರ್ನಾಟಕದಲ್ಲಿ ಬುಧವಾರ ಕೊರೊನಾ ಸೋಂಕು ಸಾವು ತುಸು ಇಳಿಕೆಯಾಗಿದೆ. ರಾಜ್ಯದಲ್ಲಿ ಬುಧವಾರ ಹೊಸದಾಗಿ 2,743 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 75 ಮಂದಿ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 3.081 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಕೊರೊನಾ ಸೋಂಕಿನ ಪಾಸಿಟಿವಿ ಪ್ರಮಾಣ ಶೇ.1.64 ಕ್ಕೆ ಕುಸಿದಿದ್ದು ರಾಜ್ಯದಲ್ಲಿ ಸೋಂಕಿನ ಮರಣ ಪ್ರಮಾಣ ಶೇ.2.73ಕ್ಕೆ ಇಳಿಕೆಯಾಗಿದೆ. ಈಗ ರಾಜ್ಯದಲ್ಲಿ 39,603 … Continued

ನಮ್ಮ ಬಳಿ ಸಿಡಿ ಬಾಂಬ್‌, ಮಿಸೈಲ್‌ ಇದೆ ಎಂದೆಲ್ಲ ಶಾಸಕರು ಹೇಳುವ ಮಾತಾ..?: ಜೆಡಿಎಸ್‌ ಶಾಸಕರ ವಿರುದ್ಧ ಸುಮಲತಾ ಕಿಡಿ

ಮಂಡ್ಯ: ‘ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆಯುಂಟಾಗುತ್ತಿದೆ. ಇದನ್ನು ಪ್ರಶ್ನೆ ಮಾಡಿದರೆ ಮಾಜಿ ಮುಖ್ಯಮಂತ್ರಿ ಸೇರಿ ಜಿಲ್ಲೆಯ ಹಲವು ಶಾಸಕರು ‘ನಮ್ಮ ಬಳಿ ಸಿಡಿ ಬಾಂಬ್‌ ಇದೆ, ಮಿಸೈಲ್‌ ಇದೆ ಎಂದೆಲ್ಲ ಬೆದರಿಕೆ ಹಾಕುತ್ತಿದ್ದಾರೆ. . ಇವರು ಶಾಸಕರಾಗಿ ಭಯೋತ್ಪಾದಕರಂತೆ ಮಾತನಾಡುತ್ತಿದ್ದಾರೆ ಎಂದು ಸಂಸದೆ ಸುಮಲತಾ ಕಿಡಿಕಾರಿದ್ದಾರೆ. ಬುಧವಾರ ಶ್ರೀರಂಗಪಟ್ಟಣ, ಪಾಂಡವಪುರ ತಾಲ್ಲೂಕಿನ … Continued

ಮನೆಯಲ್ಲೇ ಹೈಟಿ ಅಧ್ಯಕ್ಷ ಜೊವೆನೆಲ್ ಮೊಯೆಸ್ ಹತ್ಯೆ

ಪೋರ್ಟ್‌ ಆ  ಪ್ರಿನ್ಸ್‌: ಅಪರಿಚಿತ ಜನರ ಗುಂಪು ಅವರ ಖಾಸಗಿ ನಿವಾಸದ ಮೇಲೆ ಹಲ್ಲೆ ನಡೆಸಿದ ನಂತರ ಹೈಟಿ ಅಧ್ಯಕ್ಷ ಜೊವೆನೆಲ್ ಮೊಯೆಸ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ದೇಶದ ಮಧ್ಯಂತರ ಪ್ರಧಾನಿ ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೋಸೆ ಅವರ ಪತ್ನಿ, ಪ್ರಥಮ ಮಹಿಳೆ ಮಾರ್ಟಿನ್ ಮೊಯೆಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಧ್ಯಂತರ ಪ್ರಧಾನಿ ಕ್ಲೌಡ್ … Continued

ಪೊಲೀಸರು ಬೇಕಾದ್ರೆ ಕೇಸ್‌ ಹಾಕಲಿ, ನಾವು ಸರ್ಕಾರದ ವಿರುದ್ಧ ಹೋರಾಟ ಮಾಡಿಯೇ ಮಾಡ್ತೇವೆ:ಡಿಕೆಶಿ

ಶಿರಸಿ:ರಾಜ್ಯದಲ್ಲಿ ಕೊರೊನಾ ಸಮಯದಲ್ಲಿ ಜನ ಬಹಳ ನೋವು ಅನುಭವಿಸಿದ್ದಾರೆ. ಅದರ ನಡುವೆ ರಾಜ್ಯ ಹಾಗೂ ಕೇಂದ್ರದಲ್ಲಿ ಬೆಲೆ ಏರಿಕೆಯಿಂದ ಎಲ್ಲರಿಗೂ ವಿಪರೀತ ತೊಂದರೆಯಾಗುತ್ತಿದೆ. ಇದರ ವಿರುದ್ಧ ಹೋರಾಡುವ ರಾಷ್ಟ್ರ ಹಾಗೂ ರಾಜ್ಯದ ಕಾರ್ಯಕ್ರಮಕ್ಕೂ ಮುನ್ನ ಮಾರಿಕಾಂಬ ದೇವಿಯ ಆಶೀರ್ವಾದ ಪಡೆಯಲು ಶಿರಸಿಗೆ ಆಗಮಿಸಿದ್ದೇನೆ. ಈ ದೇವಿಯ ಇತಿಹಾಸದ ಬಗ್ಗೆ ತಿಳಿದಿದ್ದೇನೆ. ನಮ್ಮ ದುಃಖವನ್ನು ದೂರಮಾಡುವ ಶಕ್ತಿ … Continued

ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಸೈಕಲ್ ಜಾಥಾ

posted in: ರಾಜ್ಯ | 0

ಗದಗ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರು, ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಕಾರ್ಯಕರ್ತರು ನಗರದಲ್ಲಿ ಸೈಕಲ್ ಜಾಥಾ ನಡೆಸಿದರು. ಬೆಲೆ ಏರಿಕೆ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಗದಗ ಜಿಲ್ಲಾ ಕಾಂಗ್ರೆಸ್, … Continued

ಎಚ್‌ಡಿಕೆ-ಸುಮಲತಾ ವಾಕ್ಸಮರ: ನೋ ಕಾಮೆಂಟ್ಸ್‌ ಎಂದ ಎಚ್‌ಡಿಡಿ

ಬೆಂಗಳೂರು: ಕೆಆರ್‌ಎಸ್‌ ಅಣೆಕಟ್ಟೆ ಹಾಗೂ ಅಕ್ರಮ ಗಣಿಗಾರಿಕೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಪರಸ್ಪರರು ಟೀಕಾಪ್ರಹಾರ ನಡೆಸುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಲು ಮಾಜಿ ಪ್ರಧಾನಿ ಎಚ್‌ಡಿ.ದೇವೇಗೌಡ ಅವರು ನಿರಾಕರಿಸಿದ್ದಾರೆ. ಇದು ರಾಜ್ಯ ರಾಜಕೀಯ ವಲಯದಲ್ಲಿ ವಾದ-ಪ್ರತಿವಾದಕ್ಕೆ ಕಾರಣವಾಗಿದೆ. ಆದರೆ, ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಗ್ಗೆ ನಾನು ಪ್ರತಿಕ್ರಿಯೆ … Continued

ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಸ್ಕೃತಿ ಸಂಶೋಧನಾ ಕೇಂದ್ರಕ್ಕೆ ಶಿಲಾನ್ಯಾಸ

ಗೋಕರ್ಣ: ಗೋಕರ್ಣದ ಅಶೋಕೆಯಲ್ಲಿರುವ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಸ್ಕೃತಿ ಸಂಶೋಧನಾ ಕೇಂದ್ರಕ್ಕೆ ಬುಧವಾರ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಮತ್ತು ಗುಲ್ಬರ್ಗ ಜಿಲ್ಲೆ ಗವ್ಹಾಂರ ಮಠದ ಶ್ರೀ ತ್ರಿವಿಕ್ರಮಾನಂದ ಮಹಾರಾಜ್ ಶಿಲಾನ್ಯಾಸ ನೆರವೇರಿಸಿದರು. ಕರ್ಣಾಟಕ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ನಿರ್ಮಿಸಲು ಉದ್ದೇಶಿಸಿರುವ 1.4 ಕೋಟಿ ರೂ.ಗಳ ಅಂದಾಜು ವೆಚ್ಚದ ಮೊದಲ ಹಂತದ ಕಾಮಗಾರಿ ಆರಂಭವಾಗಿದ್ದು, ಎಂಟು ತಿಂಗಳೊಳಗೆ ಪೂರ್ಣಗೊಳಿಸುವ … Continued

ನೀರಿನಲ್ಲಿ ಕೊಚ್ಚಿಹೋದ ದಂಪತಿ

ಹುಬ್ಬಳ್ಳಿ: ಕರಾವಳಿ ಕೆಲವು ಭಾಗಗಳು ಹಾಗೂ ಉತ್ತರ ಕರ್ನಾಟಕದ ವಿಜಯಪುರ, ಬಳ್ಳಾರಿ, ವಿಜಯನಗರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ ದಂಪತಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹಗರಿಬೊಮ್ಮಹಳ್ಳಿ ತಾಲೂಕಿನ ತಂಬ್ರಹಳ್ಳಿ-ಮುತ್ಕೂರು ಗ್ರಾಮದ ನಿವಾಸಿಗಳಾದ ಮಲ್ಲಿಕಾರ್ಜುನ (55 ) ಹಾಗೂ ಸುಮಂಗಲಾ(48 ) ನೀರಿನಲ್ಲಿ ಕೊಚ್ಚಿಹೋದ ದಂಪತಿ. ಹೂವಿನಹಡಗಲಿ ತಾಲೂಕಿನ ಕಾಲ್ವಿ ಗ್ರಾಮದಲ್ಲಿ … Continued

ಕೆ.ಆರ್.ಎಸ್. ಅಣೆಕಟ್ಟು ಗೇಟ್ ಗಳ ಕಂಪ್ಯೂಟರೀಕರಣ

posted in: ರಾಜ್ಯ | 0

ಮೈಸೂರು: ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅವರ ನದುವೆ ನಡೆಯುತ್ತಿದ್ದ ಕೆ.ಆರ್.ಎಸ್. ಜಲಾಶಯ ಬಿರುಕು ಬಿಟ್ಟಿದೆ ಎಂಬ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಡ್ಯಾಂ ಗೇಟ್ ಗಳನ್ನು ದುರಸ್ಥಿಗೊಳಿಸಿ ಕಂಪ್ಯೂಟರೀಕರಣಗೊಳಿಸುವ ಕಾರ್ಯಕ್ಕೆ ಸರಕಾರ ಮುಂದಾಗಿದೆ. ಕೆ.ಆರ್.ಎಸ್, ಡ್ಯಾಂನಲ್ಲಿ ಒಟ್ಟು 173 ಗೇಟ್ ಗಳಿದ್ದು, ಈ ಪೈಕಿ 136 ಗೇಟ್  ಬದಲಾಯಿಸಲಾಗುತ್ತಿದೆ. ಗುಜರಾತ್ ನ ಅಹಮದಬಾದ್ … Continued

ಮೋದಿ ಕ್ಯಾಬಿನೆಟ್‌ ಪುನರ್ರಚನೆ : 43 ಸಚಿವರಲ್ಲಿ ಕರ್ನಾಟಕದ ನಾಲ್ವರಿಗೆ ಅವಕಾಶ..ಸಚಿವರ ಪಟ್ಟಿ ಇಲ್ಲಿದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ಅವಧಿಯ ಮೊದಲ ಕ್ಯಾಬಿನೆಟ್ ಪುನರ್ರಚನೆಯಲ್ಲಿ 43 ಸದಸ್ಯರು ಬುಧವಾರ ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ ಕರ್ನಾಟಕದ ನಾಲ್ವರಿಗೆ ಅದೃಷ್ಟ ಒಲಿದಿದೆ.  ಚಿಕ್ಕಮಗಳೂರು-ಉಡುಪಿ ಸಂಸದೆ ಶೋಬಾ ಕರಂದ್ಲಾಜೆ, ಚಿತ್ರದುರ್ಗ  ಸಂಸದ ನಾರಾಯಣಸ್ವಾಮಿ, ಬೀದರ ಸಂಸದ ಭಗವಂತ ಖೂಬಾ ಹಾಗೂ ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ ಅವರು ಸಚಿವರಾಗಿ ಪ್ರಮಾಣ ವಚನ … Continued