60 ರೂಪಾಯಿ ವಿಷಯಕ್ಕೆ 11 ವರ್ಷದ ಗೆಳೆಯನ ಕಲ್ಲು ಹೊಡೆದು ಕೊಂದ 13 ವರ್ಷದ ಬಾಲಕ..!

ಹಮೀರ್ಪುರ (ಉತ್ತರ ಪ್ರದೇಶ): ಆಘಾತಕಾರಿ ಘಟನೆಯೊಂದರಲ್ಲಿಉತ್ತರಪ್ರದೇಶದ ಹಮೀರ್‌ಪುರ್ ಜಿಲ್ಲೆಯಲ್ಲಿ ಕೇವಲ 60 ರೂ.ಗಳಕಾರಣಕ್ಕೆ 11 ವರ್ಷದ ಸ್ನೇಹಿತನನ್ನು ಕಲ್ಲೆಸೆದು ಸಾಯಿಸಿದ 13 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಬಾಲಕನ ಶವವನ್ನು ಬುಧವಾರ ಕಾಡುಪ್ರಾಣಿಗಳು ಛಿದ್ರಗೊಳಿಸಿ 11 ತುಂಡುಗಳಾಗಿ ಮಾಡಿದ ನಂತರ ಪತ್ತೆಯಾಗಿದೆ. ಮೂಲಗಳ ಪ್ರಕಾರ, ಬಂಧಿತ ಹುಡುಗ ಸುಮೇರ್ ಪುರ ಪಟ್ಟಣದ ಕಾನ್ಶಿ ರಾಮ್ … Continued

ನ್ಯಾಯಾಲಯದಲ್ಲಿ ಭೌತಿಕ ವಿಚಾರಣೆ: ಸಿಜೆಐಗೆ ಪುಟ್ಟ ಹುಡುಗಿ ಬರೆದ ಪತ್ರ ಆಧರಿಸಿ ಪಿಐಎಲ್ ದಾಖಲಿಸಿಕೊಂಡ ಸುಪ್ರೀಂಕೋರ್ಟ್‌

ನವದೆಹಲಿ:ಕೋರ್ಟ್‌ಗಳಲ್ಲಿ ಭೌತಿಕ ವಿಚಾರಣೆ ನಡೆಸುವ ಸಂಬಂಧ ಎದುರಾಗಿರುವ ಸಮಸ್ಯೆಗಳ ಕುರಿತು ಸುಪ್ರೀಂಕೋರ್ಟ್‌ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಮುಚ್ಚಿದ್ದ ಶಾಲೆಗಳು ಪುನಾರಂಭಗೊಂಡಿವೆ, ಹಾಗಿದ್ದರೂ ನ್ಯಾಯಾಲಯಗಳು ಭೌತಿಕ ವಿಚಾರಣೆ ಆರಂಭಿಸುವುದಕ್ಕೆ ಉತ್ಸುಕತೆ ತೋರುತ್ತಿಲ್ಲ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌. ವಿ. ರಮಣ ಅವರಿಗೆ ಪುಟ್ಟ ಹುಡುಗಿಯೊಬ್ಬಳು ಬರೆದ ಪತ್ರವನ್ನು ಆಧರಿಸಿ ಸುಪ್ರೀಂಕೋರ್ಟ್‌ … Continued

ಮಹತ್ವದ ತೀರ್ಮಾನ…ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್‌ ನಿಷೇಧಕ್ಕೆ ರಾಜ್ಯ ಸರ್ಕಾರದ ನಿರ್ಧಾರ

posted in: ರಾಜ್ಯ | 0

ಬೆಂಗಳೂರು: ಕರ್ನಾಟಕದಲ್ಲಿ ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್‌ ನಿಷೇಧಕ್ಕೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.ಈ ಸಂಬಂಧ ಮುಂದಿನ ಅಧಿವೇಶನದ ವೇಳೆ ಸರ್ಕಾರ ಸದನದಲ್ಲಿ ತಿದ್ದುಪಡಿ ಕಾಯ್ದೆ ಮಂಡಿಸಲಿದೆ ಎಂದು ಶನಿವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಸಚಿವ ಜೆ. ಸಿ. ಮಾಧುಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತರಲೂ ಸಹ ಕ್ಯಾಬಿನೆಟ್ ನಿರ್ಧಾರ … Continued

ಸೆಪ್ಟೆಂಬರ್ 30 ರಂದು ಪಶ್ಚಿಮ ಬಂಗಾಳದ 3, ಒಡಿಶಾದ 1 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ

ನವದೆಹಲಿ:ಪಶ್ಚಿಮ ಬಂಗಾಳದ ಸಂಸರ್‌ಗಂಜ್, ಜಂಗೀಪುರ ಮತ್ತು ಭಬನಿಪುರ ಮತ್ತು ಒಡಿಶಾದ ಪಿಪ್ಲಿಗೆ ಉಪಚುನಾವಣೆ ಸೆಪ್ಟೆಂಬರ್ 30 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಕೋವಿಡ್ ಪ್ರೋಟೋಕಾಲ್ ಅನುಸಾರವಾಗಿ ಚುನಾವಣೆ ನಡೆಯಲಿದೆ. ಪ್ರಸ್ತುತ, ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿ 31 ಸ್ಥಾನಗಳು ಮತ್ತು ಲೋಕಸಭೆಯಲ್ಲಿ ಎರಡು ಸ್ಥಾನಗಳು ಖಾಲಿ ಇವೆ. ಆದಾಗ್ಯೂ, ಪಶ್ಚಿಮ ಬಂಗಾಳ ಸರ್ಕಾರದ ವಿಶೇಷ … Continued

ಗುಂಡು ಹಾರಿಸಿ ತಾಲಿಬಾನಿಗಳ ಸಂಭ್ರಮಾಚರಣೆ: ಕಾಬೂಲ್ ನಲ್ಲಿ ಗುಂಡೇಟಿಗೆ ಮಕ್ಕಳೂ ಸೇರಿ 17 ಜನರು ಸಾವು: ವರದಿಗಳು

ನವದೆಹಲಿ: ಸ್ಥಳೀಯ ಅಫಘಾನ್ ಸುದ್ದಿ ಸಂಸ್ಥೆ ಅಶ್ವಕ ಪ್ರಕಾರ, ಶುಕ್ರವಾರ ರಾತ್ರಿ ತಾಲಿಬಾನ್ ಉಗ್ರರ ವೈಮಾನಿಕ ಗುಂಡಿನ ಸಂಭ್ರಮಾಚರಣೆಯಿಂದ ಕಾಬೂಲ್ ಮತ್ತು ಸುತ್ತಮುತ್ತ ಕನಿಷ್ಠ 17 ಜನರು ಮೃತಪಟ್ಟಿದ್ದಾರೆ ಮತ್ತು ಮಕ್ಕಳು ಸೇರಿದಂತೆ 41 ಮಂದಿ ಗಾಯಗೊಂಡಿದ್ದಾರೆ. ಪಂಜಶೀರ್ ಕಣಿವೆಯ ಮೇಲೆ ತಾಲಿಬಾನಿಗಳು ತಮ್ಮ ನಿಯಂತ್ರಣವನ್ನು ಪಡೆದುಕೊಂಡಿದ್ದಾರೆ ಮತ್ತು ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧವನ್ನು (NRFA) ಸೋಲಿಸಿದ್ದಾರೆ … Continued

ಬೋರ್‌ವೆಲ್‌ ನಿಂದ ಎಷ್ಟು ಬೇಕೋ ಅಷ್ಟು ನೀರು ಪಂಪ್‌ ಮಾಡಿ ಕುಡಿದ ಆನೆ- ವಿಡಿಯೋ ವೈರಲ್

ನವದೆಹಲಿ: ಆನೆಯೊಂದು ಬೋರ್ ವೆಲ್‍ನಿಂದ ತನಗೆ ಎಷ್ಟು ಬೇಕೋ ಅಷ್ಟು ನೀರನ್ನು ಮಾತ್ರ ಸೇದಿಕೊಂಡು ಕುಡಿದಿರುವ ಅಪರೂಪದ ವೀಡಿಯೋ ಇದೀಗ ವೈರಲ್ ಆಗಿದೆ. ಜಲ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಲಶಕ್ತಿ ಸಚಿವಾಲಯವು ಆನೆ ಕೊಳವೆಬಾವಿಯಿಂದ ನೀರು ತೆಗೆಯುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಆನೆ ಕೊಳವೆಬಾವಿಯಿಂದ ನೀರನ್ನು ಪಂಪ್ ಮಾಡುತ್ತದೆ. … Continued

ಭಾರತದ 12 ಹೈಕೋರ್ಟ್‌ಗಳಿಗೆ 68 ನ್ಯಾಯಮೂರ್ತಿಗಳ ಹೆಸರು ಶಿಫಾರಸು ಮಾಡಿದ ಸುಪ್ರೀಂಕೋರ್ಟ್ ಕೊಲಿಜಿಯಂ

ನವದೆಹಲಿ: ದೇಶದ 12 ಹೈಕೋರ್ಟ್‌ಗಳಿಗೆ 68 ನ್ಯಾಯಮೂರ್ತಿಗಳ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಕೊಲಿಜಿಯಂಶಿಫಾರಸು ಮಾಡಿದೆ. ಕರ್ನಾಟಕದ ಇಬ್ಬರು ವಕೀಲರನ್ನು ನ್ಯಾಯಮೂರ್ತಿಗಳನ್ನಾಗಿ ಮಾಡಬೇಕೆಂದು ಕೊಲಿಜಿಯಂ ತನ್ನ ಶಿಫಾರಸಿನಲ್ಲಿ ಹೇಳಿದೆ. 68 ಹೆಸರುಗಳನ್ನು ಆಯ್ಕೆ ಮಾಡುವ ಮೊದಲು 100 ಹೆಸರುಗಳನ್ನು ಕೊಲಿಜಿಯಂ ಪರಿಗಣಿಸಿತ್ತು. 68ರಲ್ಲಿ 44 ವಕೀಲರು ಮತ್ತು 24 ನ್ಯಾಯಾಂಗ ಅಧಿಕಾರಿಗಳು ಸೇರಿದ್ದಾರೆ. ಇವರಲ್ಲಿ 11 … Continued

ಬೆಂಗಳೂರಿನಲ್ಲಿ ಒಂದೇ ಕಾಲೇಜಿನ 16 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು!

posted in: ರಾಜ್ಯ | 0

ಬೆಂಗಳೂರು: ಶಾಲೆ-ಕಾಲೇಜು ಆರಂಭದ ಬೆನ್ನಲ್ಲೇ ಕೊರೊನಾ ವೈರಸ್ ಸೋಂಕಿನ ಭೀತಿ ಎದುರಾಗಿದ್ದು, ಬೆಂಗಳೂರಿನಲ್ಲಿ ಇಂದು ಒಂದೇ ಕಾಲೇಜಿನಲ್ಲಿ 16 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿನ ದಾಸರಹಳ್ಳಿ ವಲಯದ ಚಿಕ್ಕಬಾಣಾವರದಲ್ಲಿರುವ ನರ್ಸಿಂಗ್ ಕಾಲೇಜೊಂದರ 16 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದಯು ವರದಿಯಾಗಿದೆ. ಮೊದಲು ಕಾಲೇಜಿನ ಒಬ್ಬ ವಿದ್ಯಾರ್ಥಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಂತರ … Continued

ಉತ್ತರ ಪ್ರದೇಶಲ್ಲಿ ಎಸ್‌ಪಿ ಸ್ಥಾನಗಳು ಗಣನೀಯ ಏರಿಕೆ, ಆದರೆ ಗೆಲ್ಲುವುದು ಬಿಜೆಪಿ ಎನ್ನುತ್ತದೆ ಎಬಿಪಿ- ಸಿ ವೋಟರ್‌ ಚುನಾವಣಾ ಪೂರ್ವ ಸಮೀಕ್ಷೆ

ಮುಂದಿನ ವರ್ಷದ ಆರಂಭದಲ್ಲಿ ಉತ್ತರಾಖಂಡ್, ಗೋವಾ, ಪಂಜಾಬ್ ಮತ್ತು ಮಣಿಪುರದಂತಹ ರಾಜ್ಯಗಳೊಂದಿಗೆ ಉತ್ತರ ಪ್ರದೇಶವೂ ವಿಧಾನಸಭಾ ಚುನಾವಣೆಗೆ ಹೋಗಲಿದೆ. ಉತ್ತರ ಪ್ರದೇಶದ ಸ್ಪರ್ಧೆಯು ರಾಜಕೀಯ ಪಕ್ಷಗಳಿಗೆ ಹಿಂದಿ ಹೃದಯಭೂಮಿಯಲ್ಲಿ ಪ್ರಾಬಲ್ಯವನ್ನು ಕಾಯ್ದುಕೊಳ್ಳಲು ಮಹತ್ವದ್ದಾಗಿದೆ. ವಿನಾಶಕಾರಿ ಕೋವಿಡ್ -19 ಎರಡನೇ ಅಲೆಯನ್ನು ರಾಜ್ಯ ಸರ್ಕಾರ ನಿರ್ವಹಿಸಿದ್ದಕ್ಕಾಗಿ ಮುಖ್ಯಮಂತ್ರಿಯನ್ನು ಬಿಜೆಪಿಯ ಉನ್ನತ ಅಧಿಕಾರಿಗಳು ಶ್ಲಾಘಿಸಿದರೆ, ಇದಕ್ಕೆ ವ್ಯತಿರಿಕ್ತವಾಗಿ ಗಂಗೆಯಲ್ಲಿ … Continued

ಬೊಮ್ಮಾಯಿ ನಾಯಕತ್ವದಲ್ಲೇ ಮುಂದಿನ ಚುನಾವಣೆ: ಅಮಿತ್‌ ಶಾ ಹೇಳಿಕೆಗೆ ಭಿನ್ನ ಹೇಳಿಕೆ ನೀಡಿದ ಸಚಿವ ಈಶ್ವರಪ್ಪ..!

posted in: ರಾಜ್ಯ | 0

ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎಂಬ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ರಾಜ್ಯ ಬಿಜೆಪಿಯಲ್ಲಿ ಭಿನ್ನ ಹೇಳಿಕೆಗಳು ಬರುತ್ತಿವೆ. ಸಚಿವ ಕೆ.ಎಸ್.ಈಶ್ವರಪ್ಪ ಕೂಡ ಇದಕ್ಕೆ ಭಿನ್ನ ಹೇಳಿಕೆ ನೀಡಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ ಅವರು ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿ, ಅಮಿತ್ ಶಾ ಯಾವ ರೀತಿ ಯಾವ … Continued