ತಮಿಳು ಭಾಷೆ ದೇವರ ಭಾಷೆ ಎಂದು ಹೇಳಿದ ಮದ್ರಾಸ್​ ಹೈಕೋರ್ಟ್​​

ಚೆನ್ನೈ: ತಮಿಳು (Tamil ) ಭಾಷೆ ದೇವರ ಭಾಷೆ ಎಂದು ಮದ್ರಾಸ್​ ಹೈ ಕೋರ್ಟ್ (Madras High Court)​ ಕೊಂಡಾಡಿದೆ. ದೇಶದಾದ್ಯಂತ ದೇವಾಲಯಗಳಲ್ಲಿ ಅಜ್ವರರು ಮತ್ತು ನಾಯನ್ಮಾರ್‌, ಅರುಣಗಿರಿನಾಥರಂತಹ ಸಂತರು ರಚಿಸಿದ ತಮಿಳು ಸ್ತೋತ್ರಗಳನ್ನು ಪಠಿಸಬೇಕು ಎಂದು ಅದು ತಿಳಿಸಿದೆ. ನ್ಯಾಯಮೂರ್ತಿ ಎನ್ ಕಿರುಬಾಕರನ್ ಮತ್ತು ನ್ಯಾಯಮೂರ್ತಿ ಬಿ. ಪುಗಲೆಂಧಿ ಅವರ ಪೀಠ ಇತ್ತೀಚೆಗೆ ತಮಿಳು … Continued

ಮುಂಡಗೋಡ: ಎಮ್ಮೆ ಮೇಯಿಸಲು ಹೋದ ವ್ಯಕ್ತಿ ಮೇಲೆ ಕರಡಿ ದಾಳಿ;ತಲೆಗೆ ಗಾಯ

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಜೇನಮುರಿ ಅರಣ್ಯದಲ್ಲಿ ಎಮ್ಮೆ ಮೇಯಿಸಲು ಅರಣ್ಯಕ್ಕೆ ಹೊಗಿದ್ದವನ ಮೇಲೆ ಎರಡು ಕರಡಿಗಳು ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದ ವರದಿಯಾಗಿದೆ. ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿ ಭಾಗು ಧೂಳು ಕೊಕ್ರೆ(23).ಈತ ಎಂದಿನಂತೆ ಎಮ್ಮೆ ಮೇಯಿಸಲು ಅರಣ್ಯದಂಚಿಗೆ ಹೋಗಿ ಮರಳುವಾಗ, ತನ್ನ ಮಗಳೊಂದಿಗೆ ಇದ್ದ ಕರಡಿಗಳು ದಾಳಿ ಮಾಡಿವೆ. … Continued

ವಿಧಾನ ಸೌಧದ 2ನೇ ಮಹಡಿಯಲ್ಲಿ ಬಿಯರ್ ಬಾಟಲ್ ಪತ್ತೆ..!

ಬೆಂಗಳೂರು : ರಾಜ್ಯದ ಶಕ್ತಿ ಕೇಂದ್ರವೆನಿಸಿಕೊಂಡಿರುವ ವಿಧಾನಸೌಧದೊಳಗೆ ಎಣ್ಣೆ ಪಾರ್ಟಿ ನಡೆಯುತ್ತಿತ್ತಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಎರಡು ಬಿಯರ್‌ ಬಾಟಲಿಗಳು ವಿಧಾನಸೌಧದ ಒಳಗೆ ಪತ್ತೆಯಾಗಿರುವುದೇ ಈ ಅನುಮಾನ ಬರಲು ಕಾರಣವಾಗಿದೆ. ವಿಧಾನಸೌಧದ 2ನೇ ಮಹಡಿಯಲ್ಲಿರುವ ರೂಂ ನಂಬರ್‌ 208ರ ಪಕ್ಕದ ನೀರಿನ ಟ್ಯಾಂಕ್‍ನ ಸಿಂಕ್ ಬಳಿ ಬಾಟಲ್ ಪತ್ತೆಯಾಗಿದ್ದು, ರಾತ್ರಿಯ ವೇಳೆಯಲ್ಲಿ ಪಾರ್ಟಿ ನಡೆಸಿರುವ ಕುರಿತು … Continued

ಗುಜರಾತಿನ 17ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣವಚನ

ಅಹಮದಾಬಾದ್: ಗುಜರಾತಿನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಇಂದು (ಸೋಮವಾರ) ಪ್ರಮಾಣವಚನ ಸ್ವೀಕರಿಸಿದರು. ಭೂಪೇಂದ್ರ ಪಟೇಲ್ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಜರಾತಿನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಭಾನುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭೂಪೇಂದ್ರ ಪಟೇಲ್ ಅವರ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ … Continued

ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನ

ಮಂಗಳೂರು: ರಾಜ್ಯಸಭಾ ಸದಸ್ಯ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅನಾರೋಗ್ಯದಿಂದ ಇಂದು (ಸೋಮವಾರ) ವಿಧಿವಶರಾಗಿದ್ದಾರೆ. ಕಳೆದ ಕೆಲ ತಿಂಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಕರ್ ಫರ್ನಾಂಡಿಸ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಆಸ್ಕರ್ ಫರ್ನಾಂಡಿಸ್ ಜುಲೈ 18ರಂದು ಯೋಗ ಮಾಡುತ್ತಿದ್ದಾಗ ಮನೆಯಲ್ಲಿಯೇ ಜಾರಿ ಬಿದ್ದಿದ್ದರು. ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ತೆರಳಿದಾಗ ತಲೆಗೆ … Continued

ಪೆಗಾಸಸ್ ವಿವಾದ: ಸಾರ್ವಜನಿಕ ಚರ್ಚೆಗೆ ವಿಷಯವಲ್ಲ, ವಿವರವಾದ ಅಫಿಡವಿಟ್ ಸಲ್ಲಿಸಲು ಬಯಸುವುದಿಲ್ಲ ಎಂದು ಸುಪ್ರೀಂಕೋರ್ಟಿಗೆ ತಿಳಿಸಿದ ಕೇಂದ್ರ

ಮುಚ್ಚಿಡಲು ಏನೂ ಇಲ್ಲ ಮತ್ತು ಅದಕ್ಕಾಗಿಯೇ ಅದು ತನ್ನದೇ ಆದ ಡೊಮೇನ್ ತಜ್ಞರ ಸಮಿತಿಯನ್ನು ರಚಿಸುವುದಾಗಿ ಸುಪ್ರೀಂಕೋರ್ಟಿಗೆ ಕೇಂದ್ರ ಸರ್ಕಾರ ತಿಳಿಸಿದೆ. ನವದೆಹಲಿ: ಪೆಗಾಸಸ್ ಪ್ರಕರಣದ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಮೇಲೆ ವಿವರವಾದ ಅಫಿಡವಿಟ್ ಸಲ್ಲಿಸಲು ಬಯಸುವುದಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಸೋಮವಾರ ಹೇಳಿದೆ. ಕೇಂದ್ರವನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ … Continued

ಕಾಂಗ್ರೆಸ್ ಭಯೋತ್ಪಾದನೆಯ ತಾಯಿ: ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ

ಕುಶಿನಗರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್‌ ಪಕ್ಷವನ್ನು ದೇಶದಲ್ಲಿ ಭಯೋತ್ಪಾದನೆಯ ತಾಯಿ ಎಂದು ಬಣ್ಣಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ, ಕಾಂಗ್ರೆಸ್ ಅನ್ನು “ದೇಶದಲ್ಲಿ ಭಯೋತ್ಪಾದನೆಯ ತಾಯಿ” ಎಂದು ಕರೆದರು ಹಾಗೂ ದೇಶವನ್ನು ನೋಯಿಸುವ ಜನರನ್ನು … Continued

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣ :ನಾಲ್ವರು ಆರೋಪಿಗಳು ವಶಕ್ಕೆ

ಯಾದಗಿ: ಶಹಾಪುರ ನಗರ ಹೊರವಲಯದಲ್ಲಿ ಮಹಿಳೆಯೊಬ್ಬರನ್ನು ನಗ್ನಗೊಳಿಸಿ ಹಲ್ಲೆ ನಡೆಸಿರುವ ಅಮಾನೀಯ ಕೃತ್ಯವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ 8-9 ತಿಂಗಳ ಹಿಂದೆ ಶಹಾಪುರ ನಗರ ಹೊರವಲಯದಲ್ಲಿ ನಡೆದಿದೆ ಎನ್ನಲಾದ ಈ ಕೃತ್ಯದ ವಿಡಿಯೊ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ … Continued

ಬೆಲೆ ಏರಿಕೆ, ಇಂಧನ ದರ ಹೆಚ್ಚಳ ಖಂಡಿಸಿ ವಿಧಾನಸೌಧಕ್ಕೆ ಎತ್ತಿನ ಗಾಡಿಯಲ್ಲಿ ಹೊರಟ ಕಾಂಗ್ರೆಸ್‌ ನಾಯಕರು..!

ಬೆಂಗಳೂರು: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಇಂದು ವಿಧಾನ ಮಂಡಲ ಅಧಿವೇಶನದಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದಾರೆ. ಮೊದಲ ದಿನವೇ ಅವರಿಗೆ ಕಾಂಗ್ರೆಸ್‌ ಮತ್ತು ರೈತರಿಂದ ಪ್ರತಿಭಟನೆ ಎದುರಿಸುವಂತಾಗಿದೆ. ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಹಾಗೂ ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ಸಿಲಿಂಡರ್‌ ದರ ಏರಿಕೆ ಖಂಡಿಸಿ ಕಾಂಗ್ರೆಸ್ (Congress) ನಾಯಕರು ಎತ್ತಿನಗಾಡಿ … Continued

ಉತ್ತರ ಪ್ರದೇಶ: ಫಿರೋಜಾಬಾದ್‌ನಲ್ಲಿ 12,000ಕ್ಕೂ ಹೆಚ್ಚು ಜನರಿಗೆ ವೈರಲ್ ಜ್ವರದ ಸೋಂಕು..!

ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ 12,000ಕ್ಕೂ ಹೆಚ್ಚು ಜನರು ವೈರಲ್ ಜ್ವರದಿಂದ ಬಳಲುತ್ತಿದ್ದಾರೆ ಎಂದು ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಇನ್ನೂ ನಾಲ್ಕು ಸಾವುಗಳು ವರದಿಯಾಗಿದ್ದು, 88 ಮಕ್ಕಳನ್ನು ಒಳಗೊಂಡಂತೆ ಸಾವುಗಳ ಸಂಖ್ಯೆ 114 ಕ್ಕೆ ತಲುಪಿದೆ. ವೆಕ್ಟರ್-ಹರಡುವ ರೋಗಗಳ ಹರಡುವಿಕೆಯನ್ನು ಪರೀಕ್ಷಿಸಲು ವ್ಯಾಪಕವಾದ ಫಾಗಿಂಗ್ ಮತ್ತು ಮನೆ-ಮನೆಗೆ … Continued