ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‍: ಫೀಲ್ಡಿಂಗ್ ಮಾಡಿದ ನಾಯಿಗೆ ಐಸಿಸಿ ಪುರಸ್ಕಾರ..! ವಿಡಿಯೋ ವೀಕ್ಷಿಸಿ

ದುಬೈ: ಕ್ರಿಕೆಟ್ ಅಂಗಳದಲ್ಲಿ ಆಟಗಾರರ ವಿಶೇಷ ಸಾಧನೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಪುರಸ್ಕಾರ ನೀಡುವುದು ಗೊತ್ತಿದೆ. ಆದರೆ ಐಸಿಸಿ ಈಗ ಕ್ರಿಕೆಟ್ ಆಟದ ವೇಳೆ ಫೀಲ್ಡಿಂಗ್ ಮಾಡಿದ ಶ್ವಾನವೊಂದಕ್ಕೆ ವಿಶೇಷವಾಗಿ ಡಾಗ್ ಆಫ್ ದಿ ಮಂತ್ ಎಂಬ ಬಿರುದು ನೀಡಿದೆ..!
ಕ್ರಿಕೆಟ್ ನಡೆಯುತ್ತಿರುವಾಗ ಅಭಿಮಾನಿಗಳು ಕ್ರಿಕೆಟ್ ಅಂಗಳಕ್ಕೆ ಲಗ್ಗೆ ಇಡುವುದನ್ನು ನೋಡಿದ್ದೇವೆ. ಆದರೆ ಉತ್ತರ ಐರ್ಲೆಂಡಿನ ಮಗೇರಮೆಸಾನ್‍ನಲ್ಲಿರುವ ಬ್ರೆಡಿ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಬ್ರೆಡಿ ಮತ್ತು ಸಿಎಸ್‍ಎನ್‍ಐ ಮಹಿಳಾ ತಂಡಗಳ ನಡುವೆ ಆಲ್ ಐರ್ಲೆಂಡ್ ಟಿ-20 ಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ ನಡೆಯುವಾಗ ನಾಯಿ ಬಾಲ್‌ ಹಿಡಿದಿದೆ..!

advertisement

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಇದೀಗ ಗದಗದಲ್ಲಿ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಅಬ್ಬಿ ಲೆಖಿ ಚೆಂಡನ್ನು ಆಫ್ ಸೈಡ್‍ಗೆ ಹೊಡೆದ್ದಾರೆ. ತಕ್ಷಣ ಫೀಲ್ಡರ್ ರನ್ ಔಟ್ ಮಾಡಲು ಚೆಂಡನ್ನು ವಿಕೆಟ್ ಕೀಪರ್ ಕೈಗೆ ಎಸೆದಿದ್ದಾರೆ. ಕೀಪರ್ ರನ್ ಔಟ್ ಮಾಡುವ ಬರದಲ್ಲಿ ಎಸೆದ ಚೆಂಡು ಗುರಿ ತಪ್ಪಿ ಮೈದಾನದ ಮತ್ತೊಂದು ಭಾಗಕ್ಕೆ ಹೋಗಿದೆ. ಇದನ್ನು ಕಂಡ ಸ್ಟೇಡಿಯಂನಲ್ಲಿದ್ದ ಶ್ವಾನವೊಂದು ಮೈದಾನಕ್ಕೆ ನುಗ್ಗಿದೆ. ದೌಡಾಯಿಸಿ ಬಂದ ನಾಯಿ ಚೆಂಡನ್ನು ಬಾಯಿಯಿಂದ ಹಿಡಿದು ಮೈದಾನದಲ್ಲಿ ಸುತ್ತ ಓಡಲು ಪ್ರಾರಂಭಿಸಿದೆ. ಈ ವೇಳೆ ಫೀಲ್ಡರ್ ಗಳು ಮತ್ತು ಶ್ವಾನದ ಮಾಲೀಕ ಅದನ್ನು ಹಿಡಿಯುವ ಪ್ರಯತ್ನ ಮಾಡಿದರೂ ಅವರಿಗೆ ಸಿಗಲಿಲ್ಲ. ಕೊನೆಗೆ ನಾಯಿ ನಾನ್ ಸ್ಟ್ರೈಕರ್ ನಲ್ಲಿದ್ದ ಅಯೋಫೆ ಫಿಶರ್ ಅವರ ಬಳಿ ಬಂದು ಚೆಂಡನ್ನು ಅವರಿಗೆ ನೀಡಿತು. ನೋಡುಗರನ್ನು ಭರಪೂರ ಮನರಂಜಿಸಿತು.
ಈ ಸ್ವಾರಸ್ಯಕರ ಘಟನೆಗೆ ಶ್ವಾನ ಪ್ರಿಯರು ಖುಷಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ್ದ ಐಸಿಸಿ ಮೈದಾನಕ್ಕಿಳಿದು ಅದ್ಭುತವಾದ ಫೀಲ್ಡಿಂಗ್ ನಡೆಸಿದ ಶ್ವಾನಕ್ಕೆ ಐಸಿಸಿ ಡಾಗ್ ಆಫ್ ದಿ ಮಂತ್ ಪುರಸ್ಕಾರ ನೀಡಲಾಗುವುದು ಎಂದು ಟ್ವಿಟ್ಟರ್‍ ನಲ್ಲಿ ಹೇಳಿಕೊಂಡಿದೆ.
ಈ ಶ್ವಾನ ಕೇವಲ ಒಂದು ಕ್ಷಣದಲ್ಲಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಇರಾನ್‌ನ 'ಮಹಿಳೆಯರಿಗಾಗಿ, ಮಹಿಳೆಯರಿಂದʼ ನಡೆಯುತ್ತಿರುವ ಕ್ರಾಂತಿ ಶ್ಲಾಘಿಸಿದ ಇರಾನಿನ ದಿವಂಗತ ಶಾ ಪುತ್ರ ರೆಜಾ ಪಹ್ಲವಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement