ಕೋವಿಡ್‌: ಅಕ್ಟೋಬರ್-ನವೆಂಬರ್‌ ಅತ್ಯಂತ ನಿರ್ಣಾಯಕ, ಹಬ್ಬ-ಹರಿದಿನಗಳು ಜಾಸ್ತಿ ಎಚ್ಚರಿಕೆ ಅಗತ್ಯ ಎಂದ ಕೇಂದ್ರ ಸರ್ಕಾರ

ನವದೆಹಲಿ: ಮುಂಬರುವ ಎರಡು ಮೂರು ತಿಂಗಳುಗಳು ನಿರ್ಣಾಯಕವಾಗಿದ್ದು, ದೇಶದಲ್ಲಿ ಯಾವುದೇ ರೀತಿಯಲ್ಲಿ ಕೊವಿಡ್ (Covid) ಉಲ್ಬಣಕ್ಕೆ ಅವಕಾಶ ಕೊಡಬೇಡಿ ಎಂದುನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ.ಪಾಲ್ ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ಮತ್ತು ನವೆಂಬರ್ ಅತ್ಯಂತ ನಿರ್ಣಾಯಕ ತಿಂಗಳುಗಳಾಗಿವೆ. ಇವು ಹಬ್ಬಗಳು ಮತ್ತು ಜ್ವರದ ತಿಂಗಳುಗಳು. ಈ ಎರಡು … Continued

ಶಾಲಾ ಶುಲ್ಕ ಶೇ 15ರಷ್ಟು ಕಡಿತ; ಹೈಕೋರ್ಟ್‌ ಆದೇಶ

ಬೆಂಗಳೂರು: ಖಾಸಗಿ ಶಾಲೆಗಳ ಬೋಧನಾ ಶುಲ್ಕವನ್ನು ಶೇ.15ರಷ್ಟು ಕಡಿತ ಮಾಡಿ ಹೈಕೋರ್ಟ್ ಆದೇಶ ಮಾಡಿದೆ. ಶೇ.30ರಷ್ಟು ಶಾಲಾ ಶುಲ್ಕ ಕಡಿತ ಮಾಡಿದ್ದ ಸರ್ಕಾರದ ಕ್ರಮವನ್ನು ವಿರೋಧಿಸಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ 2020-21ನೆ ಸಾಲಿಗೆ ಬೋಧನಾ ಶುಲ್ಕವನ್ನು ಶೇ.15ರಷ್ಟು ಕಡಿತಗೊಳಿಸಿ ಆದೇಶಿಸಿದೆ. ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ನ್ಯಾಯಾಲಯ ಈ … Continued

ಪ್ರೌಢಶಾಲೆ 1801 ಸಹ ಶಿಕ್ಷಕರ ನೇಮಕಕ್ಕೆ ಕ್ರಮ

ಬೆಂಗಳೂರು: ರಾಜ್ಯದಲ್ಲಿ 3,590 ಪ್ರೌಢಶಾಲೆ ಸಹಶಿಕ್ಷಕ ಹುದ್ದೆಗಳು ಖಾಲಿಯಿದ್ದು, ಈ ಪೈಕಿ 1801 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಟಿ.ಎನ್.ಬಾಲಕೃಷ್ಣ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 1801 ಶಿಕ್ಷಕರ ಹುದ್ದೆ ಭರ್ತಿ ಮಾಡಲು ಆರ್ಥಿಕ ಇಲಾಖೆಗೆ … Continued

ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಸಂಪುಟಕ್ಕೆ 24 ಸಚಿವರು: ಪ್ರಮಾಣ ವಚನ ಸ್ವೀಕಾರ

ಗಾಂಧಿನಗರ: ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಮ್ಮುಖದಲ್ಲಿ ಗುರುವಾರ ಗುಜರಾತಿನ ಹೊಸ ಸಚಿವ ಸಂಪುಟದಲ್ಲಿ ಒಟ್ಟು 24 ಸಚಿವರು ಪ್ರಮಾಣವಚನ ಸ್ವೀಕರಿಸಿದರು. ಗಾಂಧಿನಗರದ ರಾಜಭವನದಲ್ಲಿ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಅವರು 10 ಕ್ಯಾಬಿನೆಟ್ ಮಂತ್ರಿಗಳು ಮತ್ತು 14 ರಾಜ್ಯ ಮಂತ್ರಿಗಳಿಗೆ ಪ್ರಮಾಣವಚನ ಬೋಧಿಸಿದರು, ಸಚಿವರು ಇವರು: ರಾಜೇಂದ್ರ ತ್ರಿವೇದಿ, ಜಿತು … Continued

ಹುಬ್ಬಳ್ಳಿ ನೃಪತುಂಗ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡ ವದಂತಿ: ಅರಣ್ಯಾಧಿಕಾರಿ ಇಲಾಖೆ ಸಿಬ್ಬಂದಿ ಪರಿಶೀಲನೆ

ಹುಬ್ಬಳ್ಳಿ : ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಗುರುವಾರ ಮುಂಜಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ರಾತ್ರಿ ಬೆಟ್ಟದಲ್ಲಿ ಚಿರತೆ ನೋಡಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯ ಬಂದ ಬಗ್ಗೆ ಹೆಜ್ಜೆ ಗುರುತುಗಳ ಪರಿಶೀಲನೆ ನಡೆಸುತ್ತಿದ್ದಾರೆ. ಗುರುವಾರ ಮುಮಜಅನೆಯಿಂದಲೇ … Continued

ಅದ್ನಾನ್ ಅಲ್-ಸಹ್ರಾವಿ: ಫ್ರೆಂಚ್ ಸೈನ್ಯದಿಂದ ಕೊಲ್ಲಲ್ಪಟ್ಟ ಸಹಾರಾದ ಇಸ್ಲಾಮಿಕ್ ಸ್ಟೇಟ್‌ ರಹಸ್ಯ’ ನಾಯಕ, ಈತನ ತಲೆಗಿತ್ತು 50 ಲಕ್ಷ ಡಾಲರ್‌ ಬಹುಮಾನ..!

ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಇಸ್ಲಾಮಿಕ್ ಸ್ಟೇಟ್‌ ಗ್ರೇಟರ್ ಸಹಾರಾ ನಾಯಕನ ಸಾವನ್ನು ಬುಧವಾರ ತಡವಾಗಿ ಘೋಷಿಸಿದ್ದಾರೆ. ಅಡ್ನಾನ್ ಅಬು ಅಲ್-ವಲೀದ್ ಅಲ್-ಸಹ್ರಾವಿ ಹತ್ಯೆಯು ಎಂಟು ವರ್ಷಗಳಿಗಿಂತ ಹೆಚ್ಚು ಕಾಲ ಸಹೇಲ್‌ನಲ್ಲಿ ಉಗ್ರರ ವಿರುದ್ಧ ಹೋರಾಡುತ್ತಿರುವ ಫ್ರೆಂಚ್ ಸೈನ್ಯಕ್ಕೆ “ಪ್ರಮುಖ ಯಶಸ್ಸು” ಎಂದು ಅವರು ಹೇಳಿದ್ದಾರೆ. ಅಲ್-ಸಹ್ರಾವಿ “ಫ್ರೆಂಚ್ ಪಡೆಗಳಿಂದ ತಟಸ್ಥಗೊಂಡಿದ್ದಾನೆ ಎಂದು ಮ್ಯಾಕ್ರೋನ್ ಟ್ವೀಟ್ … Continued

ಊಹಾಪೋಹಗಳಿಗೆ ತೆರೆ: ಸಂಸದೆ-ನಟಿ ನುಸ್ರತ್ ಜಹಾನ್‌ ನವಜಾತ ಪುತ್ರನ ಜನ್ಮ ಪ್ರಮಾಣಪತ್ರದಲ್ಲಿ ತಂದೆ ಹೆಸರು ಯಶ್ ದಾಸ್‌ಗುಪ್ತಾ

  ಬೆಂಗಾಲಿ ನಟಿ ಮತ್ತು ಟಿಎಂಸಿ ಸಂಸದೆ ನುಸ್ರತ್ ಜಹಾನ್ ಅವರ ಮಗನ ಜನನ ನೋಂದಣಿ ವಿವರಗಳು ಸಾರ್ವಜನಿಕ ವಲಯದಲ್ಲಿವೆ. ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್ ಡಾಕ್ಯುಮೆಂಟ್ ಪ್ರಕಾರ, ಮಗುವಿಗೆ ಯಿಶಾನ್‌ ಜೆ.ದಾಸಗುಪ್ತಾ (Yishaan J Dasgupta) ಎಂದು ಹೆಸರಿಸಲಾಗಿದೆ. ಜನ್ಮ ಪ್ರಮಾಣಪತ್ರದಲ್ಲಿ ಮಗುವಿನ ತಂದೆ ಎಂದು ನಟ ಯಶ್ ದಾಸ್ ಗುಪ್ತಾ ಅವರ ಔಪಚಾರಿಕ ಹೆಸರಾದ … Continued

ತಲೆಮರೆಸಿಕೊಂಡಿದ್ದ ಹೈದರಾಬಾದ್ ಅತ್ಯಾಚಾರ ಆರೋಪಿ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆ

ಹೈದರಾಬಾದ್‌: ಹೈದರಾಬಾದ್ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯ ಶವ ವಾರಂಗಲ್‌ನ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ.. ಇದಕ್ಕೂ ಮುನ್ನ ಮಂಗಳವಾರ, ತೆಲಂಗಾಣ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ ಅವರು ಹೈದರಾಬಾದ್ ಅತ್ಯಚಾರ ಪ್ರಕರಣದ ಆರೋಪಿಗಳನ್ನು “ಎನ್ಕೌಂಟರ್ ನಲ್ಲಿ ಕೊಲ್ಲಲಾಗುವುದು” ಎಂದು ಹೇಳಿದ್ದರು ಹಾಗೂ ಆರೋಪಿ ಹಿಡಿಯಲು 15 ಪೊಲೀಸ್ ತಂಡಗಳನ್ನು ರಚಿಸಿ … Continued

ಕುಮಟಾ: ಬೋನಿನಲ್ಲಿದ್ದ ನಾಯಿ ಹಿಡಿಯಲು ಹೋಗಿ ತಾನೇ ಬಂಧಿಯಾದ ಚಿರತೆ..!

ಕುಮಟಾ; ಆಹಾರ ಅರಸಿ ಬಂದಿದ್ದ ಚಿರತೆ ಬೋನಿನಲ್ಲಿದ್ದ ನಾಯಿ ಹಿಡಿಯಲು ಹೋಗಿ ತಾನೇ ಬೋನಿನಲ್ಲಿ ಬಂಧಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಿಮಾನಿ ಗ್ರಾಮದಲ್ಲಿ ನಡೆದಿದೆ. ಹೊಂಚು ಹಾಕಿ ರಾತ್ರಿ ಸಮಯದಲ್ಲಿ ನಾಯಿ ಹಿಡಿಯಲು ಬಂದಿದ್ದ ಚಿರತೆ ನಾಯಿ ಬೋನಿನೊಳಗೆ ಹೋದದ್ದನ್ನ ಗಮನಿಸಿದ ಮನೆಯ ಮಾಲಿಕರು ತಕ್ಷಣ ಬೋನ್‌ … Continued

ಆನೇಕಲ್ ಬಳಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರ ಸಾವು

  ಆನೇಕಲ್: ಇಂದು (ಸೆ.16) ಬೆಳ್ಳಂಬೆಳಗ್ಗೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನೆರಳೂರು ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ನೆರಳೂರು ಗೇಟ್ ಬಳಿ ಲಾರಿಗೆ ಆ್ಯಂಬುಲೆನ್ಸ್ ಹಿಂಬದಿಯಿಂದ ಗುದ್ದಿದೆ ಎನ್ನಲಾಗಿದ್ದು, ಆ್ಯಂಬುಲೆನ್ಸ್​ನಲ್ಲಿದ್ದ ಮೂವರು ಪುರುಷರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಆ್ಯಂಬುಲೆನ್ಸ್ … Continued