ನೀರಜ್, ಛೆಟ್ರಿ, ಮಿಥಾಲಿ ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ

ನವದೆಹಲಿ: ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ , ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಭಾರತದ ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಸೇರಿದಂತೆ 12 ಕ್ರೀಡಾಪಟುಗಳನ್ನು ಈ ಬಾರಿಯ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ (Khel Ratna) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನೀರಜ್ ಚೋಪ್ರಾ ಅವರನ್ನು ಅಥ್ಲೆಟಿಕ್ಸ್ … Continued

ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್: ಗ್ಲಾಸ್ಗೋದ ಕೋಪ್‌ 26 ಶೃಂಗಸಭೆಯಲ್ಲಿ ಜಾಗತಿಕ ಸೌರ ವಿದ್ಯುತ್ ಗ್ರಿಡ್‌ಗಾಗಿ ಪ್ರತಿಪಾದಿಸಿದ ಪ್ರಧಾನಿ ಮೋದಿ

ಗ್ಲಾಸ್ಗೊ: ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಮಾನವ ಕುಲವು ತೊಂದರೆಗೊಳಗಾದ ಪರಿಸರ ಸಮತೋಲನವನ್ನು ಮರುಸ್ಥಾಪಿಸಲು ಸೌರಶಕ್ತಿ ಸಹಾಯ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಗ್ಲಾಸ್ಗೋದಲ್ಲಿ ಕೋಪ್‌ 26 (COP 26) ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಹೇಳಿದರು. ‘ಕ್ಲೀನ್ ಟೆಕ್ನಾಲಜಿ ಆವಿಷ್ಕಾರ ಮತ್ತು ನಿಯೋಜನೆಯನ್ನು ವೇಗಗೊಳಿಸುವುದು’ ಎಂಬ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಒಂದು ಸೂರ್ಯ, … Continued

ವರ್ಕ್ ಫ್ರಮ್ ಹೋಮ್ ಪದ್ಧತಿಗೆ ಮಾನ್ಯತೆ ನೀಡುವಂತೆ ಕೇಂದ್ರ ಸಚಿವರಲ್ಲಿ ಮನವಿ: ಸಚಿವ ಅಶ್ವತ್ಥ ನಾರಾಯಣ ಮಾಹಿತಿ

posted in: ರಾಜ್ಯ | 0

ನವದೆಹಲಿ: ಪ್ರಸ್ತುತ ವರ್ಕ್ ಫ್ರಮ್ ಹೋಮ್ ಪದ್ಧತಿ ಹೆಚ್ಚಾಗಿದೆ. ಹೀಗಾಗಿ ವರ್ಕ್ ಫ್ರಮ್​ ಹೋಮ್​ಗೆ ಮಾನ್ಯತೆ ನೀಡುವಂತೆ ಕೇಂದ್ರ ಸಚಿವರ ಭೇಟಿ ವೇಳೆ ಮನವಿ ಮಾಡಿದ್ದೇನೆ ಎಂದು ದೆಹಲಿಯಲ್ಲಿ ಐಟಿ-ಬಿಟಿ ಸಚಿವ ಅಶ್ವತ್ಥ್ ನಾರಾಯಣ ಇಂದು (ಮಂಗಳವಾರ) ಹೇಳಿದ್ದಾರೆ. ಕೇಂದ್ರದ ಐಟಿ ಸಚಿವರು 24ನೇ ಟೆಕ್ ಸಮ್ಮಿಟ್​ನಲ್ಲಿದ್ದಾರೆ. ಐಟಿ ಇಲಾಖೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಮಾತುಕತೆ … Continued

ನ. 5ರಂದು ಕೇದಾರನಾಥಕ್ಕೆ ಪ್ರಧಾನಿ ಮೋದಿ ಭೇಟಿ; ಆದಿ ಶಂಕರಾಚಾರ್ಯರ ಸಮಾಧಿ ಸ್ಥಳ, 12 ಅಡಿ ಎತ್ತರದ ಪ್ರತಿಮೆ ಅನಾವರಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 5ರಂದು ಉತ್ತರಾಖಂಡದ ಕೇದಾರನಾಥದಲ್ಲಿ ಶಂಕರಾಚಾರ್ಯರ ಸಮಾಧಿ ಸ್ಥಳವನ್ನು ಭಕ್ತರ ದರ್ಶನಕ್ಕೆ ಅನಾವರಣಗೊಳಿಸಲಿದ್ದಾರೆ. ಅಲ್ಲದೆ ಕೇದಾರನಾಥದಲ್ಲಿ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. ನವೆಂಬರ್ 5ರಂದು ಬೆಳಿಗ್ಗೆ ಪ್ರಧಾನಮಂತ್ರಿಯವರು ಬೆಳಿಗ್ಗೆ 8:00 ಗಂಟೆಗೆ ಪವಿತ್ರ ದೇಗುಲಕ್ಕೆ ಆಗಮಿಸುತ್ತಾರೆ ಮತ್ತು ಅಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. … Continued

ಹಿಮಾಚಲಪ್ರದೇಶ: ನಾಲ್ಕು ಕ್ಷೇತ್ರಗಳ ಉಪಚುನಾವಣೆಯಲ್ಲಿಆಡಳಿತಾರೂಢ ಬಿಜೆಪಿ ಶೂನ್ಯ ಸಾಧನೆ..!

ನವದೆಹಲಿ: ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಒಂದುಹಿನ್ನಡೆಯಲ್ಲಿ, ಅಕ್ಟೋಬರ್ 30 ರಂದು ಉಪಚುನಾವಣೆ ನಡೆದ ಹಿಮಾಚಲ ಪ್ರದೇಶದ ಎಲ್ಲಾ ಮೂರು ವಿಧಾನಸಭೆ ಮತ್ತು ಒಂದು ಲೋಕಸಭೆ ಸ್ಥಾನದ ಮೇಲೆ ಕಾಂಗ್ರೆಸ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಹಿಮಾಚಲ ಪ್ರದೇಶದ ಉಪಚುನಾವಣೆ ಫಲಿತಾಂಶ ಕಾಂಗ್ರೆಸ್‌ಗೆ ಅತ್ಯಂತ ಸಕಾರಾತ್ಮಕವಾಗಿದೆ. ನಾವು ಎಲ್ಲಾ ಮೂರು ವಿಧಾನಸಭೆ ಮತ್ತು ಒಂದು ಲೋಕಸಭೆ … Continued

ನಾಳೆಯಿಂದ ಸಾರ್ವಜನಿಕರಿಗೆ ನಟ ಪುನೀತ್‌‘ಸಮಾಧಿ ದರ್ಶನ’ಕ್ಕೆ ಅವಕಾಶ

posted in: ರಾಜ್ಯ | 0

ಬೆಂಗಳೂರು: ನಾಳೆ (ಬುಧವಾರ) ಬೆಳಗ್ಗೆ 9 ಗಂಟೆಯಿಂದ ಸಂಜೆ ಏಳು ಗಂಟೆ ವರೆಗೆ ಪ್ರತಿನಿತ್ಯ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ. ದಿವಂಗತ ನಟ ಪುನೀತ್ ಕುಟುಂಬಸ್ಥರು ಐದನೇ ದಿನವಾದ ಇಂದು (ಮಂಗಳವಾರ) ಶಾಸ್ತ್ರ ಹಾಲುತುಪ್ಪದ ಪೂಜೆ ಬಳಿಕ ಅಪ್ಪು ಸಮಾಧಿ ದರ್ಶನಕ್ಕೆ ಕೆಲವು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಅಭಿಮಾನಿಗಳಿಗೆ ಇಂದು … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಅನಿಲ್ ದೇಶಮುಖರನ್ನು ನ. 6 ರ ವರೆಗೆ ಇಡಿ ವಶಕ್ಕೆ ನೀಡಿದ ಕೋರ್ಟ್‌

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅವರನ್ನು ಮುಂಬೈ ನ್ಯಾಯಾಲಯ ನ. 6 ರ ವರೆಗೆ ಜಾರಿ ನಿರ್ದೇಶನಾಲಯದ (ಇಡಿ) ವಶಕ್ಕೆ ಒಪ್ಪಿಸಿದೆ. ಸುದೀರ್ಘ 12 ಗಂಟೆಗಳ ವಿಚಾರಣೆಯ ನಂತರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೇಶಮುಖ್ ಅವರನ್ನು ಮಂಗಳವಾರ ಬೆಳಗಿನ ಜಾವ ಜಾರಿ ನಿರ್ದೇಶನಾಲಯ … Continued

ಪುನೀತ್‌ ರಾಜಕುಮಾರಗೆ ಪದ್ಮಶ್ರೀ : ಸಿಎಂ ಸಮ್ಮತಿ

posted in: ರಾಜ್ಯ | 0

ಮೈಸೂರು: ನಟ ಪುನೀತ್ ರಾಜ್‌ಕುಮಾರ್ ಪದ್ಮಶ್ರೀ ಸೇರಿದಂತೆ ಎಲ್ಲ ಗೌರವಕ್ಕೆ ಅರ್ಹರು. ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಸರ್ವ ಸಮ್ಮತ ಒಪ್ಪಿಗೆ ಇದೆ. ನಿಯಮಗಳನ್ನು ಪರಿಶೀಲನೆ ಮಾಡಿದ ನಂತರ ಕೇಂದ್ರ ಸರ್ಕಾರದ ಶಿಫಾರಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಎಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಬಳಿಯಿರುವ ಕಬಿನಿ ಜಲಾಶಯಕ್ಕೆ ಅವರು … Continued

ಶಾಲೆಯನ್ನೇ ನೋಡದ ಭಿಕ್ಷೆ ಬೇಡುವ ಹುಡುಗಿ ನಿರರ್ಗಳ ಇಂಗ್ಲಿಷ್‌ಗೆ ಬಾಲಿವುಡ್‌ ನಟ ಅನುಪಮ ಖೇರ್‌ ಕಂಗಾಲು… ವೀಕ್ಷಿಸಿ

ನವ ದೆಹಲಿ :ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಆಗಾಗ್ಗೆ ವಿಶೇಷವಾಗಿರುವ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಅವರು ಅಂಥದ್ದೇ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು ಈ  ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗಿದೆ. ಅವರು ಸೂರಜ್ ಬರ್ಜತ್ಯಾ ನಿರ್ದೇಶನದ ‘ಉಚೈ’ ಚಿತ್ರದ ಶೂಟಿಂಗ್‌ಗಾಗಿ ನಟ ಪ್ರಸ್ತುತ ನೇಪಾಳದಲ್ಲಿದ್ದಾರೆ. ಅನುಪಮ್ ಖೇರ್ … Continued

ಅಫ್ಘಾನಿಸ್ತಾನದಲ್ಲಿ ಮನಕಲಕುವ ಘಟನೆಗಳು..: ಕುಟುಂಬ ನಿರ್ವಹಿಸಲು ಮುದುಕನಿಗೆ 9 ವರ್ಷದ ಹೆಣ್ಣು ಮಗು ಮಾರಾಟ ಮಾಡಿದ ತಂದೆ..!

ಕಾಬೂಲ್‌: ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕುತ್ತಿದ್ದಂತೆ ನಿಷೇಧಿತ ಪ್ರಾಕ್ಟೀಸ್‌ಗಳು ಅನೇಕ ಭಾಗಗಳಲ್ಲಿ ತನ್ನ ತನ್ನ ಕರಾಳ ರೂಪವನ್ನು ತೋರಿಸಲು ಆರಂಭಿಸಿವೆ. ಹಣಕಾಸು ಮುಗ್ಗಟ್ಟಿನಿಂದ ಈಗ ಅಫ್ಘಾನಿಸ್ತಾನದಲ್ಲಿ ಈಗ ಎಂಟ್ಹತ್ತು ವರ್ಷದ ಹೆಣ್ಣು ಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ…! ಯುವತಿಯರನ್ನು ಮದುವೆಗಾಗಿ ಮಾರಾಟ ಮಾಡಲಾಗುತ್ತಿದೆ…!! ಇತ್ತೀಚಿನ ತಿಂಗಳುಗಳಲ್ಲಿ, ಬಡತನ ಮತ್ತು ಹಸಿವಿನಿಂದ ಹೋರಾಡುತ್ತಿರುವ ಅನೇಕ ಸ್ಥಳಾಂತರಗೊಂಡ … Continued