ಪ್ರೇರಣಾದಾಯಕ..: ಕೇರಳದ ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಪಡೆದ 104 ವರ್ಷದ ಬೊಚ್ಚುಬಾಯಿಯ ಹಣ್ಣುಹಣ್ಣು ಮುದುಕಿ..!

ಕೇರಳದ 104 ವರ್ಷದ ಹಣ್ಣುಹಣ್ಣು ಮುದುಕಿಯೊಬ್ಬರು ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕೊಟ್ಟಾಯಂನಲ್ಲಿ ವಾಸಿಸುವ ಈ 104 ವರ್ಷದ ಮಹಿಳೆ ಕುಟ್ಟಿಯಮ್ಮ ಎಂಬವರು ಕೇರಳ ರಾಜ್ಯ ಸಾಕ್ಷರತಾ ಮಿಷನ್‌ ನಡೆಸಿದ ಪರೀಕ್ಷೆಯಲ್ಲಿ 00 ಕ್ಕೆ 89 ಪ್ರತಿಶತ ಅಂಕಗಳನ್ನು ಗಳಿಸಿದ್ದಾರೆ. ಇವರಿಗೆ ಕಿವಿ ಕೇಳಿಸುವುದಿಲ್ಲ, ಜೀವನದಲ್ಲಿ ಈ ಮೊದಲು ಶಾಲೆಗೇ ಹೋದವರಲ್ಲ. … Continued

ಹೊಸ ಪುಸ್ತಕದ ವಿವಾದದ ನಡುವೆ ಸಲ್ಮಾನ್ ಖುರ್ಷಿದ್ ನೈನಿತಾಲ್ ಮನೆ ಧ್ವಂಸ

ನವದೆಹಲಿ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಹೊಸ ಪುಸ್ತಕದ ಕೋಲಾಹಲದ ನಡುವೆ ಸೋಮವಾರ ನೈನಿತಾಲ್‌ನಲ್ಲಿರುವ ಅವರ ಮನೆಯನ್ನು ಧ್ವಂಸಗೊಳಿಸಲಾಯಿತು. ಅವರು ತಮ್ಮ ಪುಸ್ತಕದಲ್ಲಿ ಹಿಂದುತ್ವವನ್ನು ಐಸಿಸ್‌ ಹಾಗೂ ಬೊಕೊ ಹರಾಂಗೆ ಹೋಲಿಸಿದ ನಂತರ ಅನೇಕರಿಂದ ಆಕ್ರೋಶ ವ್ಯಕ್ತವಾಗಿದೆ. ಹಾಗೂ ದೆಹಲಿಯಲ್ಲಿ ಅವರ ವಿರುದ್ಧ ದೂರು ಸಹ ದಾಖಲಾಗಿದೆ. ಈ ಮಧ್ಯೆ ನೈನಿತಾಲ್ನಲ್ಲಿರುವ ಅವರ ಮನೆಯನ್ನು … Continued

ಧಾರಾಕಾರ ಮಳೆಗೆ ಇಬ್ಭಾಗವಾದ ರಸ್ತೆ: ತಲೆಕೆಳಗಾಗಿ ಸಿಲುಕಿಕೊಂಡ ಕಾರು..!

posted in: ರಾಜ್ಯ | 0

ಕೆಆರ್ ಪೇಟೆ: ರಾತ್ರಿ ಸುರಿದ ಭಾರೀ ಮಳೆಯಿಂದ ಪ್ರವಾಹಕ್ಕೆ ಕೆ. ಆರ್. ಪೇಟೆ ತಾಲೂಕು ಶೀಳನೆರೆ ಹೋಬಳಿ ಹುಣಸನಹಳ್ಳಿ ಹೆಚ್ ಬಳ್ಳೇಕೆರೆ ಗ್ರಾಮಕ್ಕೆ ಹಾದು ಹೋಗುವ ರಸ್ತೆ ಕೊಚ್ಚಿಕೊಂಡು ಹೋಗಿದೆ. ಇದೇ ಸಮಯದಲ್ಲಿ ಕಾರೊಂದು ಈ ರಸ್ತೆಯ ಕೊಚ್ಚಿಹೋದ ಭಾಗದಲ್ಲಿ ತಲೆಕೆಳಗಾಗಿ ಬಿದ್ದು ಸಿಲುಕಿಕೊಂಡಿದೆ. ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರಾಗಿದ್ದಾರೆ ಎಂದು ಆದೋಲನ.ಇನ್‌ ವರದಿ ಮಾಡಿದೆ. ಮಳೆಯ … Continued

ಈಜಿಪ್ಟ್: ಚೇಳುಗಳ ಕಡಿತಕ್ಕೆ ಮೂವರು ಸಾವು, 500 ಜನರು ಅಸ್ವಸ್ಥ..!

ಬಲವಾದ ಚಂಡಮಾರುತ ನಂತರ ಸಂಭವಿಸಿದ ಮಳೆ ದುರಂತದ ನಂತರ ಈಜಿಪ್ಟ್ (Egypt)ನ ದಕ್ಷಿಣ ನಗರ ಅಸ್ವಾನ್ ಪ್ರದೇಶದಲ್ಲಿ ಚೇಳುಗಳ ಹಾವಳಿಯಿಂದ 500ಕ್ಕೂ ಹೆಚ್ಚು ಜನರನ್ನು ಚೇಳುಗಳು ಕಚ್ಚಿದ್ದು, ಅವುಗಳ ಪೈಕಿ ಮೂವರು ಸಾವಿಗೀಡಾಗಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಚೇಳುಗಳು ಕಚ್ಚಿ ಮೂವರು ಸತ್ತಿದ್ದಾರೆ. ಆದರೆ ಅಸ್ವಾನ್ ಪ್ರದೇಶದ ಗವರ್ನರ್ ಮೇಜರ್ ಜನರಲ್ ಅಶ್ರಫ್ ಅತಿಯಾ … Continued

ಪೇಜಾವರ ಶ್ರೀಗಳ ಕುರಿತು ಟೀಕಾತ್ಮಕ ಹೇಳಿಕೆ: ತೀವ್ರ ಆಕ್ರೋಶದ ನಂತರ ಕ್ಷಮೆಯಾಚಿಸಿದ ಹಂಸಲೇಖ

posted in: ರಾಜ್ಯ | 0

ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ಸಂಯೋಜಕ ಮತ್ತು ಸ್ಕ್ರಿಪ್ಟ್ ರೈಟರ್ ಹಂಸಲೇಖ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರನ್ನು ಉಲ್ಲೇಖಿಸುವಾಗ ಮಾಡಿದ ಕೆಲವು ಟೀಕೆಗಳು ಬಿರುಗಾಳಿಯೆಬ್ಬಿಸಿ ಭಾರೀ ಟೀಕೆಗಳು ವ್ಯಕ್ತವಾದ ನಂತರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಂಸಲೇಖ ದಲಿತರ ಮನೆಯಲ್ಲಿ ಪೇಜಾವರ ಶ್ರೀಗಳು ಹೋಗಿ ಕುಳಿತರೆಂದು … Continued

ಹಾಡಹಗಲೇ ಆರ್‌ಎಸ್‌ಎಸ್ ಕಾರ್ಯಕರ್ತನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ, ಪೂರ್ವಯೋಜಿತ ಕೃತ್ಯ ಎಂದ ಬಿಜೆಪಿ

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತನನ್ನು ಸೋಮವಾರ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನನ್ನು ಎಸ್. ಸಂಜಿತ್ ಎಂದು ಗುರುತಿಸಲಾಗಿದ್ದು, ಆತ ತನ್ನ ಪತ್ನಿಯೊಂದಿಗೆ ಮೋಟಾರ್ ಸೈಕಲ್ಲಿನಲ್ಲಿ ಹೋಗುತ್ತಿದ್ದಾಗ ನಾಲ್ವರ ತಂಡವೊಂದು ದಾರಿಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ (ನವೆಂಬರ್ 15) ಬೆಳಿಗ್ಗೆ … Continued

ಐಐಎಂನಲ್ಲಿ ಭಗವದ್ಗೀತೆ..: ಡಿಸೆಂಬರ್‌ 13 ರಿಂದ ಐಐಎಂ ಅಹ್ಮದಾಬಾದ್‌ನಲ್ಲಿ ಕಾರ್ಪೊರೇಟ್ ವೃತ್ತಿಪರರಿಗೆ ಭಗವದ್ಗೀತೆ ಕೋರ್ಸ್‌ ಆರಂಭ..!

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM) ಅಹಮದಾಬಾದ್ ಕಾರ್ಪೊರೇಟ್ ವೃತ್ತಿಪರರಿಗೆ ಮ್ಯಾನೇಜ್ಮೆಂಟ್ ಕಲಿಸಲು ಭಗವದ್ಗೀತೆಯ ಕೋರ್ಸ್ ಪ್ರಾರಂಭಿಸಲಿದೆ..! ಡಿಸೆಂಬರ್ 13 ರಿಂದ ಪ್ರಾರಂಭವಾಗುವ ಕಾರ್ಯಕ್ರಮವು ಗೀತೆಯಿಂದ ‘ಸಮಕಾಲೀನ ನಿರ್ವಹಣಾ ಪರಿಕಲ್ಪನೆಗಳು, ಸಂಘರ್ಷಗಳು, ಸಂದಿಗ್ಧತೆಗಳು ಮತ್ತು ವ್ಯವಹಾರದಲ್ಲಿನ ವ್ಯಾಪಾರ-ವಹಿವಾಟುಗಳ ಅನ್ವೇಷಣೆ’ (to explore contemporary management concepts, conflicts, dilemmas, and trade-offs in business)’ ಪಾಠಗಳು … Continued

ಮುಂಡಗೋಡ: ಕೆರೆಗೆ ಉರುಳಿದ ಕಾರು, ಅಂತ್ಯಕ್ರಿಯೆಗೆ ಹೊರಟ ದಂಪತಿ ದುರ್ಮರಣ

posted in: ರಾಜ್ಯ | 0

ಮುಂಡಗೋಡ: ಪಟ್ಟಣದ ಬಳಿಯ ಅಮ್ಮಾಜಿ ಕೆರೆಯಲ್ಲಿ ಕಾರೊಂದು ಮುಳುಗಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ದಂಪತಿ ಮೃತಪಟ್ಟ ಘಟನೆ ವರದಿಯಾಗಿದೆ. ಈ ಘಟನೆ ಇಂದು (ಸೋಮವಾರ) ಬೆಳಗಿನ ಜಾವ ನಡೆದಿದ್ದು, ಮೃತ ದಂಪತಿಯನ್ನು ರಾಜು ವರ್ಗೀಸ್ ಹಾಗೂ ಬ್ಲೆಸ್ಸಿ ರಾಜು ಎಂದು ಗುರುತಿಸಲಾಗಿದೆ. ಇಬ್ಬರು ಮೂಲತಃ ಅರಿಶಿಣಗೇರಿಯವರು ಎಂದು ಹೇಳಲಾಗಿದ್ದು,  ಹಾಲಿ  ಬೆಂಗಳೂರಿನಲ್ಲಿ ನೆಲೆಸಿದ್ದರು. ಕರವಳ್ಳಿಯಲ್ಲಿ ಸಂಬಂಧಿಕರೊಬ್ಬರು … Continued

ಹುಬ್ಬಳ್ಳಿ: ಫೀಲ್ಡಿಂಗ್ ವೇಳೆ ಇಬ್ಬರು ಕ್ರಿಕೆಟ್‌ ಆಟಗಾರರ ಮಧ್ಯೆ ಡಿಕ್ಕಿ: ಒಬ್ಬ ಆಟಗಾರನಿಗೆ ಐಸಿಯುನಲ್ಲಿ ಚಿಕಿತ್ಸೆ

posted in: ರಾಜ್ಯ | 0

ಹುಬ್ಬಳ್ಳಿ: ಫೀಲ್ಡಿಂಗ್ ವೇಳೆ ಇಬ್ಬರು ಕ್ರಿಕೆಟ್‌ ಆಟಗಾರರ ಮಧ್ಯೆ ಡಿಕ್ಕಿ: ಒಬ್ಬ ಆಟಗಾರ ಐಸಿಯುಗೆ ದಾಖಲು ಹುಬ್ಬಳ್ಳಿ: ಹುಬ್ಬಳ್ಳಿಯ ರಾಜನಗರದ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಡಿವಿಷನ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಇಬ್ಬರು ಆಟಗಾರರು ಡಿಕ್ಕಿ ಹೊಡೆದ ಪರಿಣಾಮ ಆಟಗಾರನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ. ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ಎ … Continued

ಬೆಂಗಳೂರು ಕೃಷಿಮೇಳದಲ್ಲಿ ಒಂದು ಕೋಟಿ ಬೆಲೆಯ ಗೂಳಿಯೇ ಆಕರ್ಷಣೆಯ ಕೇಂದ್ರ ಬಿಂದು

posted in: ರಾಜ್ಯ | 0

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ವರ್ಷದ ಕೃಷಿ ಮೇಳದಲ್ಲಿ ಸುಮಾರು ₹ 1 ಕೋಟಿ ಮೌಲ್ಯದ ಕೃಷ್ಣ ಎಂಬ ಮೂರೂವರೆ ವರ್ಷದ ಗೂಳಿ ಆಕರ್ಷಣೆಯ ಕೇಂದ್ರವಾಗಿ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಗೂಳಿಯ ಮಾಲೀಕ ಬೋರೇಗೌಡ ಮಾತನಾಡಿ, ಈ ಪ್ರಾಣಿ ‘ಹಳ್ಳಿಕಾರ್’ ತಳಿಗೆ ಸೇರಿದ್ದು, ಈ ತಳಿಯನ್ನು ಎಲ್ಲ ಜಾನುವಾರು ತಳಿಗಳ ತಾಯಿ’ ಎಂದು … Continued