ಕರ್ನಾಟಕದ ಮಾಜಿ ರಾಜ್ಯಪಾಲ, ಆಂಧ್ರದ ಮಾಜಿ ಸಿಎಂ ರೋಸಯ್ಯ ನಿಧನ

ಹೈದರಾಬಾದ್: ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ. ರೋಸಯ್ಯ(88 ವರ್ಷ) ಶನಿವಾರ ನಿಧನರಾಗಿದ್ದಾರೆ. ಅವರು ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ 2009-2010ರಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದ ರಾಜ್ಯಪಾಲರಾಗಿ 2014ರಲ್ಲಿ ಜೂನ್‌ 28ರಿಂದ ಆಗಸ್ಟ್ 31ರವರೆಗೆ ಅಲ್ಪಾವಧಿ ಸೇವೆ ಸಲ್ಲಿಸಿದ್ದರು. ತಮಿಳುನಾಡಿನ ರಾಜ್ಯಪಾಲರಾಗಿ 2011 ರಿಂದ 2016ರ ವರೆಗೆ … Continued

ಉದ್ಘಾಟನೆ ವೇಳೆ ರಸ್ತೆಗೆ ತೆಂಗಿನಕಾಯಿ ಬಡಿದರೆ ಒಡೆಯದ ಕಾಯಿ…ಒಡೆದುಹೋದ ರಸ್ತೆ..!!

ಲಕ್ನೋ: ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ 1.16 ಕೋಟಿ ರೂ.ಗಳ ವೆಚ್ಚದಲ್ಲಿ ಮರುನಿರ್ಮಾಣಗೊಂಡ 7 ಕಿಮೀ ರಸ್ತೆಯನ್ನು ಉದ್ಘಾಟಿಸಲು ಬಿಜೆಪಿ ಶಾಸಕರೊಬ್ಬರು ತೆಂಗಿನಕಾಯಿ ಒಡೆದ ನಂತರದಲ್ಲಿ ತೆಂಗಿನಕಾಯಿ ಬದಲು ರಸ್ತೆಯೇ ಒಡೆದು ಚೂರಾದ  ಅಚ್ಚರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ..! ಬಿಜ್ನೋರ್ ಸದರ್ ಕ್ಷೇತ್ರದ ಶಾಸಕರಾದ  ಮೌಸಮ್ ಚೌಧರಿ ಅವರು ರಸ್ತೆ ಉದ್ಘಾಟನೆಗೆಂದು ತೆಂಗಿನಕಾಯಿ ಯನ್ನು ರಸ್ತೆಗೆ … Continued

ಪಂಚರ್‌ ಆಗಿ ನಿಂತಿದ್ದ ಲಾರಿಗೆ ಟ್ಯಾಂಕರ್‌ ಡಿಕ್ಕಿ: ನಾಲ್ವರ ಸಾವು

ಚಿತ್ರದುರ್ಗ: ಪಂಚರ್‌ ಆಗಿ ನಿಂತಿದ್ದ ಈರುಳ್ಳಿ ಸಾಗಿಸುತ್ತಿದ್ದ ಲಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು  ಮೃತಪಟ್ಟ ಘಟನೆ ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಈರುಳ್ಳಿ ಲಾರಿಗೆ ಪಂಚರ್ ಹಾಕುತ್ತಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ರಾಯಚೂರು ಮೂಲದ ಹುಲುಗಪ್ಪ, ಕುಷ್ಟಗಿ ಮೂಲದ ಮಂಜುನಾಥ, ವಿಜಯಪುರ ಮೂಲದ ಸಂಜಯ್, ರೋಣ ಮೂಲದ … Continued

ಮೂರನೇ ಅಲೆ ನಿಚ್ಚಳ, ಆದರೆ ದುರಂತವಾಗಬಾರದು: ಓಮಿಕ್ರಾನ್ ಹೆದರಿಕೆ ನಡುವೆ ಡಾ.ಅಗರವಾಲ್

ನವದೆಹಲಿ: ಭಾರತದಲ್ಲಿ ಪತ್ತೆಯಾದ ಎರಡು ಒಮಿಕ್ರಾನ್ ಪ್ರಕರಣಗಳ ಹಿನ್ನೆಲೆಯಲ್ಲಿ, ದೇಶದ ಉನ್ನತ ಕೋವಿಡ್-19 ತಜ್ಞರು ಶುಕ್ರವಾರ, ಕೊರೊನಾವೈರಸ್‌ನ ಮೂರನೇ ಅಲೆ ದೇಶವನ್ನು ಅಪ್ಪಳಿಸುವುದು ನಿಚ್ಚಳವಾಗಿದೆ ಎಂದು ಹೇಳಿದ್ದಾರೆ, ಆದಾಗ್ಯೂ, ಇದು ಆರೋಗ್ಯ ರಕ್ಷಣಾ ವ್ಯವಸ್ಥೆ ಮೇಲೆ ಒತ್ತಡಕ್ಕೆ ಕಾರಣವಾಗಿ ಅದುವೇ ದುರಂತವಾಗಬಾರದು ಎಂದೂ ಹೇಳಿದ್ದಾರೆ. ನಾವು ಅದರ ಬಗ್ಗೆ ಯೋಚಿಸುತ್ತಿರುವಂತೆ ಮೂರನೇ ಅಲೆಯಿಂದ ಸೋಂಕಿನ ಸಂಖ್ಯೆಯಲ್ಲಿ … Continued

ಈಗಿರುವ ಲಸಿಕೆಗಳು ಓಮಿಕ್ರಾನ್‌ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನಲು ಯಾವುದೇ ಪುರಾವೆಗಳಿಲ್ಲ: ಪದೇಪದೇ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ

ನವದೆಹಲಿ: ಅಸ್ತಿತ್ವದಲ್ಲಿರುವ ಲಸಿಕೆಗಳು ಕೋವಿಡ್ -19ರ ಓಮಿಕ್ರಾನ್ ರೂಪಾಂತರದಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲದಿದ್ದರೂ, ವರದಿಯಾದ ಓಮಿಕ್ರಾನ್‌ನ ಕೆಲವು ರೂಪಾಂತರಗಳು ಲಸಿಕೆ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ, ಹೊಸ ರೂಪಾಂತರದ ರೋಗನಿರೋಧಕ ತಪ್ಪಿಸಿಕೊಳ್ಳುವಿಕೆ ಬಗ್ಗೆ ನಿರ್ಣಾಯಕ ಪುರಾವೆಗಳ ಬಗ್ಗೆ ಇನ್ನೂ ಅಧ್ಯಯನ ನಡೆಯುತ್ತಿದೆ ಎಂದು ಹೇಳಿದೆ. ಕೊರೊನಾ … Continued