ಹಸುವಿನ ಹೊಟ್ಟೆಯಲ್ಲಿತ್ತು 77 ಕೆಜಿ ಪ್ಲಾಸ್ಟಿಕ್​…! ಶಸ್ತ್ರಚಿಕಿತ್ಸೆ ಮಾಡಿದಾಗ ಸಿಕ್ಕಿದ್ದೆಲ್ಲ ಬರೀ ಐಸ್​ಕ್ರೀಂ ಕಪ್​ಗಳು, ಪ್ಲಾಸ್ಟಿಕ್‌ ಸ್ಪೂನ್​ಗಳು..!!

ಗುಜರಾತ್​​ನ ಆನಂದ್​ ಜಿಲ್ಲೆಯಲ್ಲಿ ಅನಾರೋಗ್ಯಕ್ಕೀಡಾಗಿದ್ದ ಒಂದು ಬೀಡಾಡಿ ಹಸುವನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದಾಗ, ಅದರ ಹೊಟ್ಟೆಯಲ್ಲಿ ಐಸ್​ಕ್ರೀಂ ಕಪ್​ಗಳು, ಪ್ಲಾಸ್ಟಿಕ್​ ಕಪ್​ಗಳು, ಸ್ಪೂನ್​ಗಳು ಪತ್ತೆಯಾಗಿವೆ…! ಆನಂದ್ ಪಶುವೈದ್ಯಕೀಯ ಇಲಾಖೆ ಇತ್ತೀಚೆಗೆ ಚರೋಟಾರ್ ಪ್ರದೇಶದಲ್ಲಿ ಬಿಡಾಡಿ ಹಸುವಿನ ಹೊಟ್ಟೆಯಿಂದ 77 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರತೆಗೆದಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹಸುವನ್ನು ರಕ್ಷಿಸಿದ್ದಾರೆ. … Continued

ಉಪ್ಪಿನ ಹರಳಿನ ಗಾತ್ರದಷ್ಟು ಚಿಕ್ಕದಾದ ಸೂಕ್ಷ್ಮಕ್ಯಾಮೆರಾ ಆವಿಷ್ಕಾರ..!..ಈ ತಂತ್ರಜ್ಞಾನದ ಬಗ್ಗೆ ನೋಡಿ

ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕರು ಒಂದು ಉಪ್ಪಿನ ಹರಳಿನ ಗಾತ್ರದ ಅಲ್ಟ್ರಾಕಾಂಪ್ಯಾಕ್ಟ್ ಕ್ಯಾಮೆರಾವನ್ನು ಆವಿಷ್ಕಾರ ಮಾಡಿದ್ದಾರೆ. ಈ ಸಣ್ಣ ಗಾತ್ರದ ಕ್ಯಾಮೆರಾಗಳು ಮಾನವನ ದೇಹದೊಳಗೆ ರೋಗಗಳ ಕುರಿತು ಅನ್ವೇಷಿಸಲು ಉತ್ತಮ ಸಾಮರ್ಥ್ಯ ಹೊಂದಿವೆ ಎಂದು ಹೇಳಲಾಗಿದೆ. ಈ ಅತ್ಯಂತ ಸಣ್ಣ ಕ್ಯಾಮೆರಾವು 5,00,000 ಪಟ್ಟು ದೊಡ್ಡದಾದ ಸಾಂಪ್ರದಾಯಿಕ ಸಂಯುಕ್ತ ಕ್ಯಾಮೆರಾ ಲೆನ್ಸ್‌ಗೆ ಸಮನಾಗಿ … Continued

ಅಕ್ಟೋಬರ್‌ನಲ್ಲಿ 20 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಪ್‌!

ನವದೆಹಲಿ: ಫೇಸ್‌ಬುಕ್-ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್‌ ಅಕ್ಟೋಬರಿನಲ್ಲಿ ಭಾರತದಲ್ಲಿ 20 ಲಕ್ಷ ಖಾತೆಗಳನ್ನು ನಿಷೇಧಿಸಿದೆ. ಸೆಪ್ಟೆಂಬರ್‌ನಲ್ಲಿ 2.2 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯ ಖಾತೆಗಳನ್ನು ನಿಷೇಧಿಸಿತ್ತು. ವಾಟ್ಸಪ್ ಪ್ಲಾಟ್‌ಫಾರ್ಮ್‌ನಲ್ಲಿನ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿವೆ. ಆದರೆ ಇದು ಬಳಕೆದಾರರ ವರದಿಗಳು, ಪ್ರೊಫೈಲ್ ಫೋಟೋಗಳು, ಗುಂಪು ಫೋಟೋಗಳು ಸೇರಿದಂತೆ ಲಭ್ಯವಿರುವ ಎನ್‌ಕ್ರಿಪ್ಟ್ ಮಾಡದ ಮಾಹಿತಿಯನ್ನು ಅವಲಂಬಿಸಿ ಕ್ರಮ … Continued

ಭಾರತದಲ್ಲಿ 9,765 ಹೊಸ ಕೋವಿಡ್-19 ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 9,765 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 477 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹಂಚಿಕೊಂಡ ಅಂಕಿಅಂಶಗಳು ತಿಳಿಸಿವೆ. ಇದು ದೇಶದ ಒಟ್ಟು ಪ್ರಕರಣವನ್ನು 3,45,63,749 ಕ್ಕೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 8,548 ರೋಗಿಗಳು ಚೇತರಿಸಿಕೊಂಡಿದ್ದು, ದೇಶಾದ್ಯಂತ ಒಟ್ಟು ಚೇತರಿಸಿಕೊಂಡವರ ಸಂಖ್ಯೆ … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ 4ರ‌ ವರೆಗೂ ಮಳೆ ಮುನ್ಸೂಚನೆ

ಬೆಂಗಳೂರು: ಕರ್ನಾಟಕದಲ್ಲಿ ಸುರಿಯುತ್ತಿರುವ ಮಳೆ ಇನ್ನೂ ಮೂರು ದಿನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ರಾಜ್ಯಾದ್ಯಂತ ಮತ್ತೆ ಮಳೆಯಾಗುತ್ತಿದೆ. ಇದು ಡಿ. 4ರ ವರೆಗೂ ಮುಂದುವರಿಯಲಿದ್ದು, ಕರಾವಳಿ, ಮಲೆನಾಡಿನಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ಮಹಾರಾಷ್ಟ್ರ … Continued

ಹೊರಬಿದ್ದ ಬಿಜೆಪಿ ಶಾಸಕ ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ್ದ ವಿಡಿಯೊ: ಪೊಲೀಸ್‌ ತನಿಖೆ ಆರಂಭ

ಬೆಂಗಳೂರು: ಯಲಹಂಕದ ಬಿಜೆಪಿ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಅವರನ್ನು ಮುಗಿಸುವ ಕುರಿತು ವ್ಯಕ್ತಿ ಹಾಗೂ ಕಾಂಗ್ರೆಸ್‌ ಮುಖಂಡರೊಬ್ಬರ ನಡುವಿನ ಸಂಭಾಷಣೆಯ ವಿಡಿಯೋ ಹೊರಬಿದ್ದಿದ್ದು, ಹೀಗಾಗಿ ಶಾಸಕರ ಭದ್ರತೆ ಹೆಚ್ಚಿಸಲಾಗಿದೆ ಹಾಗೂ ತನಿಖೆ ನಡೆಯುತ್ತಿದೆ. ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ವಿಶ್ವನಾಥ್ ವಿರುದ್ಧ ಎರಡು ಬಾರಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಹಾಗೂ ಅವರ ಆಪ್ತ ಕುಳ್ಳ ದೇವರಾಜ್ … Continued

ಓಮಿಕ್ರಾನ್ ಆತಂಕ ಅಂತಾರಾಷ್ಟ್ರೀಯ ವಿಮಾನ ಹಾರಾಟ ಮುಂದೂಡಿದ ಡಿಜಿಸಿಎ

ನವದೆಹಲಿ: ರೂಪಾಂತರಿ ಓಮಿಕ್ರಾನ್’ ತಳಿ ಜಗತ್ತಿನಾದ್ಯಂತ ಸಾಕಷ್ಟು ಆತಂಕ ಸೃ‌‌ಷ್ಟಿಸಿದ್ದು, ಈ ಹಿನ್ನೆಲೆಯಲ್ಲಿ ಡಿಸೆಂಬರ್ 15 ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳ ಪುನಾರಂಭವನ್ನು ಮುಂದೂಡಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಿರ್ಧರಿಸಿದೆ. ಹೊಸ ರೂಪಾಂತರಿ ವೇಗವಾಗಿ ವಿಕಸನಗೊಳ್ಳುತ್ತಿರುವ ಜಾಗತಿಕ ಸನ್ನಿವೇಶದ ದೃಷ್ಟಿಯಿಂದ, ಎಲ್ಲಾ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ . ನಿಗದಿತ ವಾಣಿಜ್ಯ ಅಂತಾರಾಷ್ಟ್ರೀಯ … Continued

ಮಳೆ, ಭೂ ಕುಸಿತ:ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗುವ ಘಾಟ್ ರಸ್ತೆ ಬಂದ್‌

ತಿರುಪತಿ: ಮೂರು ಸ್ಥಳಗಳಲ್ಲಿ ಭೂಕುಸಿತದಿಂದ ರಸ್ತೆ ಹಾನಿಗೊಳಗಾದ ಹಿನ್ನೆಲೆಯಲ್ಲಿ ತಿರುಮಲ ಬೆಟ್ಟಗಳ ಮೇಲಿನ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗುವ ಘಾಟ್ ರಸ್ತೆ ಬುಧವಾರ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ತಡರಾತ್ರಿ ಬೃಹತ್ ಬಂಡೆಗಳು ರಸ್ತೆಗೆ ಉರುಳಿದ್ದು, ಪ್ರಮುಖ ಸಂಪರ್ಕಕ್ಕೆ ಹಾನಿಯಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಭಾರೀ ಮಳೆ ಮತ್ತು ರಭಸದ ಗಾಳಿಯಿಂದಾಗಿ ಘಾಟ್ … Continued

ಕರ್ನಾಟಕ ಸರ್ಕಾರದ 2022ನೇ ಸಾಲಿನ ರಜಾ ದಿನಗಳ ಪಟ್ಟಿ ಬಿಡುಗಡೆ: ಇಲ್ಲಿ ನೋಡಿ

ಬೆಂಗಳೂರು: ಕರ್ನಾಟಕ ಸರ್ಕಾರವು ನವೆಂಬರ್ 30ನೇ ತಾರೀಕಿನಂದು 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಲ್ಲ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಂದು ಸರ್ಕಾರಿ ಸಿಬ್ಬಂದಿಗೆ ರಜಾ ಇರುತ್ತದೆ. ರಜಾದಿನಗಳ ಪಟ್ಟಿಯಲ್ಲಿ ಮೇ ದಿನ (ಮೇ 1, 2022), ಬಕ್ರೀದ್ (ಜುಲೈ 10, 2022), ಮಹಾಲಯ ಅಮವಾಸ್ಯೆ (ಸೆಪ್ಟೆಂಬರ್ 25, … Continued

ಮೂರು ಕೃಷಿ ಕಾಯ್ದೆಗಳ ರದ್ದು ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

ನವದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದು ಪ್ರಕ್ರಿಯೆ ಇಂದು ಬುಧವಾರ ಅಧಿಕೃತವಾಗಿದೆ. ಇದಕ್ಕೆ ಸಂಬಂಧಿಸಿದ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ರೈತರ ಪ್ರತಿಭಟನೆಗೆ ಮಣಿದು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಮೋದಿ ಘೋಷಿಸಿದನಂತರ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲನೇ ದಿನವೇ ಕಾಯ್ದೆಗಳನ್ನು ಹಿಂಪಡೆಯುವ ಮಸೂದೆ ರದ್ದು ಮಾಡುವ ಮಸೂದೆ ಮಂಡಿದಸಿದ ನಂತರ ಅದು ಅಂಗೀಕಾರವಾಯಿತು. … Continued