ಪುಲ್ವಾಮಾದಲ್ಲಿ ಎನ್​ಕೌಂಟರ್; ಜೈಷ್​ ಎ ಮೊಹಮ್ಮದ್​ ಉನ್ನತ ಕಮಾಂಡರ್ ಸೇರಿ ಇಬ್ಬರು ಉಗ್ರರು ಹತ

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು, ಬುಧವಾರ ಮುಂಜಾನೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್​ಕೌಂಟರ್​ನಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ. ಕಸ್ಬಾಯರ್ ರಾಜಪೋರಾ ಎಂಬ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ, ಜೈಷ್​ ಎ ಮೊಹಮ್ಮದ್ ಸಂಘಟನೆಯ ಉನ್ನತ ಕಮಾಂಡರ್​ ಸೇರಿದಂತೆ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಈ ಬಗ್ಗೆ ಕಾಶ್ಮೀರ ಐಜಿಪಿ ವಿಜಯ್​ ಕುಮಾರ್​ … Continued

ಹುಬ್ಬಳ್ಳಿ ಹೊಟೇಲ್‌‌ನಲ್ಲಿ ನಡೆದ ಸಭೆಯಲ್ಲಿ ನಾಯಕರ ಮುಂದೆಯೇ ಬಿಜೆಪಿ ಶಾಸಕರ ಜಗಳ..!

ಹುಬ್ಬಳ್ಳಿ: ಇಲ್ಲಿನ ಹೋಟೆಲ್ ವೊಂದರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿ ನಡೆದ ಬಿಜೆಪಿ ಸಭೆಯಲ್ಲಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲೇ ಹಾವೇರಿ ಜಿಲ್ಲೆಯ ಶಾಸಕರಿಬ್ಬರು ಪರಸ್ಪರ ಮುನಿಸಿಕೊಂಡ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳನ್ನೊಳಗೊಂಡ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯಲಿರುವ ಹಿನ್ನೆಲೆಯಲ್ಲಿ … Continued

ಮಣಿಪಾಲ: ಗಾಯಗೊಂಡ ಗೋರಕ್ಷಕರ ಆರೋಗ್ಯ ವಿಚಾರಿಸಿದ ಗೃಹ ಸಚಿವರು

ಉಡುಪಿ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕೂಳೂರಿನಲ್ಲಿ ಗೋರಕ್ಷಕರ ಮೇಲೆ ವಾಹನ ಹತ್ತಿಸಿದ್ದರಿಂದ ಗಾಯಗೊಂಡ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಗಾಯಾಳುಗಳ ಆರೋಗ್ಯವನ್ನು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ವಿಚಾರಿಸಿದ್ದಾರೆ. ಕೆಎಂಸಿ ಆಸ್ಪತ್ರೆಯ ವೈದ್ಯರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಗೃಹ ಸಚಿವರ ತವರು ಕ್ಷೇತ್ರದಲ್ಲಿ ಅಕ್ರಮ ಗೋಸಾಗಣೆ ಪತ್ತೆ … Continued

ಕೃಷಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಬಗ್ಗೆ ದಾಖಲೆಗಳಿಲ್ಲ, ಹೀಗಾಗಿ ಪರಿಹಾರದ ಪ್ರಶ್ನೆಯೇ ಇಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ರೈತರು ಮೃತಪಟ್ಟಿರುವ ಬಗ್ಗೆ ಸರ್ಕಾರದ ಬಳಿ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಸಂಸತ್‌ನಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಸಂಸತ್‌ ಅಧಿವೇಶನದಲ್ಲಿ ರೈತರ ಪ್ರತಿಭಟನೆ ಕುರಿತು ಪ್ರತಿಪಕ್ಷಗಳು ಧ್ವನಿ ಎತ್ತಿದವು. ಪ್ರತಿಭಟನೆ ವೇಳೆ … Continued

ಜೆಸಿಬಿಯಲ್ಲಿ ಕುಳಿತು ಆರತಕ್ಷತೆಗೆ ಬಂದ ನವ ಜೋಡಿ; ಅಯ್ಯೋ ದೇವ್ರೆ.. ಮುಂದೇನಾಯ್ತು ನೋಡಿ..!

ಜೆಸಿಬಿಯಲ್ಲಿ ಕುಳಿತು ಆರತಕ್ಷತೆಗೆ ಬಂದ ನವ ಜೋಡಿ; ಅಯ್ಯೋ ದೇವ್ರೆ.. ಮುಂದೇನಾಯ್ತು ನೋಡಿ..! ಕೆಲವರು ತಾವು ಏನೇ ಮಾಡಿದರೂ ಹೊಸತನ್ನು ಮಾಡಬೇಕು, ಅದನ್ನು ಜನ ಗಮನಿಸಬೇಕು ಎಂದು ಬಯುಸುತ್ತಾರೆ. ಮದುವೆಗಳಲ್ಲಿಯೂ ಈ ಟ್ರೆಂಡ್‌ ಶುರುವಾಗಿದೆ. ಇಲ್ಲಿಯೂ ಮದುವೆಯೊಂದರಲ್ಲಿ ಮದುಮಕ್ಕಳು ಎಲ್ಲರನ್ನ ಗಮನ ಸೆಳೆಯಬೇಕೆಂದು ಹೊಸರೀತಿಯಲ್ಲಿ ಆರತಕ್ಷತೆ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡು ದೊಪ್ಪನೆ ಕೆಳಕ್ಕೆ ಬಿದ್ದಿದ್ದಾರೆ..! … Continued

ಭಾರತದಲ್ಲಿ 8,954 ಹೊಸ ಕೋವಿಡ್-19 ಪ್ರಕರಣಗಳು ದಾಖಲು, ಇದು ನಿನ್ನೆಗಿಂತ 28.1% ಹೆಚ್ಚು

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 8,954 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ 28.1% ಹೆಚ್ಚಾಗಿದೆ. ಇದು ದೇಶದ ಒಟ್ಟು ಪ್ರಕರಣವನ್ನು 3,45,96,776 ಕ್ಕೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 267 ಸಾವುಗಳು ವರದಿಯಾಗಿದ್ದು, ಒಟ್ಟು ವರದಿಯಾದ ಸಾವಿನ ಸಂಖ್ಯೆಯನ್ನು 4,69,247 ಕ್ಕೆ ಹೆಚ್ಚಿಸಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು … Continued

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್​ಗಳ ಬೆಲೆ 100 ರೂಪಾಯಿ ಏರಿಕೆ

ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಇಂದು (ಡಿಸೆಂಬರ್ 1, 2021) ಮತ್ತೆ ಹೆಚ್ಚಿಸಲಾಗಿದೆ. 19 ಕೇಜಿಯ ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನು ತಲಾ 100 ರೂಪಾಯಿ ಹೆಚ್ಚಳ ಮಾಡಲಾಗಿದೆ. ನವೆಂಬರ್ 1ರಂದು ಬೆಲೆ ಏರಿಕೆ ಮಾಡಿದ ನಂತರ ಇದು ಎರಡನೇ ಹೆಚ್ಚಳವಾಗಿದೆ. ಬೆಲೆ ಹೆಚ್ಚಳದ ನಂತರ 19 ಕೇಜಿಯ ವಾಣಿಜ್ಯ ಸಿಲಿಂಡರ್ ಈಗ ದೆಹಲಿಯಲ್ಲಿ … Continued

ಓಮಿಕ್ರಾನ್ ಆತಂಕದ ಕಾರಣ ಕಠಿಣ ಕ್ರಮ ಅನಿವಾರ್ಯ; ಬೂಸ್ಟರ್ ಡೋಸ್ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಕೋವಿಡ್-19 ಮೂರನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಕುರಿತು ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗುವುದು. ಅಲ್ಲದೆ ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಆರಂಭಿಕವಾಗಿಯೇ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ … Continued

ಮಧ್ಯಪ್ರದೇಶದಲ್ಲಿ ಒಮ್ಮೆಲೇ 48 ಕಾಗೆಗಳು ಸಾವು : ಪರೀಕ್ಷೆಯಲ್ಲಿ ಹಕ್ಕಿ ಜ್ವರ ದೃಢ…!

ಭೋಪಾಲ್: ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ಕನಿಷ್ಠ 48 ಕಾಗೆಗಳು ಮೃತಪಟ್ಟಿದ್ದು, H5N8 ವೈರಸ್ (ಹಕ್ಕಿ ಜ್ವರ) ಇರುವುದು ದೃಢಪಟ್ಟಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ರಾಜ್ಯ ರಾಜಧಾನಿ ಭೋಪಾಲ್‌ನಿಂದ 180 ಕಿಮೀ ದೂರದಲ್ಲಿರುವ ಅಗರ್ ಮಾಲ್ವಾದಲ್ಲಿ ಈ ಕಾಗೆಗಳು ಕಳೆದ ನಾಲ್ಕು ದಿನಗಳಲ್ಲಿ ಮೃತಪಟ್ಟಿವೆ. ನಾವು ಸತ್ತ ಕಾಗೆಗಳ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ … Continued

ಮಲ್ಯ ನ್ಯಾಯಾಂಗ ನಿಂದನೆ: ಜನವರಿ 18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ನವದೆಹಲಿ: ಬ್ಯಾಂಕ್‌ಗಳಿಗೆ ವಂಚಿಸಿ ಬ್ರಿಟನ್ನಿನಲ್ಲಿರುವ ಉದ್ಯಮಿ ವಿಜಯ ಮಲ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಮುಂದುವರಿಸಲು ಸುಪ್ರೀಂಕೋರ್ಟ್‌ ನಿರ್ಧರಿಸಿದೆ.ಜನವರಿ 18ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ನ್ಯಾಯಪೀಠ ಮಂಗಳವಾರ ಪ್ರಕಟಿಸಿದೆ. ಅವರು ಬ್ರಿಟನ್ನಿನಿಂದ ಗಡಿಪಾರು ಆಗುವವರೆಗೆ ಕಾಯಲು ಅಸಾಧ್ಯ ಎಂದೂ ಪೀಠ ಹೇಳಿದೆ. 40 ಮಿಲಿಯ ಅಮೆರಿಕನ್‌ ಡಾಲರ್‌ ಮೊತ್ತವನ್ನು ಕೋರ್ಟ್‌ ಆದೇಶದ ಹೊರತಾಗಿಯೂ ಮಕ್ಕಳ … Continued