ಸೂಡಾನ್​​ನಲ್ಲಿ ಚಿನ್ನದ ಗಣಿ ಕುಸಿತ; 38 ಮಂದಿ ಸಾವು

ದಕ್ಷಿಣ ಸುಡಾನ್‌ನ ಪಶ್ಚಿಮ ಕೊರ್ಡೋಫಾನ್ ರಾಜ್ಯದಲ್ಲಿ ಚಿನ್ನದ ಗಣಿ ಕುಸಿದು ಕನಿಷ್ಠ 38 ಜನರು ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಕಂಪನಿಯೊಂದು ಹೇಳಿಕೆಯಲ್ಲಿ ಪ್ರಕಟಿಸಿದೆ. ಉಮ್ ಡ್ರೈಸಾಯಾ ಗಣಿ ಕುಸಿತದ ಪರಿಣಾಮವಾಗಿ ಮೃತಪಟ್ಟ 38 ಗಣಿಗಾರರ ಸಾವಿಗೆ ಸೂಡಾನೀಸ್ ಮಿನರಲ್ ರಿಸೋರ್ಸಸ್ ಕಂಪನಿ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಶೋಕ ವ್ಯಕ್ತಪಡಿಸಿದ್ದಾರೆ” ಎಂದು ಮಂಗಳವಾರ ಹೇಳಿಕೆ ತಿಳಿಸಿದೆ. ಕುಸಿದ … Continued

ಬಹುಮುಖ ವ್ಯಕ್ತಿತ್ವದ ದಾರಾ ಶಿಕೋಗೆ ಜಾತ್ಯತೀತತೆ ಚಾಂಪಿಯನ್ ಎಂದು ಕರೆಸಿಕೊಳ್ಳುವ ಸರ್ಕಾರಗಳು ‘ಉದ್ದೇಶಪೂರ್ವಕವಾಗಿ’ ಪ್ರಾಮುಖ್ಯತೆ ನೀಡಿಲ್ಲ: ನಖ್ವಿ

ನವದೆಹಲಿ: ಪೂರ್ವಗ್ರಹ ಪೀಡಿತ ರಾಜಕೀಯವು ದಾರಾ ಶಿಕೋ ಅವರ ಪರಂಪರೆಯ ಮೇಲೆ ತಪ್ಪು ಕಲ್ಪನೆಯನ್ನು ಸೃಷ್ಟಿಸಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ಹೇಳಿದ್ದಾರೆ. ಜಾತ್ಯತೀತತೆಯ ಚಾಂಪಿಯನ್ ಎಂದು ಕರೆಸಿಕೊಳ್ಳುವ ಸರ್ಕಾರಗಳು ಉದ್ದೇಶಪೂರ್ವಕವಾಗಿ ಇತರ ಅನೇಕ ಮಹಾನ್ ವ್ಯಕ್ತಿಗಳಂತೆ ದಾರಾ ಶಿಕೋ ಮಾಡಿದ ಕೆಲಸಗಳಿಗೆ ಸರಿಯಾದ ಮಹತ್ವ, ಮನ್ನಣೆ ನೀಡಲಿಲ್ಲ ಎಂದು ಅವರು … Continued

ಕಾರವಾರ: ಶಾಲೆಗೆ ಹೋಗುತ್ತಿದ್ದ ಮಕ್ಕಳ ಮೇಲೆ ಜೇನು ದಾಳಿ: 16 ಮಂದಿ ಆಸ್ಪತ್ರೆಗೆ ದಾಖಲು

ಕಾರವಾರ: ಶಾಲೆಗೆ ಹೋಗುತ್ತಿದ್ದ 20ಕ್ಕೂ ಹೆಚ್ಚು ಮಕ್ಕಳಿಗೆ ಜೇನು ನೊಣ ದಾಳಿ ಮಾಡಿ ಕಡಿದ ಘಟನೆ ಕಾರವಾರ ತಾಲೂಕಿನ ಕಿನ್ನರ ಗ್ರಾಮದ ನ್ಯೂ ಹೈಸ್ಕೂಲಿನಲ್ಲಿ ಮಂಗಳವಾರ ನಡೆದ ಬಗ್ಗೆ ವರದಿಯಾಗಿದೆ. ಜೇನು ಕಡಿತದಿಂದ 16 ಮಕ್ಕಳು ಅಸ್ವಸ್ಥರಾಗಿದ್ದು, ಕೆಲ ಮಕ್ಕಳ ಬೆನ್ನು, ಕುತ್ತಿಗೆ, ಮುಖ, ತಲೆಗೆ ಗಾಯಗಳಾಗಿವೆ. ಗಾಯಗೊಂಡಿರುವ ಮಕ್ಕಳನ್ನು ಊರವರ ಸಹಾಯದಿಂದ ಕಾರವಾರ ಜಿಲ್ಲಾಸ್ಪತ್ರೆಗೆ … Continued

ಕಾಂಗ್ರೆಸ್​ ಶಾಸಕರಿಗೆ ಪೊಲೀಸರ ಪ್ಯಾಂಟ್ ಒದ್ದೆ ಮಾಡುವ ಸಾಮರ್ಥ್ಯವಿದೆ ಎಂದ ಸಿಧು ವಿರುದ್ಧ ಮಾನನಷ್ಟ ನೋಟಿಸ್

ಚಂಡೀಗಢ: ಕಾಂಗ್ರೆಸ್ ಪಕ್ಷದ ಇಬ್ಬರು ಸದಸ್ಯರು ಪೊಲೀಸರ ಪ್ಯಾಂಟ್ ಒದ್ದೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳುವ ಮೂಲಕ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿವಾದಕ್ಕೀಡಾಗಿದ್ದಾರೆ. ತಮ್ಮ ಪಕ್ಷದ ಸದಸ್ಯರನ್ನು ಹೊಗಳುವ ನವಜೋತ್ ಸಿಂಗ್ ಸಿಧು ಅವರ ಭಾಷಣದ ವಿಡಿಯೋ ವೈರಲ್ ಆಗಿ ಈಗ ನವಜೋತ್ ಸಿಂಗ್ ಸಿಧು ವಿರುದ್ಧ ಮಾನನಷ್ಟ ನೋಟಿಸ್‌ … Continued

ಮಾನವರು ಅನ್ಯಲೋಕದ ಸಂಪರ್ಕಕ್ಕೆ ಸಿದ್ಧರಿದ್ದಾರೆಯೇ? ಅದನ್ನು ಕಂಡುಹಿಡಿಯಲು ಧರ್ಮಶಾಸ್ತ್ರಜ್ಞರ ನೇಮಿಸಿಕೊಂಡ ನಾಸಾ..!

ಕ್ರಿಸ್‌ಮಸ್‌ನಲ್ಲಿ, ವಿಶ್ವದ ಅತ್ಯಂತ ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕವು ಕಕ್ಷೆಗೆ ಸ್ಫೋಟಿಸಿತು, ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದ ಹಾರಿಜಾನ್‌ಗೆ ಹೊರಟಿತು. ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಶೀಘ್ರದಲ್ಲೇ ಬ್ರಹ್ಮಾಂಡದ ರಹಸ್ಯಗಳನ್ನು ಪರಿಶೀಲಿಸಲು ಪ್ರಾರಂಭಿಸುತ್ತದೆ. ಗ್ರಹಗಳಿಂದ, ನಕ್ಷತ್ರಗಳಿಂದ, ನೀಹಾರಿಕೆಗಳಿಂದ, ಗೆಲಕ್ಸಿಗಳು ಮತ್ತು ಅದಕ್ಕೂ ಮೀರಿದ ಎಲ್ಲಾ ಬ್ರಹ್ಮಾಂಡವನ್ನು ವೀಕ್ಷಿಸುತ್ತದೆ. ಮತ್ತು ಸಾಕಷ್ಟು ಸ್ವಾಭಾವಿಕವಾಗಿ, ಅನ್ಯಲೋಕದ ಜೀವಿಗಳ … Continued

ಕೋವಿಡ್‌ ಹೆಚ್ಚಳದ ಭೀತಿ: ನಾಳೆಯಿಂದಲೇ ರಾಜ್ಯಾದ್ಯಂತ ಮನೆಮನೆ ಆರೋಗ್ಯ ಸಮೀಕ್ಷೆಗೆ ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಓಮಿಕ್ರಾನ್​ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮನೆಮನೆ ಆರೋಗ್ಯ ಸಮೀಕ್ಷೆ ನಡೆಸಲು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಮನೆಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ಮಾಡುವಂತೆ ಆದೇಶ ನೀಡಲಾಗಿದೆ. ತೀವ್ರ ಉಸಿರಾಟ ಸಮಸ್ಯೆ ಇರುವ ಕೇಸ್​ಗಳ ಸರ್ವೆಗೆ ಆದೇಶ ನೀಡಿದೆ. ಆರೋಗ್ಯ ಸರ್ವೆ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ. ಮನೆ ಮನೆಗೆ ತೆರಳಿ … Continued

ದೇಶದಲ್ಲಿ 1,49,297 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ

ನವದೆಹಲಿ: ದೇಶದಲ್ಲಿ ಈ ವರ್ಷ ಏಪ್ರಿಲ್ 1ರಿಂದ ಈವರೆಗೆ ( December 27)  1,49,297 ಕೋಟಿ ರೂ.ಗಳಿಗೂ ಅಧಿಕ ಆದಾಯ ತೆರಿಗೆ ಮರುಪಾವತಿ ಮಾಡಲಾಗಿದೆ. 1.45 ಕೋಟಿ ತೆರಿಗೆ ಪಾವತಿದಾರರಿಗೆ ಸರಿ ಸುಮಾರು 1.50 ಲಕ್ಷ ಕೋಟಿ ರೂಪಾಯಿ ಮರುಪಾವತಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ … Continued

ತಾಯಿ ಗರ್ಭದಲ್ಲೇ ಕಲ್ಲಾದ ಏಳು ತಿಂಗಳ ಭ್ರೂಣ.. 35 ವರ್ಷಗಳಿಂದ 73 ವರ್ಷದ ವೃದ್ಧೆಯ ಹೊಟ್ಟೆಯಲ್ಲಿತ್ತು ಈ ಕಲ್ಲು ಮಗು…! ಬೆರಗಾದ ವೈದ್ಯರು..

ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ವೃದ್ಧೆಯ ಹೊಟ್ಟೆಯಲ್ಲಿ ಕಲ್ಲಿನ ಮಗು (stone baby) ಪತ್ತೆಯಾಗಿದೆ ಹಾಗೂ ಮಹಿಳೆ ಕ್ಯಾಲ್ಸಿಫೈಡ್ ಭ್ರೂಣವನ್ನು ಸುಮಾರು 35 ವರ್ಷಗಳ ಕಾಲ ಉದರದಲ್ಲಿ ಹೊತ್ತಿದ್ದಾಳೆ..! ಸ್ಕ್ಯಾನ್‌ ಮಾಡಿದ ನಂತರ ಆಶ್ಚರ್ಯಕರ ಫೋಟೋಗಳು ವಯಸ್ಸಾದ ಮಹಿಳೆಯ ಗರ್ಭದಲ್ಲಿ ‘ಕಲ್ಲಿನ ಮಗ’ವನ್ನು ವೈದ್ಯರು ಪತ್ತೆ ಮಾಡಿದ ಕ್ಷಣವನ್ನು ತೋರಿಸುತ್ತವೆ.ಕ್ಯಾಲ್ಸಿಫೈಡ್ ಭ್ರೂಣವು ಮಹಿಳೆಗೆ ಈ ಬಗ್ಗೆ … Continued

ಮದ್ಯ ಖರೀದಿಸಲು ಹಣ ನೀಡದ್ದಕ್ಕೆ ಗೆಳತಿಯ ಮೂಗನ್ನೇ ಕತ್ತರಿಸಿದ ಭೂಪ..!

ಖಾಂಡ್ವಾ (ಮಧ್ಯಪ್ರದೇಶ): ಮದ್ಯ ಖರೀದಿಸಲು ತನ್ನ ಸಂಗಾತಿ ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಖಾಂಡ್ವಾದಲ್ಲಿ 40 ವರ್ಷದ ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಪಾರ್ಟ್ನರಿನ ಮೂಗನ್ನು ಹರಿತವಾದ ಆಯುಧದಿಂದ ಕತ್ತರಿಸಿದ್ದು, ಆತನನ್ನು ನಂತರ ಬಂಧಿಸಲಾಗಿದೆ. ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ಲವಕುಶ ಪಟೇಲ್ ಎಂದು ಗುರುತಿಸಲಾಗಿದೆ. ಮದ್ಯ ಖರೀದಿಸಲು ತನ್ನ … Continued

ಲಿಂಗದೇವ ಅಂಕಿತ ಹಿಂತೆಗೆತಕ್ಕೆ ಬಸವಧರ್ಮಪೀಠದ ಅಧ್ಯಕ್ಷರ ಸೂಚನೆ : ತೋಂಟದ ಶ್ರೀ ಹರ್ಷ

ಬೆಳಗಾವಿ: ವಿಶ್ವಗುರು ಬಸವಣ್ಣನವರ ವಚನಾಂಕಿತ ಕೂಡಲ ಸಂಗಮದೇವ ಎಂಬುದನ್ನು ಬಸವಧರ್ಮ ಪೀಠಾಧ್ಯಕ್ಷರಾಗಿದ್ದ ಪೂಜ್ಯಶ್ರೀ ಮಾತೆ ಮಹಾದೇವಿಯವರು ‘ಲಿಂಗದೇವ’ ಎಂದು ಬದಲಿಸಿರುವುದಕ್ಕೆ ಲಿಂಗಾಯತ ಸಮಾಜದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಈಗಿನ ಬಸವಧರ್ಮಪೀಠದ ಅಧ್ಯಕ್ಷರಾದ ಪೂಜ್ಯಶ್ರೀ ಡಾ. ಗಂಗಾಮಾತಾಜಿಯವರು ‘ಲಿಂಗದೇವ’ ಬದಲಿಗೆ ಕೂಡಲಸಂಗಮದೇವ ಎಂದೇ ಬಳಸಬೇಕೆಂದು ಸಂದೇಶ ನೀಡಿದ್ದಾರೆ. ಇದರಿಂದ ಸಮಸ್ತ ಲಿಂಗಾಯತರಿಗೆ ಸಂತಸ ಉಂಟಾಗಿದೆ ಎಂದು … Continued