ಭಾರತದಲ್ಲಿ 33,750 ಹೊಸ ಕೋವಿಡ್‌-19 ಪ್ರಕರಣಗಳು ದಾಖಲು,ಇದು ನಿನ್ನೆಗಿಂತ 22.5% ಹೆಚ್ಚು..!

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 33,750 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಇದು ನಿನ್ನೆಗಿಂತ 22.5% ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಸೋಮವಾರ ವರದಿ ಮಾಡಿದೆ. 33,750 ಹೊಸ ಸೋಂಕುಗಳ ಏಕದಿನ ಏರಿಕೆಯು ಭಾರತದ ಪ್ರಕರಣಗಳ ಸಂಖ್ಯೆಯನ್ನು 3,49,22,882 ಕ್ಕೆ ತಳ್ಳಿದೆ. ಭಾರತದ ಕೋವಿಡ್ ಸಕ್ರಿಯ ಪ್ರಕರಣಗಳ … Continued

ಅಪಘಾತ ಪ್ರಕರಣ: 22 ಜನರ ಸಾವಿಗೆ ಕಾರಣನಾದ ಬಸ್‌ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ ವಿಧಿಸಿದ ಮಧ್ಯಪ್ರದೇಶದ ಕೋರ್ಟ್‌..!

ಭೋಪಾಲ್‌: ಅತಿ ವೇಗದ ಬಸ್‌ ಚಾಲನೆಯ ಕಾರಣದಿಂದ 22 ಜನರ ಸಾವಿಗೆ ಕಾರಣವಾಗಿದ್ದ ಚಾಲಕ ಶಂಸುದ್ದೀನ್‌ ಎಂಬಾತನಿಗೆ ಮಧ್ಯಪ್ರದೇಶದ ಸ್ಥಳೀಯ ವಿಶೇಷ ನ್ಯಾಯಾಲಯವೊಂದು, 190 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 19 ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 10 ವರ್ಷದಂತೆ ಒಟ್ಟು 190 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಅಲ್ಲದೆ, ಎಲ್ಲ ಶಿಕ್ಷೆಗಳನ್ನೂ ಪ್ರತ್ಯೇಕವಾಗಿ ಅನುಭವಿಸಬೇಕು … Continued

ಎಲೋನ್ ಮಸ್ಕ್‌ನ ಟೆಸ್ಲಾದ ಆಟೋಪೈಲಟ್ ತಂಡಕ್ಕೆ ನೇಮಕಗೊಂಡ ಮೊದಲ ಉದ್ಯೋಗಿ ಭಾರತೀಯ ಮೂಲದ ಅಶೋಕ್ ಎಲ್ಲುಸ್ವಾಮಿ

ಎಲೋನ್ ಮಸ್ಕ್‌ನ ಟೆಸ್ಲಾದ ಆಟೋಪೈಲಟ್ ತಂಡಕ್ಕೆ ನೇಮಕಗೊಂಡ ಮೊದಲ ಉದ್ಯೋಗಿ ಭಾರತೀಯ ಮೂಲದ ಅಶೋಕ್ ಎಲ್ಲುಸ್ವಾಮಿ ಹೂಸ್ಟನ್: ಜನರನ್ನು ನೇಮಿಸಿಕೊಳ್ಳಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವ ಟೆಸ್ಲಾ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್, ಭಾರತೀಯ ಮೂಲದ ಅಶೋಕ್ ಎಲ್ಲುಸ್ವಾಮಿ ತಮ್ಮ ಎಲೆಕ್ಟ್ರಿಕ್ ವಾಹನ ಕಂಪನಿಯ ಆಟೋಪೈಲಟ್ ತಂಡಕ್ಕೆ ನೇಮಕಗೊಂಡ ಮೊದಲ ಉದ್ಯೋಗಿ ಎಂಬುದನ್ನು ಬಹಿರಂಗಪಡಿಸಿದ್ದಾರೆ. “ಟೆಸ್ಲಾ … Continued

ದೆಹಲಿಯಲ್ಲಿ ಹೊಸದಾಗಿ 3,000ಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ದಾಖಲು, ಧನಾತ್ಮಕ ದರ 4.59%ಕ್ಕೆ ಏರಿಕೆ

ನವದೆಹಲಿ: ದೆಹಲಿ ಆರೋಗ್ಯ ಬುಲೆಟಿನ್ ಪ್ರಕಾರ, ಭಾರೀ ಉಲ್ಬಣದಲ್ಲಿ, ದಿಲ್ಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 3,000 ಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಭಾನುವಾರ ದಾಖಲಾಗಿವೆ. ಇದು ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪಾಸಿಟಿವಿಟಿ ದರವನ್ನು ಶೇಕಡಾ 4.59ಕ್ಕೆ ಒಯ್ದಿದೆ. ದೆಹಲಿಯಲ್ಲಿ 3,194 ತಾಜಾ ಸೋಂಕುಗಳು ವರದಿಯಾಗಿವೆ, ಇದು ಮೇ 20ರಿಂದ ಅತಿ ಹೆಚ್ಚು ಏಕದಿನ ಏರಿಕೆಯಾಗಿದೆ. … Continued

ಇಂದಿನಿಂದ ಕರ್ನಾಟಕದಲ್ಲಿ 15ರಿಂದ 18ವರ್ಷ ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭ, 31.75 ಲಕ್ಷ ಮಕ್ಕಳು ಲಸಿಕೆ ಪಡೆಯಲು ಅರ್ಹರು

posted in: ರಾಜ್ಯ | 0

ಬೆಂಗಳೂರು: ಕರ್ನಾಟಕದಲ್ಲಿ 15ರಿಂದ 18 ವರ್ಷ ವಯೋಮಿತಿಯ ಸುಮಾರು 31.75 ಲಕ್ಷ ಮಕ್ಕಳಿದ್ದಾರೆ. ಇವರೆಲ್ಲ ಕೊರೊನಾ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ಮೂಡಲಪಾಳ್ಯದ ಬಿಬಿಎಂಪಿ ಶಾಲೆಯಲ್ಲಿ 15ರಿಂದ 18 ವರ್ಷ ವಯೋಮಿತಿಯ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಈ ವಯಸ್ಸಿನವರಿಗೆ ಕೋವ್ಯಾಕ್ಸಿನ್‌ ಲಸಿಕೆ ಮಾತ್ರ ಲಭ್ಯವಿದೆ ಎಂದು ಸರ್ಕಾರ ತಿಳಿಸಿದ್ದು, ಮೊದಲ … Continued