ಪ್ರಧಾನಿ ಮೋದಿ ಬೆಂಗಾವಲು ತಡೆದ ‘ಪ್ರತಿಭಟನೆಕಾರರೊಂದಿಗೆ’ ಪಂಜಾಬ್ ಪೊಲೀಸರ ಚಹಾಸೇವನೆ: ಹೊರಹೊಮ್ಮಿದ ವಿಡಿಯೋ..!!

ಫಿರೋಜ್‌ಪುರದಲ್ಲಿ ಪ್ರಧಾನಿ ಮೋದಿಯವರ ಬೆಂಗಾವಲು ವಾಹನವನ್ನು ತಡೆಯುವಲ್ಲಿ ಪಂಜಾಬ್ ಪೊಲೀಸರು ನಿಷ್ಕ್ರಿಯರಾಗಿದ್ದರು ಹಾಗೂ ನಿರ್ಲಕ್ಷ್ಯ ವಹಿಸಿದ್ದರು ಎಂಬುದಕ್ಕೆ ಈಗ ಪಂಜಾಬ್‌ ಪೊಲೀಸರು ಪ್ರತಿಭಟನಾಕಾರರೊಂದಿಗೆ ಚಹಾ ಕುಡಿಯುತ್ತಿರುವ ವಿಡಿಯೊ ವೈರಲ್‌ ಆಗಿದೆ. ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಹುಸೇನಿವಾಲಾ ಬಳಿ 5 ಜನವರಿ 2022 ರಂದು ಸಂಭವಿಸಿದ ಪ್ರಧಾನಿ ಮೋದಿಯ ಭದ್ರತಾ ಲೋಪದ ಪ್ರಮುಖ ಅಪ್‌ಡೇಟ್‌ನಂತೆ ಈ ವೀಡಿಯೊಗಳು … Continued

ಇಟಲಿ-ಅಮೃತಸರ ಚಾರ್ಟರ್ಡ್ ವಿಮಾನದ 125 ಪ್ರಯಾಣಿಕರಿಗೆ ಕೋವಿಡ್-19 ಪಾಸಿಟಿವ್

ನವದೆಹಲಿ: ಇಟಲಿಯಿಂದ ಅಂತಾರಾಷ್ಟ್ರೀಯ ಚಾರ್ಟರ್ಡ್ ವಿಮಾನದ 125 ಪ್ರಯಾಣಿಕರು ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಬುಧವಾರ ಮಧ್ಯಾಹ್ನ 1:30ರ ಸುಮಾರಿಗೆ ಇಟಲಿಯ ಮಿಲನ್‌ನಿಂದ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಚಾರ್ಟರ್ ಫ್ಲೈಟ್ YU-661 ನಲ್ಲಿ ಒಟ್ಟು 170 ಪ್ರಯಾಣಿಕರಿದ್ದರು. ಇದನ್ನು … Continued

ಐದಾರು ಜನರ ಮೇಲೆ ದಾಳಿ ಮಾಡಿ ಅಪಹರಣದಿಂದ ತನ್ನ ಯಜಮಾನನ್ನು ರಕ್ಷಿಸಿದ ನಾಯಿ…! ದೃಶ್ಯ ಸಿಸಿಟಿವಿಯಲ್ಲಿ ಸೆರೆ…ವೀಕ್ಷಿಸಿ

ಗ್ವಾಲಿಯರ್‌:ನಾಯಿಯು ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಹೇಳುತ್ತಾರೆ ಮತ್ತು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಾಯಿಯೊಂದು ತನ್ನ ಯಜಮಾನನ್ನು ಅಪಹರಣ ಪ್ರಯತ್ನದಿಂದ ರಕ್ಷಿಸಿ ಈ ಗಾದೆಯನ್ನು ನಿಜವೆಂದು ಸಾಬೀತುಪಡಿಸಿದೆ..!. ಗ್ವಾಲಿಯರ್‌ನ ಅಶೋಕ್ ನಗರದಲ್ಲಿ ಈ ಘಟನೆ ನಡೆದಿದ್ದು, ಕೆಲ ದುಷ್ಕರ್ಮಿಗಳು ನಿತಿನ್ ಮೇಲೆ ಹಲ್ಲೆ ನಡೆಸಿ ಅಪಹರಣಕ್ಕೆ ಯತ್ನಿಸಿದ್ದಾರೆ. ನಿತಿನ್ ಅವರ ನಾಯಿ ತಕ್ಷಣವೇ ಬೊಗಳಲು ಪ್ರಾರಂಭಿಸಿತು ಮತ್ತು … Continued

ಪಂಜಾಬ್ ಭೇಟಿ ವೇಳೆ ಪ್ರಧಾನಿ ಭದ್ರತಾ ಲೋಪ: ತನಿಖೆ ಕೋರಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ನಾಳೆ ವಿಚಾರಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರದಿಂದ ಗಂಭೀರ ಮತ್ತು ಉದ್ದೇಶಪೂರ್ವಕ ಲೋಪ ಆಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಇದು ನಾಳೆಗೆ ವಿಚಾರಣೆಗೆ ಬರಲಿದೆ. ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠವು ಪಂಜಾಬ್ ಸರ್ಕಾರದ … Continued

ತುಮಕೂರಿನಲ್ಲಿ ಬಿಜೆಪಿ ನಾಯಕರ ಅಸಮಾಧಾನ ಸ್ಫೋಟ: ಸಚಿವ ಭೈರತಿ ಕಿವಿಯಲ್ಲಿ ಸಂಸದ ಬಸವರಾಜ ಗುಸುಗುಸು ಈಗ ಜಗಜ್ಜಾಹೀರು..!

ತುಮಕೂರು:ಕೆಲವು ತಿಂಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಗ್ಗೆ ಸುದ್ದಿಗೋಷ್ಠಿ ಕರೆದ ವೇದಿಕೆಯಲ್ಲಿ ಕಾಂಗ್ರೆಸ್ ನಾಯಕರಾದ ವಿ ಎಸ್ ಉಗ್ರಪ್ಪ ಮತ್ತು ಸಲೀಂ ಆಡಿದ್ದ ಪಿಸುಮಾತು ಭಾರೀ ಸುದ್ದಿಯಾಯಿತು.ಈಗ ಅಂಥದ್ದೇ ಮತ್ತೊಂದು ಘಟನೆ ತಮಕೂರಿನಲ್ಲಿ ನಡೆದಿದೆ. ಪಾತ್ರಧಾರಿಗಳು ಬೇರೆ. ರಾಜ್ಯ ರಾಜಕಾರಣದಲ್ಲಿ ಈಗ ಆಡಳಿತಾರೂಡ ಪಕ್ಷವಾದ ಬಿಜೆಪಿಯಲ್ಲಿ ಗುಸುಗುಸು ಸ್ಫೋಟಗೊಂಡಿದ್ದು, ಪಕ್ಷದಲ್ಲಿ ಭಾರೀ … Continued

ಸಲಿಂಗ ಮದುವೆಯಾಗುತ್ತಿರುವ ಇಬ್ಬರು ಮಹಿಳಾ ವೈದ್ಯರು…

ನಾಗ್ಪುರ:  ಮಹರಾಷ್ಟ್ರದ ಇಬ್ಬರು ಮಹಿಳಾ ವೈದ್ಯರು ಸಲಿಂಗ ವಿವಾಹಕ್ಕೆ ಸಿದ್ಧತೆ ನಡೆಸಿಕೊಂಡಿದ್ದು, ಉಂಗುರ ಬದಲಾವಣೆ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಕಳೆದ ವಾರ ನಡೆದ ಸಮಾರಂಭದ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಮಹಿಳಾ ವೈದ್ಯರಾದ ಪರೋಮಿತ ಮುಖರ್ಜಿ ಮತ್ತು ಸುರಭಿ ಮಿತ್ರಾ ಅವರು ಪರಸ್ಪರ ಮದುವೆಯಾಗುವ ನಿರ್ಧಾರ ಕೈಗೊಂಡಿದ್ದಾರೆ. ನಾವು ಗೋವಾದಲ್ಲಿ ಮದುವೆಯಾಗಲು ಯೋಜಿಸುತ್ತಿದ್ದೇವೆ ಎಂದು ಇಬ್ಬರೂ … Continued

ಗಂಡ ವಾರಕ್ಕೊಮ್ಮೆ ಹೊಟೇಲ್‌ ಗೆ ಕರೆದುಕೊಂಡು ಹೋಗಿಲ್ಲವೆಂದು ಎರಡು ಮಕ್ಕಳ ಜೊತೆ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ಮಹಿಳೆ..!

ದೊಡ್ಡಬಳ್ಳಾಪುರ: ಪಟ್ಟಣದಲ್ಲಿ ಬೆಳೆದಿದ್ದ ಹೆಂಡತಿಗೆ ವಾರಕ್ಕೊಮ್ಮೆ ಹೊಟೇಲ್‌​ನಲ್ಲಿ ಊಟ ಮಾಡುವ ಆಸೆಗೆ ಹಳ್ಳಿಯವನಾದ ತನ್ನ ಗಂಡ, ತಣ್ಣೀರು ಎರೆಚಿದ ಎಂಬ ಕಾರಣಕ್ಕೆ ಜುಗುಪ್ಸೆಗೊಂಡ ಮಹಿಳೆ, ಎರಡು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಎಸ್. ಎಂ. ಗೊಲ್ಲಹಳ್ಳಿಯಲ್ಲಿ ಘಟನೆ ನಡೆದಿದ್ದು, ಹಳ್ಳಿ ಗಂಡನ ವರ್ತನೆಗೆ ಬೇಸತ್ತ ಹೆಂಡತಿ ತನ್ನ ಎರಡು ಮಕ್ಕಳ … Continued

ಪ್ರಯಾಣಿಕರ ಗಮನಕ್ಕೆ…ಕೆಎಸ್ಆರ್‌ಟಿಸಿಯಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ದೇಶಾದ್ಯಂತ ಕೊರೊನಾ ಪ್ರಕರಣಗಳು ಮತ್ತೆ ಭಾರೀ ಏರಿಕೆ ಕಾಣುತ್ತಿದ್ದು, ರಾಜ್ಯದಲ್ಲಿಯೂ ದಿಢೀರ್‌ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ದಿನವೊಂದಕ್ಕೆ ಹೊಸ ಪ್ರಕರಣಗಳು 4 ಸಾವಿರಕ್ಕೂ ಹೆಚ್ಚು ದಾಖಲಾಗುತ್ತಿದೆ. ಈಗ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಈ ಹಿನ್ನೆಲೆಯಲ್ಲಿ ಕೆ.ಎಸ್ಆರ್ಟಿಸಿ ಹೊಸ ಮಾರ್ಗಸೂಚಿ ((KSRTC New Guidelines) )ಪ್ರಕಟಿಸಿದೆ. ಕೋವಿಡ್‌ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜನರ … Continued

ದೀರ್ಘ ಕಾಲದ ತನ್ನ ಸಹಚರ ನವಿಲಿನ ಮರಣದ ನಂತರವೂ ಅದನ್ನು ಬಿಟ್ಟುಬರಲು ಒಪ್ಪದ ಮತ್ತೊಂದು ನವಿಲು…! ಹೃದಯಸ್ಪರ್ಶಿ ದೃಶ್ಯ ವಿಡಿಯೊದಲ್ಲಿ ಸೆರೆ | ವೀಕ್ಷಿಸಿ

ಸಾವು ಮನುಷ್ಯರಿಗೆ, ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಯಾರಿಗೇ ಆದರೂ ಅತ್ಯಂತ ನೋವಿನ ಸಂಗತಿಯಾಗಿದೆ. ಪ್ರಪಂಚದ ಹೆಚ್ಚಿನ ಜೀವಿಗಳು ಮನುಷ್ಯರಂತೆ ನೋವನ್ನು ಅನುಭವಿಸುತ್ತವೆ ಎಂದು ಹಲವಾರು ನಿದರ್ಶನಗಳು ತೋರಿಸುತ್ತವೆ. ಈಗ ಅಂಥದ್ದೇ ಒಂದು ನಿದರ್ಶನದ ವಿಡಿಯೊವೊಂದನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇದು ಮಾನವರಿಗೆ ಸಂಬಂಧಪಟ್ಟ ವಿಡಿಯೊವಲ್ಲ, ಬದಲಿಗೆ ನವಿಲೊಂದು ತನ್ನ ಸಹಚರ ನವಿಲನ್ನು ಕಳೆದುಕೊಂಡಾಗ ಹೇಗೆ ಮಮ್ಮಲ … Continued

ವೈದ್ಯರು-ವೈದ್ಯಕೀಯ ಸಿಬ್ಬಂದಿಯಲ್ಲೂ ಹೆಚ್ಚುತ್ತಿರುವ ಕೊರೊನಾ ಸೋಂಕು

ನವದೆಹಲಿ: ಭಾರತದಲ್ಲಿ ಕೋವಿಡ್‌ ಮೂರನೇ ಅಲೆ ಆರಂಭವಾಗಿದ್ದು, ಆರಂಭದಲ್ಲಿಯೇ ಅದು ಎರಡನೇ ಅಲೆಯನ್ನೂ ಮೀರಿಸುವ ವೇಗದಲ್ಲಿ ಹರಡುತ್ತಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಎರಡನೇ ಅಲೆಗೆ ಹೋಲಿಸಿದರೆ ಕಡಿಮೆಯಿದ್ದರೂ ಹರಡುವ ವೇಗ ಮೂರ್ನಾಲ್ಕು ಪಟ್ಟು ಹೆಚ್ಚಿದೆ. ಈಗ ವೈದ್ಯರಲ್ಲಿಯೂ ಸೋಂಕಿಗೆ ಕಾರಣವಾಗಿದೆ, ಹಾಗೂ ದಿನದಿಂದ ದಿನಕ್ಕೆ ವೈದ್ಯ ವಲಯ ಹಾಗೂ ಆರೋಗ್ಯ ಸಿಬ್ಬಂದಿಯಲ್ಲಿಯೂ ವ್ಯಾಪಿಸುತ್ತಿದೆ. ಮುಂಬೈನ ಸಿಯಾನ್ … Continued