100ಕ್ಕೂ ಹೆಚ್ಚು ನೆಲಬಾಂಬ್, ಸ್ಫೋಟಕ ಪತ್ತೆ ಹಚ್ಚಿದ ಅಪರೂಪದ ಇಲಿ ಸಾವು

ನೊಮ್ ಪೆನ್: ಐದು ವರ್ಷಗಳ ವೃತ್ತಿಜೀವನದಲ್ಲಿ 100ಕ್ಕೂ ಹೆಚ್ಚು ನೆಲಬಾಂಬುಗಳು ಮತ್ತು ಸ್ಫೋಟಕಗಳನ್ನು ಪತ್ತೆ ಹಚ್ಚಿದ್ದ ಆಗ್ನೇಯ ಏಷ್ಯಾದ ರಾಷ್ಟ್ರದಲ್ಲಿ ತನ್ನ ಛಾಪು ಮೂಡಿಸಿದ್ದ ಕಾಂಬೋಡಿಯಾದ ನೆಲಬಾಂಬ್ ತಜ್ಞ ಇಲಿ ಮಗವಾ ತನ್ನ 8ನೇ ವಯಸ್ಸಿನಲ್ಲಿ ನಿಧನ ಹೊಂದಿದೆ. ವಾರಾಂತ್ಯದಲ್ಲಿ ಮರಣ ಹೊಂದಿದ ಮಗವಾ, ಅಂತಾರಾಷ್ಟ್ರೀಯ ಚಾರಿಟಿ ಅಪೊಪೊ (APOPO) ನಿಂದ ನಿಯೋಜಿಸಲಾದ ಅತ್ಯಂತ ಯಶಸ್ವಿ … Continued

ಕರ್ನಾಟಕ ಸೇರಿ 8 ರಾಜ್ಯಗಳ‌ ಕೋವಿಡ್ ಸೋಂಕು ಹೆಚ್ಚಳ: ಕೇಂದ್ರ ಕಳವಳ

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ 8 ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದಕ್ಕೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಕರ್ನಾಟಕ, ಮಹಾರಾಷ್ಟ್ರ, ಪಶ್ವಿಮ ಬಂಗಾಳ, ದೆಹಲಿ, ತಮಿಳುನಾಡು, ಉತ್ತರ ಪ್ರದೇಶ, ಕೇರಳ ಮತ್ತು ಗುಜರಾತಿನಲ್ಲಿ ಸೋಂಕು ಹೆಚ್ಚಳ ಆತಂಕಕಾರಿ ಬೆಳವಣಿಗೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ‌ … Continued

ರಾಕೆಟ್ ವಿಜ್ಞಾನಿ ಎಸ್.ಸೋಮನಾಥ ಇಸ್ರೋದ ನೂತನ ಅಧ್ಯಕ್ಷ

ಬೆಂಗಳೂರು: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ನೂತನ ಅಧ್ಯಕ್ಷರಾಗಿ ರಾಕೆಟ್ ವಿಜ್ಞಾನಿ ಎಸ್.ಸೋಮನಾಥ ನೇಮಕವಾಗಿದ್ದಾರೆ. ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಅವರ ಸ್ಥಾನಕ್ಕೆ ಹಿರಿಯ ವಿಜ್ಞಾನಿ ಎಸ್.ಸೋಮನಾಥ ನೇಮಕಗೊಂಡಿದ್ದಾರೆ. ಇಸ್ರೋ ಅಧ್ಯಕ್ಷರಾಗಿರುವುದರ ಜೊತೆಗೆ, ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದಾರೆ. … Continued

ಹೈಕೋರ್ಟ್‌ ತರಾಟೆ ನಂತರ ಮೇಕುದಾಟು ಪಾದಯಾತ್ರೆ ನಿರ್ಬಂಧಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಕಾಂಗ್ರೆಸ್ಸಿನ ಮೇಕೆದಾಟು ಪಾದಯಾತ್ರೆಗೆ ನಿರ್ಬಂಧಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು, ತಕ್ಷಣ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ ಆದೇಶ ಹೊರಡಿಸಿದ್ದು, ಈ ಕೂಡಲೇ ಪಾದಯಾತ್ರೆಯನ್ನು ನಿಲ್ಲಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿ ಆದೇಶ ಹೊರಡಿಸಿದೆ. ಹೈಕೋರ್ಟ್ ಆದೇಶದ ಬೆನ್ನಲ್ಲೇ ಸರ್ಕಾರ ಈ ಆದೇಶ ಹೊರಡಿಸಿದೆ. ಪಾದಯಾತ್ರೆಯ ವಾಹನ … Continued

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಕುಮಟಾದ ಡಾ.ಜಿ.ಎಲ್. ಹೆಗಡೆ ನೇಮಕ

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರನ್ನಾಗಿ ಉತ್ತರ ಕನ್ನಡ ಜಿಲ್ಲೆಯ  ಡಾ.ಜಿ.ಎಲ್.ಹೆಗಡೆ ಅವರನ್ನು ನೇಮಕ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎ.ಹೆಗಡೆ ನಿಧನ ಹಿನ್ನೆಲೆಯಲ್ಲಿ ತೆರವಾಗಿತ್ತು. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅಧಿಸೂಚನೆ ಹೊರಡಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿನ ಕರ್ನಾಟಕ … Continued

ಕರ್ನಾಟಕದಲ್ಲಿ ಬುಧವಾರ 21 ಸಾವಿರಕ್ಕೂ ಹೆಚ್ಚು ದೈನಂದಿನ ಕೊರೊನಾ ಸೋಂಕು, ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಳ..!

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು, ಬುಧವಾರ (ಕಳೆದ 24 ಗಂಟೆ) 21,390 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದೇವೇಳೆ ರಾಜ್ಯದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಹಾಗೂ 1,541 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಪ್ರತಿ ಜಿಲ್ಲೆಗಳಲ್ಲೂ ಕೂಡ ಕೊರೊನಾ ಪಾಸಿಟಿವ್ ಪ್ರಕರಣಗಳು ಏರಿಕೆ ಕಾಣುತ್ತಿದೆ. ಇಂದು ಬೆಂಗಳೂರು … Continued

ನಾಳೆಯಿಂದ ಧಾರವಾಡ ನಗರ-ಗ್ರಾಮೀಣ, ಹುಬ್ಬಳ್ಳಿ ನಗರ-ಗ್ರಾಮೀಣ ತಾಲೂಕಿನಾದ್ಯಂತ 1-8ರ ವರೆಗಿನ ಭೌತಿಕ ತರಗತಿ ಬಂದ್: ಜಿಲ್ಲಾಧಿಕಾರಿ ಆದೇಶ

ಧಾರವಾಡ : ಧಾರವಾಡ ಜಿಲ್ಲೆಯಾದ್ಯಂತ ಕೋವಿಡ್-19 ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿಜಿಲ್ಲೆಯ ಧಾರವಾಡ ನಗರ ಮತ್ತು ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ತಾಲೂಕಿನಾದ್ಯಂತ ಭೌತಿಕ ತರಗತಿಗಳು, ವಸತಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳನ್ನೊಳಗೊಂಡು ಎಲ್ಲಾ ಮಾಧ್ಯಮದ 1 ರಿಂದ 8ನೇ ತರಗತಿವರೆಗಿನ ಶಾಲೆಗಳನ್ನು ನಾಳೆ ಜ.13 ರಿಂದ ಮುಂದಿನ ಆದೇಶದ ವರೆಗೆ … Continued

7 ವರ್ಷಗಳ ಹಿಂದಿನ ಪ್ರಕರಣದಲ್ಲಿ ಉತ್ತರ ಪ್ರದೇಶ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಬಂಧನ ವಾರಂಟ್ ಜಾರಿ

ನವದೆಹಲಿ: ಉತ್ತರ ಪ್ರದೇಶದಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೊರೆದ ನಂತರ, ಏಳು ವರ್ಷಗಳ ಹಿಂದಿನ ಪ್ರಕರಣದಲ್ಲಿ ಅವರ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ. ಸುಲ್ತಾನ್‌ಪುರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಂಧನದ ವಾರಂಟ್‌ ಹೊರಡಿಸಿದ್ದು, ಈ ಬಂಧನ ವಾರಂಟ್ 2014 ರ ಪ್ರಕರಣಕ್ಕೆ ಸಂಬಂಧಿಸಿದೆ, ಆಗ ಅವರು ಬಹುಜನ … Continued

ಕೋವಿಡ್ -19:ಓಮಿಕ್ರಾನ್- ಡೆಲ್ಟಾ ವಿರುದ್ಧ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್‌ ಪರಿಣಾಮಕಾರಿಯಾಗಿ ಕೆಲಸ-ಭಾರತ್ ಬಯೋಟೆಕ್

ನವದೆಹಲಿ: ಕೋವ್ಯಾಕ್ಸಿನ್‌ನ ಬೂಸ್ಟರ್ ಡೋಸ್ ಲೈವ್ ವೈರಸ್ಸಿನ ತಟಸ್ಥ ಅಸ್ಸೇಯನ್ನು ಬಳಸಿಕೊಂಡು ಓಮಿಕ್ರಾನ್ (ಬಿ.1.529) ಮತ್ತು ಡೆಲ್ಟಾ (ಬಿ.1.617.2) ಎರಡರ ವಿರುದ್ಧವೂ ದೃಢವಾದ ತಟಸ್ಥಗೊಳಿಸುವ ಪ್ರತಿಕಾಯ ಪ್ರತಿಕ್ರಿಯೆಗಳನ್ನು ಸೃಷ್ಟಿಸಿದೆ ಎಂದು ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್ ಹೇಳಿದೆ. ಪರೀಕ್ಷಾ ಫಲಿತಾಂಶಗಳು 100%ರಷ್ಟು ಸೀರಮ್ ಮಾದರಿಗಳು ಡೆಲ್ಟಾ ರೂಪಾಂತರದ ತಟಸ್ಥೀಕರಣವನ್ನು ತೋರಿಸಿದೆ ಮತ್ತು 90% ಕ್ಕಿಂತ … Continued

ತೆಲಂಗಾಣ ನೇಕಾರನ ಕೈಚಳಕ.. ಬೆಂಕಿಕಡ್ಡಿ ಪೆಟ್ಟಿಗೆಯೊಳಗೆ ತುಂಬುವ ಸೀರೆ ತಯಾರಾಯ್ತು..!

ಹೈದರಾಬಾದ್: ತೆಲಂಗಾಣದ ಕೈಮಗ್ಗ ನೇಕಾರರೊಬ್ಬರು ಮೂಲಕಬೆಂಕಿಕಡ್ಡಿ ಪೆಟ್ಟಿಗೆಯೊಳಗೆ ತುಂಬಬಹುದಾದ ಹೊಂದುವ ಸೀರೆ ನೇಯ್ದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಪತ್ನಿ ಮಿಚೆಲ್ ಒಬಾಮ ಅವರಿಗೆ 2015ರಲ್ಲಿ ಬೆಂಕಿಕಡ್ಡಿ ಪೆಟ್ಟಿಗೆಯಲ್ಲಿ ಹಾಕಬಹುದಾದ ಶಾಲು ಮತ್ತು ಸೀರೆಯನ್ನು ಉಡುಗೊರೆಯಾಗಿ ನೀಡಿ ಖ್ಯಾತಿ ಗಳಿಸಿದ್ದ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಸಿರಿಸಿಲ್ಲಾದ ಪ್ರಮುಖ ನೇಕಾರ … Continued