ಗೋವಾ ಚುನಾವಣೆ: ಬಿಜೆಪಿ ಕಡೆಗಣನೆ, ಆದ್ರೆ ಪಣಜಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದ ಉತ್ಪಲ್ ಪರಿಕ್ಕರ್

ಪಣಜಿ: ಗೋವಾದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಇಂದು, ಗುರುವಾರ ತನ್ನ 34 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಉತ್ಪಲ್ ಪರಿಕ್ಕರ್ ಹೆಸರು ಕಾಣೆಯಾಗಿದೆ. ಉತ್ಪಲ್ ಗೋವಾ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಪುತ್ರ. ಉತ್ಪಲ್ ಅವರು 1994 ರಿಂದ ವಿಧಾನಸಭೆಯಲ್ಲಿ ತಮ್ಮ ತಂದೆ ಪ್ರತಿನಿಧಿಸುವ ಪಣಜಿಯಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದರು. ಆದಾಗ್ಯೂ, … Continued

ಲಸಿಕೆಯಿಂದಾಗಿ ಕೋವಿಡ್ ಮೂರನೇ ಅಲೆಯಲ್ಲಿ ಸಾವುಗಳು ಕಡಿಮೆ: ಕೇಂದ್ರ

ನವದೆಹಲಿ: ಕೋವಿಡ್ ವ್ಯಾಕ್ಸಿನೇಷನ್‌ಗಳಿಗೆ ಒತ್ತು ನೀಡಿದ ಕೇಂದ್ರವು ಗುರುವಾರ ಸಾವಿನ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಿದೆ ಎಂದು ಹೇಳಿದೆ. ಕೋವಿಡ್ 19ರ ಈ ಮೂರನೇ ಉಲ್ಬಣದಲ್ಲಿ, ಹೆಚ್ಚಿನ ವ್ಯಾಕ್ಸಿನೇಷನ್ ಸೇವನೆಯಿಂದ ಕೇಂದ್ರವು ತೀವ್ರವಾದ ಅನಾರೋಗ್ಯ ಮತ್ತು ಸಾವುಗಳಿಗೆ ಕಾರಣವಾಗಿಲ್ಲ ಎಂದು ಅದು ಹೇಳಿದೆ. ಲಸಿಕೆ ಬಗ್ಗೆ ಮಾಹಿತಿ ನೀಡಿದ ಡಿಜಿ ಐಸಿಎಂಆರ್ ಡಾ ಬಲರಾಮ್ ಭಾರ್ಗವ, … Continued

ಗೋವಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಮನೋಹರ್ ಪರಿಕ್ಕರ್ ಪುತ್ರನ ಹೆಸರಿಲ್ಲ..!

ಪಣಜಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಗುರುವಾರ (ಜನವರಿ 20, 2022) ಮುಂಬರುವ ಗೋವಾ ವಿಧಾನಸಭೆ ಚುನಾವಣೆ 2022ಕ್ಕೆ ತನ್ನ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಕ್ಷದ ದೆಹಲಿ ಕೇಂದ್ರ ಕಚೇರಿಯಲ್ಲಿ ರಾಜ್ಯದ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು 34 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದಾರೆ. ಗೋವಾ … Continued

ಡಾ.ಚನ್ನವೀರ ಕಣವಿಗೆ ವೆಂಟಿಲೇಟರ್‌ ಅಳವಡಿಕೆ

ಧಾರವಾಡ: ಹಿರಿಯ ಕವಿ ಡಾ. ಚೆನ್ನವೀರ ಕಣವಿ ಅವರ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾದ ಹಿನ್ನೆಲೆಯಲ್ಲಿ ಅವರಿಗೆ ಗುರುವಾರ ವೆಂಟಿಲೇಟರ್ ಅಳವಡಿಸಲಾಗಿದೆ. ಈ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಎಸ್‌ಡಿಎಂ ಆಸ್ಪತ್ರೆ , ಚಿಕಿತ್ಸೆಗೆ ಸ್ಪಂದಿಸದಿದ್ದಲ್ಲಿ ಡಯಾಲಿಸಿಸ್‌ ಅಗತ್ಯವಿದೆ. ಉಳಿದಂತೆ ಎಲ್ಲ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಿದೆ.

ಚಾಲಕರು ಮಾಡುತ್ತಿರುವ ಜನಸಾಮಾನ್ಯರ ಸೇವೆಗೆ ಬೆಲೆಕಟ್ಟಲಾಗದು: ಡಾ.ಅಜಿತ ಪ್ರಸಾದ

ಧಾರವಾಡ: ಜನಸಾಮಾನ್ಯರ ಮತ್ತು ಪ್ರತಿಯೊಬ್ಬರ ಜೀವನದ ರಥ ಎಂದೇ ಕರೆಯಲ್ಪಡುವ ಚಾಲಕರ ಮಹತ್ವ ಅರಿಯಬೇಕು. ಹಾಗೆಯೇ ಈ ಚಾಲಕರು ಮಾಡುತ್ತಿರುವ ಜನಸಾಮಾನ್ಯರ ಸೇವೆಗೆ ಬೆಲೆಕಟ್ಟಲಾಗದು .ಅದೇರೀತಿ ಪ್ರಯೋಗಾಲಯದಲ್ಲಿ ಕಾರ್ಯಮಾಡುವವರ ಸೇವೆಯು ಅಷ್ಟೇ ಮಹತ್ವದ್ದು ಎಂದು ಜೆ.ಎಸ್.ಎಸ್ ನ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹೇಳಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ೧೦೦ ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಭಾರತೀಯ … Continued

ನಲಪಾಡ್ ಹಲ್ಲೆ ಮಾಡಿದ್ದಾರೆಂಬುದು ಕಪೋಕಲ್ಪಿತ ಸುದ್ದಿ: ಈಶ್ವರ ಖಂಡ್ರೆ

ಬೆಂಗಳೂರು : ಸಿದ್ದು ಹಳ್ಳೇಗೌಡ ಮೇಲೆ ನಲಪಾಡ್ ಹಲ್ಲೆ ಆರೋಪಕ್ಕೆ ಸಂಬಂಧಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿಕೆ ನೀಡಿದ್ದಾರೆ.ಅವರು ಇದೊಂದು ಕಪೋಕಲ್ಪಿತ ಸುದ್ದಿ, ಇದರಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ. ನಲಪಾಡ್ ಯಾರ ಮೇಲೂ ಹಲ್ಲೆ ಮಾಡಿಲ್ಲ, ಹಲ್ಲೆ ಸಂಬಂಧ ಯಾರಾದಾರೂ ದೂರು ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ ಅವರು, ನಾನು ಅಲ್ಲಿಗೆ ಹೋಗಿಯೇ ಇಲ್ಲ ಎಂದು … Continued

ಕೊಟ್ಟ ಸಾಲ ವಾಪಸ್​ ಕೇಳಿದ್ದಕ್ಕೆ ಮಹಿಳೆಗೆ ಗುಂಡು ಹೊಡೆದ ಕೊಲೆ: ಸಂಕೇಶ್ವರ ಪುರಸಭೆ ಬಿಜೆಪಿ ಸದಸ್ಯನ ಬಂಧನ

ಬೆಳಗಾವಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಮಹಿಳೆ ಮೇಲೆ ಶೂಟೌಟ್ ನಡೆಸಿದ ಪ್ರಕರಣವನ್ನು ಸಂಕೇಶ್ವರ ಪೊಲೀಸರು ಭೇದಿಸಿದ್ದು, ಈ ಸಂಬಂಧ ಬಿಜೆಪಿ ಪುರಸಭೆ ಸದಸ್ಯನನ್ನು ಬಂಧಿಸಿದ್ದಾರೆ. ಸಂಕೇಶ್ವರ ವಾರ್ಡ ನಂಬರ್ 14ರ ಬಿಜೆಪಿ ಪುರಸಭೆ ಸದಸ್ಯ ಉಮೇಶ ಕಾಂಬಳೆ ಬಂಧಿತ ಆರೋಪಿ. ಜನವರಿ 16ರಂದು ನಾಡ ಪಿಸ್ತೂಲಿ​ನಿಂದ ಶೈಲಾ ನಿರಂಜನ‌ ಸುಭೇದಾರ (56) ಎಂಬ ಮಹಿಳೆಯನ್ನು … Continued

ವಿಕಲಚೇತನರ ಹೊಸ/ನವೀಕರಣ ರಿಯಾಯಿತಿ ಬಸ್ ಪಾಸ್‌ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

ಹುಬ್ಬಳ್ಳಿ: 2022 ನೇ ಸಾಲಿನ ವಿಕಲಚೇತನರ ಹೊಸ/ನವೀಕರಣ ರಿಯಾಯಿತಿ ಬಸ್ ಪಾಸ್‌ಗಳನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಪಡೆಯಲು ಸೇವಾ ಸಿಂಧು ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜನವರಿ 19ರಿಂದ ಪ್ರಾರಂಭವಾಗಿದೆ. ವಿಕಲಚೇತನರ ಹೊಸ/ನವೀಕರಣ ಪಾಸ್‌ಗಳನ್ನು ಪಡೆಯಲು ಸೇವಾ ಸಿಂಧು ಆನ್‌ಲೈನ್ ಪೋರ್ಟಲ್‌ನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಂಬಂಧಪಟ್ಟ ವಿಭಾಗ … Continued

ಸವಾಲು ಹಾಕಿ, ಸ್ವಯಂ ಪ್ರೇರಿತವಾಗಿ ತಾನೇ ಕೋವಿಡ್‌ ವೈರಸ್‌ ಅಂಟಿಸಿಕೊಂಡಿದ್ದ ಗಾಯಕಿ ಹನಾ ಹೊರ್ಕಾ ಸಾವು..!

ಕೋವಿಡ್ ವೈರಸ್‌ ಅನ್ನು ಸ್ವಯಂ ಪ್ರೇರಿತವಾಗಿ ಕೊರೊನಾ ಅಂಟಿಸಿಕೊಂಡ ನಂತರ ಲಸಿಕಾ ವಿರೋಧಿ ಜೆಕ್ ಜನಪದ ಗಾಯಕಿ ಹನಾ ಹೊರ್ಕಾ ಸಾವಿಗೀಡಾಗಿದ್ದಾರೆ ಅಸೋನಾನ್ಸ್ ಬ್ಯಾಂಡ್‌ಗೆ ಗಾಯಕರಾಗಿದ್ದ ಹನಾ ಹೊರ್ಕಾ ತಮ್ಮ 57 ನೇ ವಯಸ್ಸಿನಲ್ಲಿ ನಿಧನರಾದರು ಕಳೆದ ವರ್ಷದ ಕ್ರಿಸ್‌ಮಸ್‌ಗೂ ಮುನ್ನ ಈಕೆಯ ಪತಿ ಹಾಗೂ ಪುತ್ರ ಲಸಿಕೆ ಹಾಕಿಸಿಕೊಂಡಾಗ ಇದನ್ನು ಹನಾ ತೀವ್ರವಾಗಿ ವಿರೋಧಿಸಿದ್ದರು. … Continued

ಮುಗಿಯದ ಯೂತ್ ಕಾಂಗ್ರೆಸ್‌ ಗಲಾಟೆ: ನಲಪಾಡ್ ವಿರುದ್ಧ ಕೇಳಿಬಂದ ಹಲ್ಲೆ ಆರೋಪ

ಬೆಂಗಳೂರು: ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಅವರು ವಿರುದ್ಧ ಈಗ ಬಳ್ಳಾರಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಹಾಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿರುವ ರಕ್ಷಾ ರಾಮಯ್ಯ ಅಧಿಕಾರವು ಜನವರಿ 30 ರಂದು ಮುಕ್ತಾಯವಾಗಲಿದೆ. ನಂತರ ಅಧ್ಯಕ್ಷ ಸ್ಥಾನ ನಲಪಾಡ್ … Continued