ಗೋವಾ- ಶೇ. 53 ಮರಣ ಲಸಿಕೆ ಪಡೆಯದವರು

ಪಣಜಿ: ಗೋವಾ ರಾಜ್ಯದಲ್ಲಿ ಮೂರನೇ ಅಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರಲ್ಲಿ ಶೇ. 53 ಜನರು ಲಸಿಕೆ ಪಡೆದಿರಲಿಲ್ಲ ಎಂದು ಗೋವಾ ಆರೋಗ್ಯ ಇಲಾಖೆ ಹೇಳಿದೆ.
ಮೂರನೇ ಅಲೆಯಲ್ಲಿ ಈ ವರೆಗೆ 91 ಜನರು ಮೃತಪಟ್ಟಿದ್ದು, 49 ಜನರು ಲಸಿಕೆ ಪಡೆಯದವರಾಗಿದ್ದಾರೆ ಎಂದು ಹೇಳಿದೆ. ಎರಡನೇ ಅಲೆಯಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿತ್ತು. ಶೇ. 75 ಜನರು ಲಸಿಕೆ ಪಡೆಯದವರೇ ಮೃತಪಟ್ಟಿದ್ದಾರೆ. ಎರಡನೇ ಅಲೆಯಲ್ಲಿ ಗೋವಾ ರಾಜ್ಯದಲ್ಲಿ 2724 ಜನರು ಮರಣ ಹೊಂದಿದ್ದಾರೆ. ಅವರಲ್ಲಿ 2050 ಜನರು ಲಸಿಕೆಯನ್ನೇ ಪಡೆದಿರಲಿಲ್ಲ. ಮುಜುಗರ, ಹಿಂಜರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ತಪ್ಪು ಮಾಹಿತಿಯೇ ಜನರು ಲಸಿಕೆ ಪಡೆಯದಿರಲು ಕಾರಣ ಎಂದು ಅಲ್ಲಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗೋವಾದಲ್ಲಿ ಜ. 27ರಂದು ಕೋವಿಡ್ ಸೋಂಕಿನಿಂದ 15 ಜನರು ಮೃತಪಟ್ಟಿದ್ದಾರೆ. ಇದು ಮೂರನೇ ಅಲೆಯಲ್ಲಿ ಕಂಡುಬಂದ ಅತಿಗರಿಷ್ಠ ಸಾವು. ಗೋವಾ ರಾಜ್ಯದಲ್ಲಿ ಎರಡನೇ ಅಲೆಯಲ್ಲಿ ಅಂದರೆ 2021 ಮಾರ್ಚ್ 1ರಿಂದ ಡಿಸೆಂಬರ್ 2021ರ ವರೆಗೆ 2724 ಜನರು ಸೋಂಕಿನಿಂದ ಮರಣ ಹೊಂದಿದ್ದಾರೆ. ಅವರಲ್ಲಿ 147 ಜನರು ಮೊದಲ ಡೋಸ್ ಪಡೆದಿದ್ದರು. 67 ಜನರು ಎರಡೂ ಡೋಸ್ ಪಡೆದಿದ್ದರು.
ಗೋವಾದಲ್ಲಿ ಈ ವರೆಗೆ ಶೇ. 98.67 ಜನರಿಗೆ ಕೋವಿಡ್ ಲಸಿಕೆ ಎರಡೂ ಡೋಸ್ ನೀಡಲಾಗಿದೆ. 15-18 ವಯಸ್ಸಿನವರಲ್ಲಿ ಶೇ. 80.32 ಯುವಕರಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಭಾರತವು ನನ್ನ ಅವಿಭಾಜ್ಯ ಭಾಗವಾಗಿದೆ, ನಾನು ಎಲ್ಲಿಗೆ ಹೋದರೂ ಅದನ್ನು ನನ್ನೊಂದಿಗೆ ಒಯ್ಯುತ್ತೇನೆ: ಪದ್ಮಭೂಷಣ ಪುರಸ್ಕಾರ ಸ್ವೀಕರಿಸಿದ ಗೂಗಲ್‌ ಸಿಇಒ ಸುಂದರ್ ಪಿಚೈ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement