ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಶುಭಾಶಯಗಳು

17 ವರ್ಷದ ಪತ್ನಿಯ ಶಿರಚ್ಛೇದ ಮಾಡಿ ಆಕೆಯ ರುಂಡ ಹಿಡಿದು ಜನನಿಬಿಡ ರಸ್ತೆ ತುಂಬ ಓಡಾಡಿದ ಗಂಡ..!

ತೆಹ್ರಾನ್‌: ಕೆಲವೊಂದು ಅಪರಾಧಗಳು ವಿಕೃತಿಯಾಗಿ ಬದಲಾಗುತ್ತದೆ. ಶಿಯಾ ಮುಸ್ಲಿಮರ ಪ್ರಾಬಲ್ಯವಿರುವ ಮಧ್ಯಪ್ರಾಚ್ಯದ ರಾಷ್ಟ್ರವಾದ ಇರಾನ್​ನಲ್ಲಿ ಇಂಥದ್ದೇ ಒಂದು ವಿಕೃತಿಯ ಅತಿರೇಕದ ಘಟನೆ ನಡೆದಿದೆ. ಇಡೀ ಇರಾನನ್ನೇ ಬೆಚ್ಚಿ ಬೀಳಿಸಿದ ಈ ಪ್ರಕರಣದಲ್ಲಿ ತನಗೆ ದ್ರೋಹ ಎಸಗಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಅನುಮಾನಪಟ್ಟು ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಅತ್ಯಂತ ಘೋರವಾದ ರೀತಿಯಲ್ಲಿ ಕೊಂದಿದ್ದಾನೆ.
17 ವರ್ಷದ ತನ್ನ ಹೆಂಡತಿಯನ್ನು ಕೊಲೆ ಮಾಡಿದ ಬಳಿಕ ಅವಳ ತಲೆಯನ್ನು ಕತ್ತರಿಸಿ, ಅದನ್ನು ಕೈಯಲ್ಲಿ ಹಿಡಿದುಕೊಂಡು ಜನನಿಬಿಡ ಬೀದಿಯಲ್ಲಿ ತಿರುಗಾಡಿದ್ದಾನೆ. ಇರಾನ್​ನ ನೈರುತ್ಯ ಭಾಗದ ಅಹ್ವಾಜ್ ಎಂಬ ನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

advertisement

ಮೋನಾ ಹೈದರಿ ಎಂಬ 17 ವರ್ಷದ ಸಣ್ಣ ವಯಸ್ಸಿನ ಯುವತಿ ಕೊಲೆಯಾದವಳು. ಆಕೆಯ ಗಂಡ  ಅವಿರಾಲ್ ಮತ್ತು ಮಾವ ಸೇರಿ ಮೋನಾ ಹೈದರಿಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರನ್ನೂ ಬಂಧಿಸಲಾಗಿದೆ ಎಂದು ಇರಾನ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.
17 ವರ್ಷದ ತನ್ನ ಹೆಂಡತಿ ಬೇರೆಯವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಸಂಶಯಪಟ್ಟು ಆಕೆಯ ಶಿರಚ್ಛೇದ ಮಾಡಿದ ಪತಿ ಅವಿರಾಲ್ ನಂತರ ಆಕೆಯ ತಲೆಯನ್ನು ಹಿಡಿದುಕೊಂಡು ರಸ್ತೆಯಲ್ಲಿ ತಿರುಗಾಡುತ್ತಿರುವ ವಿಡಿಯೋ ಇರಾನಿಯನ್ನರನ್ನು ಬೆಚ್ಚಿಬೀಳಿಸಿದೆ. ಇರಾನಿನ ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳು ಈ ಭೀಕರ ಹತ್ಯೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿವೆ.

ಇರಾನಿನ ಮಾಧ್ಯಮಗಳ ಪ್ರಕಾರ, ಮೋನಾ ಹೈದರಿ ಕೇವಲ 12ನೇ ವಯಸ್ಸಿನಲ್ಲೇ ಈತನನ್ನು ಮದುವೆಯಾಗಿದ್ದಳು. ಆಕೆ ಸಾಯುವಾಗ ಕೇವಲ 17 ವರ್ಷವಾಗಿತ್ತು. ಅಷ್ಟರಲ್ಲೇ ಆಕೆ 3 ವರ್ಷದ ಮಗನನ್ನು ಪಡೆದಿದ್ದಳು. ಇರಾನಿನಲ್ಲಿ ಹುಡುಗಿಯರ ಮದುವೆಯ ವಯಸ್ಸನ್ನು ಕನಿಷ್ಠ 13 ವರ್ಷ ಎಂದು ನಿಗದಿಪಡಿಸಲಾಗಿದೆ.
ಇದೇ ರೀತಿ 2020ರ ಮೇ ತಿಂಗಳಲ್ಲಿ ಬೇರೆ ಜಾತಿಯವನನ್ನು ಪ್ರೀತಿಸಿದ್ದಕ್ಕೆ ಒಬ್ಬ ವ್ಯಕ್ತಿ ತನ್ನ 14 ವರ್ಷದ ಮಗಳ ತಲೆ ಕತ್ತರಿಸಿ, ಮರ್ಯಾದಾ ಹತ್ಯೆ ಮಾಡಿದ್ದ. ಆತನಿಗೆ ಬಳಿಕ 9 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಕೋವಿಡ್‌ ಓಮಿಕ್ರಾನ್ ರೂಪಾಂತರಕ್ಕೆ ಲಸಿಕೆ ಅನುಮೋದಿಸಿದ ಮೊದಲ ದೇಶವಾದ ಬ್ರಿಟನ್‌

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement