ನನ್ನ ನಾಯಿಮರಿಗೂ ಕರೆದುಕೊಂಡು ಬರಲು ಅವಕಾಶ ಕೊಡಿ.. ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಯ ಪರಿಪರಿಯ ಮನವಿ

ನನ್ನ ಮಲಿಬುವನ್ನು ಬಿಟ್ಟು ನಾನು ಎಲ್ಲೂ ಬರುವುದಿಲ್ಲ, ದಯವಿಟ್ಟು ನನ್ನೊಂದಿಗೆ ಅವನನ್ನೂ ಕರೆದುಕೊಂಡು ಬರಲು ಅವಕಾಶ ಕೊಡಿ…’
ಉಕ್ರೇನ್‌ನ ಬಂಕರ್‌ನಲ್ಲಿ ಭಾರತೀಯ ವಿದ್ಯಾರ್ಥಿ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಖಾರ್ಕಿವ್‌ನಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿ ಹೆಸರು ರಿಷಬ್‌ ಕೌಶಿಕ್‌.
ಈ ವಿದ್ಯಾರ್ಥಿ ತನ್ನ ಸಹಪಾಠಿಗಳೆಲ್ಲ ಏರ್‌ಇಂಡಿಯಾ ವಿಮಾನಗಳನ್ನು ಹತ್ತಿ ಭಾರತಕ್ಕೆ ಮರಳುತ್ತಿದ್ದರೆ, ತಾನು ಮಾತ್ರ ಬಂಕರ್‌ನಲ್ಲಿ ಬರುವುದಿಲ್ಲ ಎಂದು ಹಠ ಹಿಡಿದುಕುಳಿತಿದ್ದಾರೆ. ಆತ ಬರುವುದಾದರೆ ಆತನ ಮಲಿಬುಗೆ ವಿಮಾನ ಹತ್ತಲು ಅವಕಾಶ ನೀಡಬೇಕಂತೆ. ಈ ಮಲಿಬು ಈ ವಿದ್ಯಾರ್ಥಿಯ ಸಾಕು ನಾಯಿಮರಿ.
ಪುಟ್ಟ ನಾಯಿಮರಿಯನ್ನು ತನ್ನೊಂದಿಗೆ ಭಾರತಕ್ಕೆ ಕರೆತರುವ ಸಲುವಾಗಿ ಆಡಳಿತಕ್ಕೆ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ ಅದಕ್ಕೆ ಬೇಕಾದ ಎಲ್ಲ ಕಾಗದಪತ್ರಗಳನ್ನೂ ಸಿದ್ಧಪಡಿಸಿಕೊಳ್ಳುತ್ತಿದ್ದಾರಂತೆ. ಬಂಕರ್‌ನೊಳಗೆ ವಿಪರೀತ ಚಳಿಯಿರುವ ಕಾರಣ ನಾಯಿಮರಿಗೆ ಇರಲು ಬಹಳ ಕಷ್ಟವಾಗುತ್ತಿದೆ. ಹೀಗಾಗಿ, ಅದನ್ನು ಬೆಚ್ಚಗಿರಿಸಲು ಒಮ್ಮೊಮ್ಮೆ ಬಂಕರ್‌ನಿಂದ ಹೊರಬರುತ್ತಿದ್ದೇನೆ. ಸ್ಫೋಟದ ಸದ್ದಿನಿಂದ ಮಲಿಬು ಇಡೀ ದಿನ ಬೊಗಳುತ್ತಿರುತ್ತಾನೆ ಎಂದು ಕೌಶಿಕ್‌ ಹೇಳಿದ್ದಾನೆ. ದಯವಿಟ್ಟು ನನಗೆ ನನ್ನ ನಾಯಿಮರಿಯನ್ನು ಭಾರತಕ್ಕೆ ಒಯ್ಯಲು ಸಹಾಯ ಮಾಡಿ ಎಂದು ಕಂಕಂಡವರಲ್ಲಿ ವಿನಂತಿಸಿಕೊಳ್ಳುತ್ತಿದ್ದಾನೆ.

ಓದಿರಿ :-   ತುಂಟ ಮಹಿಳೆಯರನ್ನು ಮನೆಯಲ್ಲಿ ಇರಿಸ್ತೇವೆ, 'ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನೂ ಕೊಡ್ತೇವೆ ಎಂದು ಭರವಸೆ ನೀಡಿದ ತಾಲಿಬಾನ್‌

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ